Monday, April 21, 2025
Google search engine

Homeರಾಜ್ಯಮಧ್ಯ ಪ್ರದೇಶ ಶೇ.೭೧, ಛತ್ತೀಸ್‌ಗಢ ಶೇ.೬೮ ಮತದಾನ

ಮಧ್ಯ ಪ್ರದೇಶ ಶೇ.೭೧, ಛತ್ತೀಸ್‌ಗಢ ಶೇ.೬೮ ಮತದಾನ

ಮಧ್ಯ ಪ್ರದೇಶ: ಛತ್ತೀಸ್‌ಗಢ, ಮಧ್ಯ ಪ್ರದೇಶನಲ್ಲಿ ೨೩೦ ಕ್ಷೇತ್ರಗಳಿಗೆ ನಡೆದ ಏಕ ಹಂತ ಹಾಗೂ ಛತ್ತೀಸ್‌ಗಢದ ೭೦ ಸ್ಥಾನಗಳಿಗೆ ನಡೆದ ಕೊನೆಯ ಹಂತದ ಮತದಾನ ಮುಕ್ತಾಯಗೊಂಡಿದೆ. ಚುನಾವಣಾ ಆಯೋಗದ ವರದಿ ಪ್ರಕಾರ ಸಂಜೆ ೬ ಗಂಟೆ ವೇಳೆಗೆ ಮಧ್ಯ ಪ್ರದೇಶದಲ್ಲಿ ಶೇ. ೭೧.೧೬, ಛತ್ತೀಸ್‌ಗಢದಲ್ಲಿ ಶೇ. ೬೮.೧೫ ರಷ್ಟು ಮತದಾನವಾಗಿದೆ.

ಎರಡೂ ರಾಜ್ಯದ ಸಂಪೂರ್ಣ ಶೇಕಡವಾರು ಮತದಾನ ಏರಿಕೆಯಾಗುವ ಸಾಧ್ಯತೆಯಿದೆ. ಮತದಾನದ ಅವಧಿ ಮುಗಿಯುವವರೆಗೆ ಮತಗಟ್ಟೆಗಳನ್ನು ತಲುಪುವ ಮತದಾರರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಲಾಗಿದೆ. ಮತದಾನಕ್ಕೆ ಸಂಬಂಧಿಸಿದ ದಾಖಲೆಗಳ ಪರಿಶೀಲನೆಯ ನಂತರ ಅಂತಿಮ ಅಂಕಿಅಂಶಗಳನ್ನು ಶನಿವಾರದೊಳಗೆ ತಿಳಿಯಲಾಗುವುದು ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಛತ್ತೀಸ್‌ಗಢದ ಬಿಂದ್ರನವಗಢ ಪ್ರದೇಶದಲ್ಲಿ ಶುಕ್ರವಾರ ನಕ್ಸಲರು ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಒಬ್ಬ ಯೋಧ ಹುತಾತ್ಮರಾಗಿದ್ದಾರೆ. ಬಡೆ ಗೋಬ್ರಾ ಮತಗಟ್ಟೆಯಿಂದ ವಾಪಸಾಗುತ್ತಿದ್ದಾಗ ನಕ್ಸಲರು ಮತಗಟ್ಟೆಯನ್ನು ಗುರಿಯಾಗಿಸಿಕೊಂಡು ಐಇಡಿ ಸ್ಫೋಟಿಸಿದ್ದಾರೆ. ಐಟಿಬಿಪಿ ಹೆಡ್ ಕಾನ್‌ಸ್ಟೆಬಲ್ ಜೋಗಿಂದರ್ ಸಿಂಗ್ ಸ್ಫೋಟದಲ್ಲಿ ಸಾವನ್ನಪ್ಪಿದ್ದಾರೆ.

ಮತಗಟ್ಟೆ ಮತ್ತು ಇವಿಎಂ ಯಂತ್ರವು ಗರಿಯಾಬಂದ್‌ಗೆ ಸುರಕ್ಷಿತವಾಗಿ ತಲುಪಿಸಲಾಗಿದೆ ಎಂದು ಸೇನಾಧಿಕಾರಿಗಳು ತಿಳಿಸಿದ್ದಾರೆ. ೨೩೦ ವಿಧಾನಸಭೆ ಸ್ಥಾನಗಳಲ್ಲಿ ಮತದಾನ ಮಾಡಲು ಚುನಾವಣಾ ಆಯೋಗ ೬೪,೬೨೬ ಮತಗಟ್ಟೆಗಳನ್ನು ಸ್ಥಾಪಿಸಿದೆ. ಇವುಗಳಲ್ಲಿ ೧೭,೦೩೨ ಸೂಕ್ಷ್ಮ ಮತಗಟ್ಟೆಗಳಿವೆ. ರಾಜ್ಯದ ಒಟ್ಟು ೨೩೦ ವಿಧಾನಸಭಾ ಸ್ಥಾನಗಳಿಗೆ ೨,೫೩೩ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಛತ್ತೀಸ್‌ಗಢದ ಎರಡನೇ ಹಂತದ ಚುನಾವಣೆಯಲ್ಲಿ ೯೫೮ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ನವೆಂಬರ್ ೭ ರಂದು ನಡೆದ ಮೊದಲ ಹಂತದಲ್ಲಿ ರಾಜ್ಯದ ೨೦ ಸ್ಥಾನಗಳಿಗೆ ಮತದಾನವಾಗಿ ಶೇ. ೭೮ ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.

RELATED ARTICLES
- Advertisment -
Google search engine

Most Popular