ಮದ್ದೂರು: ಪಟ್ಟಣದ ಬೆಂಗಳೂರು ಮೈಸೂರು ಹೆದ್ದಾರಿಯ ಪಕ್ಕದಲ್ಲಿರುವ ಎಲ್ಐಸಿ ಜೀವ ವಿಮೆ ಕಚೇರಿ ಬಳಿ ಎಲ್ಐಸಿ ಪ್ರತಿನಿಧಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಎಲ್ಐಸಿಯಲ್ಲಿ ಹೊಸ ಬದಲಾವಣೆಗಳನ್ನು ಮಾಡಲಾಗಿದ್ದು, ಅವುಗಳು ಬಡ ಕುಟುಂಬಕ್ಕೆ ಹಾಗೂ ರೈತರಿಗೆ ನೆರವಾಗದಂತ ಯೋಜನೆಗಳಾಗಿದ್ದು, ಈ ಕೂಡಲೇ ಇಂದಿನಂತೆ ಎಲ್ಲಾ ಪಾಲಿಸಿಗಳನ್ನು ಜಾರಿಗೆ ತರಬೇಕು. ಬದಲಾವಣೆಗಳನ್ನು ಕೈ ಬಿಟ್ಟು ಅತಿ ಸಣ್ಣ ರೈತನಿಗೂ ಉಪಯೋಗವಾಗುವ ಜೀವ ವಿಮೆಯನ್ನು ಜಾರಿಗೆ ತರಬೇಕು. ಬಂಡವಾಳ ಶಾಹಿಗಳಿಗೆ ಮಾತ್ರ ಅನುಕೂಲವಾಗುವಂತಹ ವಿಮೆಯನ್ನ ಇಂದಿನಿಂದ ಜಾರಿಗೆ ತರಲು ಹೊರಟಿರುವುದು ಸರಿ ಇಲ್ಲ ಎಂದು ವಿಮಾ ಪ್ರತಿನಿಧಿ ಪ್ರದೀಪ್ ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ವಿಮಾ ಪ್ರತಿನಿಧಿಗಳಾದ ಧನ ಪಾಲ್ ಶೆಟ್ಟಿ, ವೀರಣ್ಣ, ವಾಸು ಸೇರಿದಂತೆ ನೂರಾರು ವಿಮಾ ಪ್ರತಿನಿಧಿಗಳು ಹಾಜರಿದ್ದರು.