ಮದ್ದೂರು: ಪಟ್ಟಣದ ಪುರಸಭೆಯ ಸಿಡಿಎಸ್ ಭವನದಲ್ಲಿ ಪುರಸಭೆ ಹಾಗೂ ತಾಲೂಕು ಆರೋಗ್ಯ ಇಲಾಖೆಯ ಸಂಯುಕ್ತ ಆಶಯದಲ್ಲಿ ನಡೆದ ಸ್ವಚ್ಛತೆಯ ಸೇವೆ ಹಾಗೂ ದಂತ ತಪಾಸಣಾ ಶಿಬಿರ ಕಾರ್ಯಕ್ರಮಕ್ಕೆ ಪುರಸಭಾ ಅಧ್ಯಕ್ಷ ಕೋಕಿಲ ಅರುಣ್ ಚಾಲನೆ ನೀಡಿ ಮಾತನಾಡಿದರು.
ಪೌರಕಾರ್ಮಿಕರು ತಮ್ಮ ಆರೋಗ್ಯ ಕಾಳಜಿ ವಹಿಸುವುದರ ಜೊತೆಗೆ ಪಟ್ಟಣದ ಸೌಂದರ್ಯಕ್ಕೆ ದುಡಿಯುವುದು ನಿಮ್ಮೆಲ್ಲರ ಆರ್ಯ ಕರ್ತವ್ಯವಾಗಿದೆ. ಹಾಗಾಗಿ ನಿಮ್ಮ ಆರೋಗ್ಯ ಯೋಗಕ್ಷೇಮವನ್ನು ವಿಚಾರಿಸುವ ನಿಟ್ಟಿನಲ್ಲಿ ನಿಮಗೆ ಸೌಕರ್ಯ ಹಾಗೂ ಸೌಲಭ್ಯಗಳನ್ನು ನೀಡಲು ಪುರಸಭೆ ಎಂದಿಗೂ ಸಿದ್ಧವಿದೆ ಎಂದು ತಿಳಿಸಿದರು.
ಬಳಿಕ ಪರಕೆ ಹಿಡಿದು ಪುರಸಭಾ ಆವರಣವನ್ನು ಅಧಿಕಾರಿಗಳ ಜೊತೆಗೂಡಿ ಸ್ವಚ್ಛತಾ ಕಾರ್ಯ ನಡೆಸಿದರು.
ಈ ವೇಳೆ ತಾಲೂಕು ಆರೋಗ್ಯ ಅಧಿಕಾರಿ ರವೀಂದ್ರ ಗೌಡ, ತಾಲೂಕು ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳಾದ ತಮ್ಮೇಗೌಡ, ಮಣಿ ಸೇರಿದಂತೆ ಇತರರು ಹಾಜರಿದ್ದರು.