ಮದ್ದೂರು: ಪಟ್ಟಣದ ತಾಲೂಕು ವ್ಯವಸಾಯ ಉತ್ಪನ್ನಗಳ ಮಾರಾಟ ಸಹಕಾರ ಸಂಘದ ಆವರಣದಲ್ಲಿ ನಡೆದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಮಹದೇವು ಉದ್ಘಾಟಿಸಿದರು.
ಬಳಿಕ ಸಭೆಯಲ್ಲಿ ಸಂಘದ ಆದಾಯ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಸರ್ವ ಸದಸ್ಯರಿಗೂ ಪ್ರಭಾರ ಕಾರ್ಯದರ್ಶಿ ಯೋಗಾನಂದ ತಿಳಿಸಿದರು.
ಈ ವೇಳೆ ಮಾತನಾಡಿದ ಹಲವು ಸದಸ್ಯರು ಸಂಘಕ್ಕೆ ಕೂಡಲೇ ನೂತನ ಕಾರ್ಯದರ್ಶಿಯನ್ನು ನೇಮಕ ಮಾಡಿಕೊಳ್ಳಿ ವಿಳಂಬ ಮಾಡಬೇಡಿ ಸಂಘದ ಯಾವುದೇ ಆಸ್ತಿ ನಷ್ಟವಾದರೆ ನ್ಯಾಯಾಲಯದಲ್ಲಿ ಅಧಿಕೃತ ಕಾರ್ಯದರ್ಶಿಗಳ ಮೇಲೆ ದಾವೆ ಊಡ ಬಹುದು ಪ್ರಭಾರಿ ಕಾರ್ಯದರ್ಶಿಗಳ ಮೇಲೆ ಯಾವುದೇ ಕ್ರಮ ಜರುಗಿಸಲು ಆಗುವುದಿಲ್ಲ ಎಂದು ಸಭೆಗೆ ತಿಳಿಸಿದರು.
ಅಧ್ಯಕ್ಷ ಮಹಾದೇವ ಮಾತನಾಡಿ ನೂತನ ಕಾರ್ಯದರ್ಶಿ ನೇಮಕದಿಂದ ಸಂಘಕ್ಕೆ ಒಂಬತ್ತು ಲಕ್ಷಕ್ಕೂ ಅಧಿಕ ನಷ್ಟ ಉಂಟಾಗುತ್ತದೆ ಆದ ಕಾರಣ ನೇಮಕ ವಿಳಂಬವಾಗುತ್ತಿದೆ ಎಂದರು.
ದೇವರಾಜ್ ಮಾತನಾಡಿ ಸಿಬ್ಬಂದಿಗಳು ಸರಿಯಾಗಿ ಕಚೇರಿಗೆ ಬಂದು ಕೆಲಸ ಕಾರ್ಯ ಮಾಡುತ್ತಿದ್ದಾರೆ ಎಂದು ಗಮನಿಸಿ ಕಳೆದ 40 ವರ್ಷಗಳಿಂದಲೂ ಇರುವ ಪದ್ಧತಿಯನ್ನು ಬದಲಾಯಿಸಿ ಬಯೋಮೆಟ್ರಿಕ್ ಹಾಗೂ ಫೇಸ್ ರೇಡಿಂಗ್ ಎಂತಹ ತಂತ್ರಜ್ಞಾನವನ್ನ ಅಳವಡಿಸಿಕೊಂಡು ಸಿಬ್ಬಂದಿಗಳ ಕಳ್ಳಾಟಕ್ಕೆ ಕಡಿವಾಣ ಹಾಕಬೇಕು ಎಂದು ತಿಳಿಸಿದರು.
ಈ ವೇಳೆ ಸಂಘದ ಉಪಾಧ್ಯಕ್ಷ ರಾಘವ, ಸದಸ್ಯರಾದ ಇಂದಿರಾ, ಚಂದ್ರ ನಾಯಕ್, ಹೊನ್ನೇಗೌಡ ಸೇರಿದಂತೆ ಇತರರು ಹಾಜರಿದ್ದರು.