Sunday, April 20, 2025
Google search engine

Homeರಾಜ್ಯಮದ್ದೂರು: ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡ ಉದ್ಘಾಟನೆ

ಮದ್ದೂರು: ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡ ಉದ್ಘಾಟನೆ

ಮದ್ದೂರು: ತಾಲೂಕಿನ ಆತಗೂರು ಹೋಬಳಿಯ ಹುಳಗನಹಳ್ಳಿ ಗ್ರಾಮದಲ್ಲಿ ಸುಮಾರು 16 ಲಕ್ಷ ವೆಚ್ಚದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯ ನೂತನ ಕಟ್ಟಡವನ್ನು ದಿವಂಗತ ಕೃಷ್ಣೇಗೌಡರ 3ನೇ ವರ್ಷದ ಪುಣ್ಯ ಸ್ಮರಣೆ ದಿನವಾದ ಇಂದು ಉದ್ಘಾಟಿಸಲಾಯಿತು.

ವಿಧಾನ ಪರಿಷತ್ ಸದಸ್ಯರಾದ ಕೆ ಗೋವಿಂದರಾಜುರವರ 5ಲಕ್ಷ ಅನುದಾನ ಕೆ ಬಿ ಚಂದ್ರಶೇಖರ್ ರಾಜ್ಯಸಭಾ ಸದಸ್ಯರು 5 ಲಕ್ಷ ಅನುದಾನ ಉದ್ಯಮಿ ಶೀಲ ನಾಗರಾಜುರವರ 5 ಲಕ್ಷ ಅನುದಾನ ಉಳಿಕೆ ಒಂದು ಲಕ್ಷ  ಕೃಷ್ಣೇಗೌಡ ಚಾರಿಟೇಬಲ್ ಟ್ರಸ್ಟ್ ನ ವತಿಯಿಂದ ಗ್ರಾಮದಲ್ಲಿ ಗ್ರಾಮಪಂ ಸದಸ್ಯ ನಂದೀಶ್ ಗೌಡ ನೇತೃತ್ವದಲ್ಲಿ ಶಾಲಾ ಕಟ್ಟಡವನ್ನು ನಿರ್ಮಿಸಲಾಗಿದೆ.

ಮಕ್ಕಳು ಶಾಲೆಯ ಆವರಣ ಪ್ರವೇಶ ಸುತ್ತಿದಂತೆ ಗೋಡೆಯ ಮೇಲೆ ಜ್ಞಾನಪೀಠ ಪ್ರಶಸ್ತಿ ಪಡೆದ ಎಂಟು ಕವಿಗಳ ಭಾವಚಿತ್ರಗಳು ಭಾರತ ಕರ್ನಾಟಕ ಮಂಡ್ಯ ಜಿಲ್ಲೆಯ ನಕ್ಷೆಗಳು ಶಾಲೆಯ ಒಳ ವರ್ಣ ಪ್ರವೇಶಿಸುತ್ತಿದ್ದಂತೆ ವಿವಿಧ ಮಾದರಿಯ ಚಿತ್ರ ಪಟ್ಟಗಳು ಕಾಗುಣಿತ, ಮಗ್ಗಿ, ಮಹಾನ್ ವ್ಯಕ್ತಿಗಳ ಭಾವಚಿತ್ರಗಳು ಸೇರಿದಂತೆ ಸಮಗ್ರ ಮಾಹಿತಿಯನ್ನು ಒದಗಿಸುವ ಚಿತ್ರಪಟಗಳನ್ನ ಶಾಲೆಯ  ಹೂರ ಹಾಗೂ ಒಳ ಆವರಣದಲ್ಲಿ ಚಿತ್ರಿಸಲಾಗಿದೆ.

ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್ ಗೌಡ ಹೆಚ್ಚಿನ ಆಸಕ್ತಿಯಿಂದ ಶಾಲೆ ಕಟ್ಟಡ ಉತ್ತಮ ರೀತಿಯಲ್ಲಿ ಮೂಡಿಬಂದಿದೆ.

ಈ ವೇಳೆ ಮಾತನಾಡಿದ ಗ್ರಾಮಪಂ ಸದಸ್ಯ ನಂದೀಶ್ ಗೌಡ ಶಾಲೆಯನ್ನು ಅಣ್ಣ ಉತ್ತಮ ರೀತಿ ಗ್ರಾಮದಲ್ಲಿ ಮಾಡಲಾಗಿದ್ದು ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನ ಗ್ರಾಮಸ್ಥರೆಲ್ಲರೂ ನೀಡುತ್ತಿದ್ದೇವೆ. ಹೆಮ್ಮನಹಳ್ಳಿ ಗ್ರಾಮ  ಪಂಚಾಯತಿ ವ್ಯಾಪಿಯ ಎಲ್ಲಾ ಶಾಲೆಗಳಿಗೆ ವಾರದಲ್ಲಿ ಒಂದು ದಿನ ಮೊಟ್ಟೆ ವಿತರಣೆ, ಹೆಮ್ಮನಹಳ್ಳಿ ಶಾಲೆಗೆ ವಿದ್ಯಾರ್ಥಿಗಳು ಗ್ರಾಮದಿಂದ ತೆರಳಲು ಆಟೋ ವ್ಯವಸ್ಥೆಯನ್ನು ಕೃಷ್ಣೇಗೌಡ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಮಾಡಲಾಗುತ್ತಿದೆ ಎಂದರು.

ನೂತನ ಶಾಲಾ ಕಟ್ಟಡದ ಉದ್ಘಾಟನೆಯನ್ನು ಗ್ರಾಮದ ಮುಖಂಡ ಗಿರೀಶ್ ನೆರವೇರಿಸಿದರು. ಈ ವೇಳೆ ಹೆಮ್ಮನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂಪಿ ವೀಣಾ ಉಪಾಧ್ಯಕ್ಷರಾದ ಅಪ್ಪಾಜಿಗೌಡ, ಗ್ರಾಮ ಪಂಚಾಯಿತಿ ಸದಸ್ಯ ಸೌಭಾಗ್ಯಮ್ಮ, ಕಮಲಾಕ್ಷಿ, ಜ್ಯೋತಿ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಲೀಲಾವತಿ, ಮುಖಂಡರಾದ ಎಚ್ ಎಲ್ ಗಿರೀಶ್ ಸೇರಿದಂತೆ ವಿದ್ಯಾರ್ಥಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular