ಮದ್ದೂರು: ಪಟ್ಟಣದ ಪುರಸಭೆ ಆವರಣಕ್ಕೆ ತೆರಳಿದ ಅಖಿಲ ಕರ್ನಾಟಕ ವಿಶ್ವಕರ್ಮ ಸಮುದಾಯದ ಹಲವು ಮುಖಂಡರು ಪುರಸಭಾ ಅಧ್ಯಕ್ಷರಾದ ಕೋಕಿಲ ಅರುಣ್ ರವರನ್ನು ಭೇಟಿ ಮಾಡಿ ಮದ್ದೂರು ಪಟ್ಟಣದ ಕೊಲ್ಲಿ ವೃತ್ತಕ್ಕೆ ಸಮುದಾಯದ ಪ್ರಸಿದ್ಧ ವ್ಯಕ್ತಿಯಾದ ಅಮರಶಿಲ್ಪಿ ಜಕಣಾಚಾರ್ಯರವರ ಹೆಸರಿಡಬೇಕೆಂದು ಮನವಿ ಮಾಡಿದರು.
ಹಾಗೂ ಪಟ್ಟಣದಲ್ಲಿ ಶ್ರೀ ಕಾಳಮ್ಮ ದೇವಾಲಯ ನಿರ್ಮಾಣಕ್ಕೆ ಪುರಸಭಾ ವತಿಯಿಂದ ನಿವೇಶನವನ್ನು ನೀಡಬೇಕೆಂದು ಮನವಿ ಸಲ್ಲಿಸಿ ಸಮುದಾಯದ ಮುಖಂಡ ಆನಂದ ಚಾರಿ ಮಾತನಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಅಧ್ಯಕ್ಷೆ ಕೋಕಿಲ ಅರುಣ್ ನಿಮ್ಮ ಮನವಿಯನ್ನ ಸಭೆಗೆ ತರಲಾಗುತ್ತದೆ ಸಭೆಯಲ್ಲಿ ಚರ್ಚಿಸಿ ಪಟ್ಟಣದ ಯಾವುದಾದರೂ ಒಂದು ವೃತ್ತಕ್ಕೆ ಅಮರಶಿಲ್ಪಿ ಜಕಣಾಚಾರ್ಯರ ಹೆಸರಿಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದು ಹಾಗೂ ಪುರಸಭೆಯ ಕಾಲಿನಿವೇಶನವಿದ್ದರೆ ಗುರುತಿಸಿ ನಿಮಗೆ ನೀಡಲು ಪ್ರಯತ್ನ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಈ ವೇಳೆ ಸಮುದಾಯದ ಮುಖಂಡರಾದ ಸೋಮಾಚಾರಿ, ಸುರೇಶ್, ತೀರ್ಥಚಾರಿ, ಮಂಟೇಸ್ವಾಮಿ, ವೀರಭದ್ರ, ಸಿದ್ದರಾಜು, ಶಿವಕುಮಾರ್ ಸೇರಿದಂತೆ ಇತರರು ಹಾಜರಿದ್ದರು.