ಮದ್ದೂರು: ಭಾರತೀನಗರದಲ್ಲಿ ನೂತನವಾಗಿ ವಂಶಿ ಸೌಹಾರ್ದ ಸಹಕಾರಿ ಸಂಘ ನಿಯಮಿತ ಸಹಕಾರಿ ಸಂಘವು ಉದ್ಘಾಟನೆಗೊಂಡಿತು. ನಗರದ ಎಂ ಎಂ ಮುಖ್ಯ ರಸ್ತೆಯಲ್ಲಿ ಕಛೇರಿಯ ಉದ್ಘಾಟನಾ ಸಮಾರಂಭವು
ಸಂಘದ ಅಧ್ಯಕ್ಷರಾದ ಬಿ. ಸಿದ್ದಯ್ಯನವರು ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಮಂಡ್ಯ ಜಿಲ್ಲೆಯ ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಕೆ.ಅನಿತಾ ರವರು ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ಲೆಕ್ಕಪರಿಶೋಧಕರಾದ ಎನ್. ರವಿ ಕುಮಾರ್ ರವರು ಭಾಗವಹಿಸಿ ಗಣಕಯಂತ್ರ ಉದ್ಘಾಟಿಸಿದರು ಮಂಡ್ಯ ಜಿಲ್ಲಾ ಸೌಹಾರ್ದ ಸಹಕಾರಿ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಬಿ.ಜೆ ಗುರುರಾಜ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಷೇರುದಾರರಾದ ಎಂ. ಮಾಯಪ್ಪರವರು ಅತಿಥಿಗಳನ್ನು ಸ್ವಾಗತಿಸಿದರು. ಮತ್ತೊಬ್ಬ ಷೇರುದಾರರಾದ ಟಿ.ಎಸ್. ಮೋಹನ್ ಕುಮಾರ್ ರಾಚಾರ್ಯರಾರು ಕಾರ್ಯಕ್ರಮ ನಿರೂಪಣೆ ಮಾಡಿ ವಂದನಾರ್ಪಣೆ ಮಾಡಿದರು. ಸಮಾರಂಭದಲ್ಲಿ ಷೇರುದಾರರು ಸದಸ್ಯರು, ಅಧ್ಯಕ್ಷರು,ಉಪಾಧ್ಯಕ್ಷರು, ನಿರ್ದೇಶಕರು, ಹಾಗೂ ಮುಖ್ಯ ಕಾರ್ಯನಿರ್ವಣಾಧಿಕಾರಿ ಗಳು ಭಾಗವಹಿಸಿದರು.
ಶ್ರೀಮತಿ ಕೆ. ಅನಿತಾ ರವರು ಮಾತನಾಡುತ್ತಾ ಇಂದಿನ ದಿನಗಳಲ್ಲಿ ಸೌಹಾರ್ದ ಸಹಕಾರಿ ಸಂಘಗಳು ಸರ್ವರಿಗೂ ಸಮಪಾಲನ್ನು ದೊರಕಿಸಿ ಕೊಡುವುದರಲ್ಲಿ ಅತ್ಯಂತ ಸಕ್ರಿಯವಾಗಿ ಕೆಲಸ ಮಾಡುತ್ತಿವೆ ಎಂದು ಹೇಳಿದರು. ಅಧ್ಯಕ್ಷರು ತಮ್ಮ ಭಾಷಣದಲ್ಲಿ ಮನುಷ್ಯನ ಆರ್ಥಿಕ ಬೆಳವಣಿಗೆಗೆ ಸಹಕಾರ ಸಂಘಗಳು ಹೆಮ್ಮರವಾಗಿ ನಿಂತು ಸಹಾಯ ಮಾಡುತ್ತಿವೆ ಎಂದು ವ್ಯಕ್ತಿಗಳ ಆರ್ಥಿಕ ಸ್ಥಿತಿಯನ್ನು ಸುಧಾರಣೆ ಗೊಳಿಸುವಲ್ಲಿ ಸಹಕಾರಿ ಸಂಘಗಳು ಅತ್ಯಂತ ಮಹತ್ವವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರು.
ಈ ಸಂದರ್ಬದಲ್ಲಿ ಉಪವಿಭಾಗ ರವರಾದ ಕೆ . ಶ್ರೀಮತಿ ಅನಿತಾರವರನ್ನು ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರು ಗಳು ಅಭಿನಂದಿಸಿದರು.