ಮದ್ದೂರು: ಪಟ್ಟಣದ ಹಾಲು ಉತ್ಪಾದಕರ ಸಹಕಾರ ಸಂಘದ ಉಪ ಕಚೇರಿಯಲ್ಲಿ ಹಾಲು ಉತ್ಪಾದಕರ ಸಂಘಗಳ ಫಲಾನುಭವಿಗಳಿಗೆ ಚೆಕ್ ವಿತರಣೆ ಹಾಗೂ ಸದಸ್ಯರು ಮತ್ತು ವಾರಸುದಾರರ ಮರಣ ಹೊಂದಿದ ಹಸುಗಳ ಪರಿಹಾರ ಚೆಕ್ ಗಳನ್ನು ಮನ್ಮುಲ್ ನಿರ್ದೇಶಕಿ ರೂಪ ಹಾಗೂ ಎಸ್ ಪಿ ಸ್ವಾಮಿ ವಿತರಿಸಿದರು.
ಈ ವೇಳೆ ಮಾತನಾಡಿದ ನಿರ್ದೇಶಕಿ ರೂಪ ಉತ್ತಮ ಗುಣಮಟ್ಟದ ಹಾಲನ್ನ ಪೂರೈಕೆ ಮಾಡುವುದರ ಮೂಲಕ ಸಂಸ್ಥೆಯನ್ನ ಉಳಿಸಿ ನೀವು ಕೂಡ ಹೆಚ್ಚಿನ ಲಾಭವನ್ನು ಪಡೆಯಬೇಕೆಂದು ತಿಳಿಸಿದರು.
ಹಾಲು ಕರೆಯುವ ಯಂತ್ರವನ್ನು ನೀವು ಖರೀದಿ ಮಾಡಿದರೆ ಹಾಲು ಉತ್ಪಾದಕರ ಸಹಕಾರ ಸಂಘದ ವತಿಯಿಂದ ಸಬ್ಸಿಡಿಯನ್ನ ನೀಡಲಾಗುತ್ತದೆ.
ಇವುಗಳನ್ನು ಬಳಸಿಕೊಂಡು ಉತ್ತಮ ಗುಣಮಟ್ಟದ ಹಾಲನ್ನ ಪೂರೈಕೆ ಮಾಡಿ ಮುಂದಿನ ದಿನಗಳಲ್ಲಿ ಗ್ರಾಮದಲ್ಲಿ ಹೆಚ್ಚಿನ ಹಸುಗಳಿಗೆ ಯಾವುದೇ ತೊಂದರೆಗಳಿದ್ದರೆ ನಮಗೆ ತಿಳಿಸಿದರೆ ಗ್ರಾಮದಲ್ಲೇ ವೈದ್ಯರನ್ನು ಕರೆತಂದು ಸೂಕ್ತ ಚಿಕಿತ್ಸೆಯನ್ನು ನೀಡುವುದಾಗಿ ಉತ್ಪಾದಕರಿಗೆ ತಿಳಿಸಿದರು.
ಬಳಿಕ ಮಾತನಾಡಿದ ನಿರ್ದೇಶಕ ಎಸ್ ಪಿ ಸ್ವಾಮಿ ಮನ್ಮುಲ್ ನಿಂದ ಎಲ್ಲಾ ರೀತಿಯ ಸೌಲಭ್ಯಗಳನ್ನು ಆಲೂಪೂರಕ್ಕೆ ಮಾಡುವ ರೈತರಿಗೆ ನೀಡಲಾಗಿದ್ದು ಇವುಗಳನ್ನು ಬಳಸಿಕೊಂಡು ಸಂಸ್ಥೆಯ ಅಭಿವೃದ್ಧಿಗೂ ನೀವು ಸಹಿಸಬೇಕೆಂದರು.
ಬಳಿಕ ಫಲಾನುಭವಿಗಳಿಗೆ ಹುಲ್ಲು ಕಟಾವು ಮಾಡುವ ಯಂತ್ರಗಳನ್ನು ವಿತರಿಸಿದರು.
ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಕಟ್ಟಡ ನಿರ್ಮಾಣಕ್ಕೆ ಅನುದಾನ ರಸೂ ವಿಮೆ ಮರಣ ಪರಿಹಾರ ಉತ್ಪಾದಕರ ಸಂಘಗಳ ಫಲಾನುಭವಿಗಳಿಗೆ ಚೆಕ್ ಗಳನ್ನು ವಿತರಿಸಲಾಯಿತು.
ಈ ವೇಳೆ ಉಪ ನಿರ್ದೇಶಕ ದಿವ್ಯಶ್ರೀ, ರತ್ನಮ್ಮ, ಆಫ್ಸರ್ ಸೇರಿದಂತೆ ಇತರರು ಹಾಜರಿದ್ದರು.