ಮದ್ದೂರು: ತಮಿಳುನಾಡಿಗೆ ಕಾವೇರಿ ಹರಿಸಲು ಸಿಡಬ್ಲ್ಯೂಆರ್ ಸಿ ಆದೇಶ ನೀಡಿರುವ ಹಿನ್ನಲೆ ಪ್ರವಾಸಿ ಮಂದಿರ ವೃತ್ತದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ತಡೆದು ಪ್ರತಿಭಟನೆ ರೈತಸಂಘ ಪ್ರತಿಭಟನೆ ನಡೆಸಿದೆ.
ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ವಾಸನ ಸಂಚಾರಕ್ಕೆ ತಡೆಯೊಡ್ಡಿದ್ದು, ರಸ್ತೆಯಲ್ಲಿ ಮಲಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾವೇರಿ ಕೊಳ್ಳದಲ್ಲಿ ನೀರಿನ ಕೊರತೆ ನಡುವೆಯೂ ಅವೈಜ್ಞಾನಿಕ ಆದೇಶ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ತಮಿಳುನಾಡಿಗೆ ನೀರು ಹರಿಸದಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದು, ದಿಟ್ಟ ನಿರ್ಧಾರದ ಮೂಲಕ ರಾಜ್ಯದ ಜನರ ರಕ್ಷಣೆಗೆ ಒತ್ತಾಯಿಸಿದ್ದಾರೆ.