ಮದ್ದೂರು: ತಾಲೂಕಿನ ಕೆ. ಕೋಡಿಹಳ್ಳಿ ಗ್ರಾಮದ ಬೆಂಗಳೂರು-ಮೈಸೂರು ಹೆದ್ದಾರಿಯ ಪಕ್ಕ ಸಿದ್ದಗೊಂಡಿರುವ ಕೆಸರು ಗದ್ದೆಯಲ್ಲಿ ಗ್ರಾಮದ ವಿನಾಯಕ ರೈತ ಉತ್ಪಾದನಾ ಕೇಂದ್ರದ ವತಿಯಿಂದ ಗ್ರಾಮದ ಮಹಿಳೆಯರಿಗೆ ಹಾಗೂ ಪುರುಷರಿಗೆ , ಯುವಕರಿಗೆ, ರೈತರಿಗೆ ಕೆಸರುಗದ್ದೆ ಆಟೋಟಗಳನ್ನು ಮೇಲ್ಕಂಡ ಸಂಘದ ವತಿಯಿಂದ ಆಯೋಜನೆ ಮಾಡಲಾಗಿತ್ತು.

ಕೆಸರುಗದ್ದೆ ಓಟದಲ್ಲಿ ಗ್ರಾಮದ ಮಹಿಳೆಯರು ಹಾಗೂ ಯುವಕರು ಪಾಲ್ಗೊಂಡು ಗುರಿ ಮುಟ್ಟಿ ಜಯಸಾಧಿಸಲು ನಾ ಮುಂದು ತಾ ಮುಂದು ಎಂದು ಕೆಸರುಗದ್ದೆಯಲ್ಲಿ ಓಡಿ ಗುರಿಮುಟ್ಟುವ ಸನ್ನಿವೇಶ ನೋಡುಗ ಪ್ರೇಕ್ಷಕರ ಮನ ಸೆಳೆಯಿತು.
ಕ್ರೀಡಾಪಟುಗಳನ್ನು ಪ್ರೇಕ್ಷಕರು ಶಿಳ್ಳೆ ಹಾಗೂ ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದರು. ಈ ವೇಳೆ ಮಹಿಳೆಯರಿಗೆ ಲೆಮನ್ ಅಂಡ್ ಸ್ಪೂನ್ ಮತ್ತು ಮ್ಯೂಸಿಕಲ್ ಚೇರ್ ಸ್ಪರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.
ಈ ವೇಳೆ ಸಂಘದ ಅಧ್ಯಕ್ಷ ಹನುಮಗೌಡ, ಸಜಯ್ ಕುಮಾರ್ ಪ್ರದೀಪ ಕುಮಾರ, ಬಿಸಿ ರತ್ನಮ್ಮ, ಶಿಕ್ಷಕಿ ಪ್ರಶಿಲಾ, ಸಂಘದ ಪದಾಧಿಕಾರಿಗಳಾದ ಶೈಲಜಾ ರಾಜ್, ಗ್ರಾಮ ಪಂಚಾಯತಿ ಸದಸ್ಯರಾದ ಸರಸ್ವತಿ ಸತೀಶ್, ಶೃತಿ, ಕೆ ಶಂಕರ್, ಸೇರಿದಂತೆ ಇತರರು ಹಾಜರಿದ್ದರು.