ಕಾಂಗ್ರೆಸ್ ಗೆ ಒಲಿದ ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಗಾದಿ
ಮಂಡ್ಯ: ಇಂದು ನಡೆದ ಮದ್ದೂರು ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಜೆಡಿಎಸ್ ಗೆ ಬಹುಮತ ಇದ್ದರು ಭಾರಿ ಮುಖಭಂಗವಾಗಿದೆ. ಕಾಂಗ್ರೆಸ್ ತೆಕ್ಕೆಗೆ ಮದ್ದೂರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನ ಒಲಿದಿದೆ. ರಣತಂತ್ರ ರೂಪಿಸುವಲ್ಲಿ ಶಾಸಕ ಕದಲೂರು ಉದಯ್ ಯಶಸ್ವಿಯಾಗಿದ್ದಾರೆ. 15 ಮತಗಳನ್ನು ಪಡೆದು ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಪಟ್ಟ ಕಾಂಗ್ರೆಸ್ ಉಳಿಸಿಕೊಂಡಿದೆ. ನೂತನ ಅಧ್ಯಕ್ಷರಾಗಿ ಕೋಕಿಲ ಅರುಣ್ ಹಾಗೂ ಉಪಾಧ್ಯಕ್ಷರಾಗಿ ಟಿ ಆರ್ ಪ್ರಸನ್ನ ಕುಮಾರ್ ಆಯ್ಕೆಯಾಗಿದ್ದಾರೆ.
ಒಟ್ಟು 23 ಸದಸ್ಯ ಸಂಖ್ಯಾ ಬಲದ ಮದ್ದೂರು ಪುರಸಭೆಯಲ್ಲಿ ಒಂದು ಎಂಪಿ, ಒಂದು MLA ಸೇರಿ ಒಟ್ಟು 25 ಜನರಿಗೆ ಮತದಾನದ ಹಕ್ಕಿತ್ತು. ಅದರಲ್ಲಿ 4ಕಾಂಗ್ರೆಸ್, 6 ಜೆಡಿಎಸ್,1,ಬಿಜೆಪಿ, 4 ಪಕ್ಷೇತರ ಬೆಂಬಲ ಪಡೆದು ಅಧಿಕಾರ ಹಿಡಿಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ .
ತೀವ್ರ ಕುತೂಹಲ ಮೂಡಿಸಿದ್ದ ಮದ್ದೂರು ಪುರಸಭೆ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ ಯಲ್ಲಿ ಕೊನೆಗೂ ಕಾಂಗ್ರೆಸ್ ಗೆದ್ದುಬೀಗಿದೆ. ಆಪರೇಷನ್ ಕಾಂಗ್ರೆಸ್ ಮೂಲಕ ಜೆಡಿಎಸ್ ಗೆ ಸೆಡ್ಡು ಹೊಡೆದಿದ್ದು ಶಾಸಕ ಕದಲೂರು ಉದಯ್ ರಣತಂತ್ರ ರೂಪಿಸುವ ಮೂಲಕ ಅಧಿಕಾರಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಮುಂದಿನ 14 ತಿಂಗಳ ಅವಧಿಗೆ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಪಡಿಸಿ ಆದೇಶ ಹೊರಡಿಸಲಾಗಿತ್ತು. 13 ಜನ ಜೆಡಿಎಸ್ ಸದಸ್ಯರ ಪೈಕಿ 6 ಸದಸ್ಯರು ಕೈಕೊಟ್ಟ ಹಿನ್ನೆಲೆ ಬಹುಮತ ಇದ್ದರು ಅಧಿಕಾರ ಹಿಡಿಯಲಾಗದೆ ಜೆಡಿಎಸ್ ಭಾರಿ ಮುಖಭಂಗ ಅನುಭವಿಸಿದೆ.
ಪಟ್ಟಣ ಪುರಸಭೆಯ ಅಧಿಕಾರ ಹಿಡಿಯುವ ಮೂಲಕ ಕೈ ಶಾಸಕ ಉದಯ್ ಮತ್ತೊಮ್ಮೆ ತಮ್ಮ ಪ್ರಾಬಲ್ಯ ಸಾಬೀತು ಮಾಡಿದ್ದಾರೆ. ಇತ್ತ ಕೈ ಶಾಸಕನ ಕಮಾಲಿಗೆ ಜೆಡಿಎಸ್ ಪಕ್ಷ ಮಖಾಡೆ ಮಲಗಿದಂತಾಗಿದೆ.