ವರದಿ :ಸ್ಟೀಫನ್ ಜೇಮ್ಸ್.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ 2025 – 28 ನೇ ಸಾಲಿನ ಚುನಾವಣೆಗೆ ರಾಜ್ಯ ಕಾರ್ಯದರ್ಶಿ ಸ್ಥಾನಕ್ಕೆ ಶುಕ್ರವಾರ ಸಹಾಯಕ ಚುನಾವಣಾಧಿಕಾರಿ ಕೆ.ಆರ್. ದೇವರಾಜ್ ರವರಿಗೆ ನಾಮಪತ್ರವನ್ನು ಎಂ.ಆರ್. ಸತ್ಯನಾರಾಯಣ ಸಲ್ಲಿಸಿದರು. ಇವರೊಂದಿಗೆ ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷರಾದ ಎಸ್. ಟಿ. ರವಿಕುಮಾರ್, ಹಾಲಿ ರಾಜ್ಯ ಸಮಿತಿ ಸದಸ್ಯ ಬಿ.ಆರ್. ರಾಘವೇಂದ್ರ, ಸಿ.ಎಂ. ಕಿರಣ್ ಕುಮಾರ್, ಸುಬ್ರಹ್ಮಣ್ಯ, ಆರ್. ಕೃಷ್ಣ, ಪ್ರಕಾಶ್, ದೇವೇಂದ್ರಪ್ಪ ಕಪನೂರ್ ಉಪಸ್ಥಿತರಿದ್ದರು .



