ಮಂಡ್ಯ: ಮದ್ದೂರು ತಾಲೂಕು ಕಚೇರಿಯಲ್ಲಿರುವ ಮದ್ದೂರು ಶಾಸಕ ಕದಲೂರು ಉದಯ್ ಅವರ ಸರ್ಕಾರಿ ಕಚೇರಿಯನ್ನು ಕೃಷಿ ಸಚಿವ ಚಲುವರಾಯಸ್ವಾಮಿ ಉದ್ಘಾಟಿಸಿದರು.
ಇದಕ್ಕೂ ಮುನ್ನ ಗಡಿ ಗ್ರಾಮ ನಿಡಘಟ್ಟ ಬಳಿ ಸಚಿವರಿಗೆ ಅದ್ಧೂರಿ ಸ್ವಾಗತ ಕೋರಲಾಯಿತು.
ಪಟಾಕಿ ಸಿಡಿಸಿ, ಕ್ರೇನ್ ಮೂಲಕ ಬೃಹತ್ ಹಾರ ಹಾಕಿ ಅಭಿಮಾನಿಗಳು ಸ್ವಾಗತಿಸಿದರು. ನೂರಾರು ಆಟೋಗಳು, ಸಾವಿರಾರು ಬೈಕ್ ಗಳ ಜಾಥಾ ಜೊತೆಗೆ ತೆರೆದ ವಾಹನದಲ್ಲಿ ಸಚಿವರು ನಿಡಘಟ್ಟದಿಂದ ಮದ್ದೂರುವರೆಗೆ ಮೆರವಣಿಗೆಯಲ್ಲಿ ಸಾಗಿದರು.
ಮೆರವಣಿಗೆ ಮುಗಿಸಿ ಪುರಸಭೆ ಆವರಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
