ಮೈಸೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಆದೇಶದ ಮೇರೆಗೆ ಎಂ.ಸನತ್ ಕುಮಾರ್ ಅವರನ್ನು ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಲಾಗಿದೆ.

ಈ ಹಿನ್ನೆಲೆ ಎಂ.ಸನತ್ ಕುಮಾರ್ ಅವರಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಬೀದಿ ಬದಿ ವ್ಯಾಪಾರಿಗಳ ವಿಭಾಗದ ನಗರಾಧ್ಯಕ್ಷ ಶಿವಲಿಂಗು, ಜಿಲ್ಲಾಧ್ಯಕ್ಷರು ದೊಡ್ಡಮನೆ ಮಂಜಣ್ಣ, ರವಿ ಮಾದೇವಣ್ಣ, ಲಲಿತ್ ಮಾಲ್ ರಸ್ತೆ ಬದಿ ವ್ಯಾಪಾರಸ್ಥರು ಅಭಿನಂದಿಸಿದ್ದಾರೆ.
