ಮಂಡ್ಯ: ಮಂಡ್ಯದ ಮದ್ದೂರು ತಾ.ಪಂ.ನಲ್ಲಿ ಕಂಬಳಿ ಹುಳು ಕಾಟ ಹೆಚ್ಚಾಗಿದ್ದು ಕಂಬಳಿ ಹುಳು ಕಾಟಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹೈರಾಣಾಗಿದ್ದಾರೆ.
ತಾ.ಪಂ.ನ ಕಟ್ಟಡದ ತುಂಬೆಲ್ಲ ಅಲ್ಲಲ್ಲಿ ಕಂಬಳಿ ಹುಳುಗಳು ಕಾಣಿಸಿಕೊಳ್ಳುತ್ತಿದ್ದು ಹುಳುಗಳ ಸಮಸ್ಯೆಯಿಂದ ಸಿಬ್ಬಂದಿಗಳು ಅಧಿಕಾರಿಗಳು ಕಚೇರಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.

ಕಂಬಳಿ ಹುಳುಗಳ ಕಾಟದಿಂದ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ತುರಿಕೆ ಸಮಸ್ಯೆ ಉಂಟಾಗುತ್ತಿದ್ದು ಕಚೇರಿಯಲ್ಲಿ ಕಂಬಳಿ ಹುಳುಗಳ ಸಮಸ್ಯೆ ಎದುರಾಗಿದ್ದರು ಅಧಿಕಾರಿಗಳು ನಿರ್ಲಕ್ಷ ತೋರುತ್ತಿರುವುದು ಬೇಸರ ತಂದಿದೆ.