ಮದ್ದೂರು: ಮದ್ದೂರು ಪಟ್ಟಣದ ವೀರಭದ್ರೇಶ್ವರ ಹೋಂ ಅಪ್ಲೈಯನ್ಸ್ ಶೋ ರೂಂ ನಲ್ಲಿಟ್ಟಿದ್ದ ಟಿವಿಯನ್ನು ಕಳ್ಳನೊಬ್ಬ ಕ್ಷಣಾರ್ಧದಲ್ಲಿ ಎಗರಿಸಿದ್ದಾನೆ.
ಅಂಗಡಿಯಲ್ಲಿಟ್ಟಿದ್ದ ಹೊಸ ಟಿವಿ ಬಾಕ್ಸ್ ಅನ್ನು ಕಳ್ಳ ಹೊತ್ತೊಯ್ದಿದ್ದು, ಟಿವಿ ಬಾಕ್ಸ್ ಅನ್ನು ಹೊತ್ತೊಯ್ಯುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಬೈಕ್ ನಲ್ಲಿ ಬಂದ ಇಬ್ಬರು ಖತರ್ನಾಕ್ ಕಳ್ಳರು, LG ಕಂಪನಿಯ 55 ಇಂಚಿನ ಸುಮಾರು 55 ಸಾವಿರದ ಟಿವಿಯನ್ನು ಕಳ್ಳತನ ಮಾಡಿದ್ದಾರೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸಿಸಿಟಿವಿ ಪರಿಶೀಲನೆ ವೇಳೆ ಕಳ್ಳರ ಕೈ ಚಳಕ ಬಯಲಾಗಿದೆ.
ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.