Saturday, April 19, 2025
Google search engine

HomeUncategorizedಮದ್ದೂರು ತಾಲ್ಲೂಕು ನೂತನ ತಹಶೀಲ್ದಾರ್ ಕೆ.ಎಸ್ ಸೋಮಶೇಖರ್’ಗೆ ಸನ್ಮಾನ

ಮದ್ದೂರು ತಾಲ್ಲೂಕು ನೂತನ ತಹಶೀಲ್ದಾರ್ ಕೆ.ಎಸ್ ಸೋಮಶೇಖರ್’ಗೆ ಸನ್ಮಾನ

ಮದ್ದೂರು: ತಾಲೂಕು ನೂತನ ತಹಶೀಲ್ದಾರ್ ಕೆ.ಎಸ್ ಸೋಮಶೇಖರ್ ರವರನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಸತ್ಕರಿಸಿ ಸನ್ಮಾನಿಸಿ ತಾಲೂಕಿನ ವಿವಿಧ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಮನವಿ ಸಲ್ಲಿಸಲಾಯಿತು.

ಜಿಲ್ಲೆಯಲ್ಲಿ ಭೀಕರ ಬರಗಾಲ ವ್ಯಾಪಿಸಿರುವುದರಿಂದ ಸರ್ಕಾರ ಘೋಷಿಸಿರುವ ಬೆಳೆ ಪರಿಹಾರ ವಿತರಣೆ ಮತ್ತು ನಾಶವಾಗಿರುವ ಬೆಳೆಗಳಿಗೆ ವಿಮೆ ಹಣ ವಿತರಣೆ, ಅಗತ್ಯ ಜನ ಜಾನುವಾರುಗಳಿಗೆ ಕುಡಿಯುವ ನೀರು. ಮೇವು ಕೊರತೆಯಾಗದಂತೆ ಜಿಲ್ಲಾಡಳಿತ ಮತ್ತು ಸರ್ಕಾರಗಳಿಗೆ ಅಗತ್ಯ ಮಾಹಿತಿ ನೀಡಿ ಸಮಸ್ಯೆ ಪರಿಹರಿಸುವಲ್ಲಿ ತಾಲೂಕು ಆಡಳಿತ ಸಜ್ಜಾಗಿರುವಂತೆ ಮನವಿ ನೀಡಲಾಯಿತು .

ತಾಲೂಕಿನಲ್ಲಿ ವಿವಿಧ ಗ್ರಾಮಗಳಲ್ಲಿ ಸ್ಮಶಾನಾಭಿವೃದ್ಧಿ, ಮತ್ತು ವಿಳಂಬವಾಗಿರುವ  ಭೂ ಮಾಪನ ಇಲಾಖೆಯ ಸರ್ವೆ ಕಾರ್ಯಗಳು, ಸಾರ್ವಜನಿಕ ಕೆಲಸ ಕಾರ್ಯಗಳಲ್ಲಿ ಕಚೇರಿಯ ಅಧಿಕಾರಿಗಳು ಪ್ರತಿ ಕೆಲಸಗಳಿಗೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜರೂರಾಗಿ ಕಚೇರಿ ಕೆಲಸ ನಿರ್ವಹಿಸುವಂತೆ ಸೂಚಿಸುವಂತೆ ಹಾಗೂ ತಾಲೂಕು ಕಚೇರಿ ಕಟ್ಟಡ ನವೀಕರಣ ಮಾಡಲು ಸರ್ಕಾರ ಮತ್ತು ಶಾಸಕರಿಗೆ ಮನವಿ ಸಲ್ಲಿಸುವಂತೆ ತಿಳಿಸಿದರು.

ಮನವಿ ಸ್ವೀಕರಿಸಿದ ನೂತನ ತಹಶೀಲ್ದಾರ್ ಕೆ ಎಸ್ ಸೋಮಶೇಖರ್ ರವರು ಸಾರ್ವಜನಿಕರು ಮತ್ತು ಸಂಘ-ಸಂಸ್ಥೆಗಳ ನೆರವು ಅಗತ್ಯವಾಗಿರುತ್ತದೆ. ಈ ಸಂಬಂಧ ಜಿಲ್ಲಾಡಳಿತಕ್ಕೆ ತಮ್ಮ ಮನವಿ ಸಲ್ಲಿಸಿ ಸಮಸ್ಯೆಗಳ ಪರಿಹಾರಕ್ಕೆ ಒತ್ತು ಕೊಡುತ್ತೇನೆ ಎಂದು ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿ ಸಿ ಉಮಾಶಂಕರ್, ಗೌರವಾಧ್ಯಕ್ಷ ಶಿವಲಿಂಗಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸಿಎಂ ಕ್ರಾಂತಿ ಸಿಂಹ, ಅಜ್ಜಹಳ್ಳಿ ಕರಿಗೌಡ, ಪ್ರಧಾನ ಕಾರ್ಯದರ್ಶಿ ಸೋಂಪುರ ಉಮೇಶ್,ವಿ ಎಂ. ರಮೇಶ್. ಸಕ್ಕರೆ ನಾಗರಾಜು. ಜಗದೀಶ್. ಕೋಣಸಾಲೆ ಕೃಷ್ಣ. ಜಗದೀಶ್. ಶ್ರೀನಿವಾಸ್. ರೈತ ಮುಖಂಡ ಉಮೇಶ್ ಹಾಜರಿದ್ದರು.

RELATED ARTICLES
- Advertisment -
Google search engine

Most Popular