ಚಾಮರಾಜನಗರ: ಜಿಲ್ಲಾಧಿಕಾರಿಗಳು ಹಾಗೂ ಚಾಮರಾಜನಗರ ನಗರಸಭೆಯ ಆಡಳಿತಾಧಿಕಾರಿಗಳಾಗಿರುವ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ಮಾರ್ಚ್ ೧ರಂದು ನಿಗದಿಯಾಗಿದ್ದ ಚಾಮರಾಜನಗರ ನಗರಸಭೆಯ ೨೦೨೩-೨೪ನೇ ಸಾಲಿನ ಪರಿಷ್ಕೃತ ಹಾಗೂ ೨೦೨೪-೨೫ನೇ ಸಾಲಿನ ಅಂದಾಜು ಆಯವ್ಯಯ ಸಭೆಯನ್ನು ಮಾರ್ಚ್ ೨ಕ್ಕೆ ಮುಂದೂಡಲಾಗಿದೆ.
ಮಾರ್ಚ್ ೨ರಂದು ಬೆಳಿಗ್ಗೆ ೧೧ ಗಂಟೆಗೆ ನಗರಸಭೆಯ ಕೌನ್ಸಿಲ್ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳು ಹಾಗೂ ಚಾಮರಾಜನಗರ ನಗರಸಭೆಯ ಆಡಳಿತಾಧಿಕಾರಿಗಳಾಗಿರುವ ಶಿಲ್ಪಾ ನಾಗ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ನಗರಸಭೆ ಪೌರಾಯುಕ್ತ ಎಸ್.ವಿ. ರಾಮ್ ದಾಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.