Saturday, April 19, 2025
Google search engine

Homeರಾಜ್ಯಪ್ರಧಾನಿ ನರೇಂದ್ರ ಮೋದಿಯಿಂದ ಕೀಳುಮಟ್ಟದ ಭಾಷಣ: ಬಿ.ಕೆ ಹರಿಪ್ರಸಾದ್

ಪ್ರಧಾನಿ ನರೇಂದ್ರ ಮೋದಿಯಿಂದ ಕೀಳುಮಟ್ಟದ ಭಾಷಣ: ಬಿ.ಕೆ ಹರಿಪ್ರಸಾದ್

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಭಾಷಣದಲ್ಲಿ ಎಲ್ಲಿಯೂ ದೇಶಕ್ಕೆ ಮುಂದೆ ಏನು ಮಾಡಲಿದ್ದೇವೆ ಎಂದು ಹೇಳಿಲ್ಲ. ಮಣಿಪುರದ ಬಗ್ಗೆ , ಚೀನಾ ಅತಿಕ್ರಮಣದ ಬಗ್ಗೆ ಅವರು ಮಾತನಾಡಿಲ್ಲ. ದೇಶದ ಯಾವುದೇ ಪ್ರಧಾನಿ ಇಷ್ಟೊಂದು ಕೀಳುಮಟ್ಟದ ಭಾಷಣ ಮಾಡಿದ್ದನ್ನು ನಾನು ನೋಡಿಲ್ಲ ಎಂದು ಎಐಸಿಸಿ ಕಾರ್ಯಕಾರಿ ಸಮಿತಿ ಸದಸ್ಯ ಬಿ.ಕೆ ಹರಿಪ್ರಸಾದ್ ಹೇಳಿದ್ದಾರೆ.

ಇಂದು ಬುಧುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತು ಪರಿಸ್ಥಿತಿಯ ಬಗ್ಗೆ ನರೇಂದ್ರ ಮೋದಿ ಅವರು ನೀಡಿರುವ ಹೇಳಿಕೆಗಳು ರಾಜಕೀಯ ಪ್ರೇರಿತವಾಗಿವೆ. ತುರ್ತು ಪರಿಸ್ಥಿತಿಯನ್ನು ಸಂವಿಧಾನದ ೩೫೨ನೇ ಆರ್ಟಿಕಲ್‌ನ ಅನುಸಾರ ಜಾರಿ ಮಾಡಲಾಗಿತ್ತು. ದೇಶಕ್ಕೆ ಹೊರ ದೇಶಗಳಿಂದ ಆಕ್ರಮಣಶೀಲತೆ ಹಾಗೂ ಆಂತರಿಕ ಗಲಭೆಗಳು ಸೃಷ್ಟಿಯಾದ ಸಂದರ್ಭದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರುವುದಕ್ಕೆ ಅವಕಾಶ ಇದೆ ಎಂದು ಸಂವಿಧಾನದಲ್ಲಿ ಉಲ್ಲೇಖಿಸಲಾಗಿದೆ. ಅದನ್ನೇ ಜಾರಿ ಮಾಡಲಾಗಿತ್ತು ಎಂದರು.

ತುರ್ತು ಪರಿಸ್ಥಿತಿ ಸಂವಿಧಾನಕ್ಕೆ ವಿರುದ್ಧ ಇರಲಿಲ್ಲ. ರಾಷ್ಟ್ರ ವಿರೋಧ ನೀತಿಯನ್ನು ಅಡಗಿಸುವ ಉದ್ದೇಶದಿಂದ ತುರ್ತು ಪರಿಸ್ಥಿತಿ ಹೇರಲಾಗಿತ್ತು. ತುರ್ತು ಪರಿಸ್ಥಿತಿಯಲ್ಲಿ ಯಾವುದೇ ಮುಖ್ಯಮಂತ್ರಿಗಳನ್ನು ಜೈಲಿಗೆ ಕಳುಹಿಸಿರಲಿಲ್ಲ. ರಾಷ್ಟ್ರ ವಿರೋಧ ಶಕ್ತಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ತುರ್ತು ಪರಿಸ್ಥಿತಿ ಜಾರಿ ಮಾಡಲಾಗಿತ್ತು. ಇನ್ನು ಮೋದಿ ಅವರು ಸಂಸತ್ ಭಾಷಣದಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರನ್ನು ಅವಮಾನಿಸಿದ್ದಾರೆ. ರಾಹುಲ್‌ಗೆ ಬಾಲಬುದ್ಧಿ, ಬಚ್ಚಾ (ಮಗು) ಎನ್ನುವ ಪದಗಳನ್ನು ಬಳಸಿದ್ದಾರೆ. ಈ ಮೂಲಕ ಮಕ್ಕಳನ್ನು ಅವಮಾನಿಸಿದ್ದಾರೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular