ಮದ್ದೂರು: ಮದ್ದೂರು ತಾಲೂಕಿನ ಸೋಮನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘ, ಮನುಜ ಮತ ಸೇವಾ ಟ್ರಸ್ಟ್, ಹಾಗೂ ಜನಕಲ ರಂಗ ಸಂಘದ ವತಿಯಿಂದ ಆಯೋಜನೆ ಮಾಡಿದ್ದ ಯುವಜನರ ನಡಿಗೆ ಜನಪದದ ಕಡೆಗೆ ಕಾರ್ಯಕ್ರಮವನ್ನು ಮನ್ ಮುಲ್ ನಿರ್ದೇಶಕಿ ರೂಪ ಕಂಜರ ನುಡಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಂಸ್ಕೃತಿ ಪರಂಪರೆ ನಮ್ಮ ವೇಷಭೂಷಣ ಸಮವಸ್ತ್ರಗಳನ್ನು ನಮ್ಮ ಸಂಸ್ಕೃತಿ ಬಿಂಬಿಸುವ ನಿಟ್ಟಿನಲ್ಲಿ ನಾವು ತೊಡಬೇಕು ನಾವು ಎಲ್ಲೇ ಇದ್ದರೂ ಭಾರತೀಯರು ಎಂಬ ಹೆಮ್ಮೆ ಇರಬೇಕು ಪ್ರಸ್ತುತ ಸಂದರ್ಭದಲ್ಲಿ ಯುವ ಜನಾಂಗ ಜನಪದ ವನ ಮರೆಯುತ್ತಿದೆ.
ಮತ್ತೆ ಎಲ್ಲರೂ ಜಾನಪದವನ್ನು ಕಲಿಯುವ ಮೂಲಕ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ.
ಜನಪದವನ್ನು ಉಳಿಸುವ ನಿಟ್ಟಿನಲ್ಲಿ ಹುರಗಾಲವಾಡಿ ರಾಮಯ್ಯ, ಹಾಗೂ ಮೇಲ್ಕಂಡ ಸಂಘ-ಸಂಸ್ಥೆಗಳು ಮಾಡುತ್ತಿರುವ ಕಾರ್ಯಕ್ರಮಗಳು ನಿಜಕ್ಕೂ ಪ್ರಸ್ತುತ ಎಂದರು.

ಕರ್ನಾಟಕ ಜನಪದ ಅಕಾಡೆಮಿಯ ಮಾಜಿ ಸದಸ್ಯ ಹುರಗಾಲವಾಡಿ ರಾಮಯ್ಯ ಜನಪದ ಗೀತೆಗಳು ಆಡುವುದರ ಜೊತೆಗೆ ವಿದ್ಯಾರ್ಥಿಗಳನ್ನು ಜನಪದ ಗೀತೆಗಳ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಸ್ವಾಮಿ ವಿವೇಕಾನಂದ ಯುವ ಸಂಸ್ಕೃತಿಕ ಮತ್ತು ಕ್ರೀಡಾ ಸಂಘ ಕಳೆದ ಹತ್ತು ವರ್ಷಗಳಿಂದ ಯುವಜನರಿಗೆ ಜನಪದದ ಬಗ್ಗೆ ಆಸಕ್ತಿ ತೋರುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ಕೊಂಡು ಬರುತ್ತಿರುವುದು ಶ್ಲಾಘನೀಯ ಎಂದರು. ಈ ವೇಳೆ ಮೊರಾರ್ಜಿ ವಸತಿ ಶಾಲೆಯ ಪ್ರಾಂಶುಪಾಲರಾದ ಆಶಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ವಾಮಿ ವಿವೇಕಾನಂದ ಯುವ ಸಾಂಸ್ಕೃತಿಕ ಮತ್ತು ಕ್ರೀಡಾ ಸಂಘದ ಕಾರ್ಯದರ್ಶಿ, ಲಾರಾ ಪ್ರಸನ್ನ, ವಸತಿ ನಿಲಯದ ಮೇಲ್ವಿಚಾರಕ ಗಿರೀಶ್, ವಸತಿ ನಿಲಯದ ದಾದಿ ಶಿಲ್ಪ ಹಾಜರಿದ್ದರು.