ಮಧ್ಯಪ್ರದೇಶ : ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಅಕ್ರಮವಾಗಿ ಮರಳು ಸಾಗಿಸಲು ಬಳಸುತ್ತಿದ್ದ ಟ್ರ್ಯಾಕ್ಟರ್ ಪೊಲೀಸ್ ಪೇದೆಯೊಬ್ಬರ ಮೇಲೆ ಹರಿದಿದ್ದು, ಗಾಯಗೊಂಡಿದ್ದಾರೆ.
ಎಎಸ್‌ಐ ಮಹೇಂದ್ರ ಬಾಗ್ರಿ ಮತ್ತು ಇಬ್ಬರು ಸಹಚರರು ವಾರಂಟ್ ಹಿಡಿದು ಹೋಗಿದ್ದರು. ದಾರಿಯಲ್ಲಿ ಮರಳು ತುಂಬಿದ ಟ್ರ್ಯಾಕ್ಟರ್ ಟ್ರಾಲಿಯನ್ನು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ತಮ್ಮ ಕಡೆಗೆ ಬರುತ್ತಿರುವುದನ್ನು ಕಂಡು ಅದನ್ನು ನಿಲ್ಲಿಸಲು ಹೇಳಿದರು ಆದರೂ ಅಧಿಕಾರಿಯ ಮೇಲೆ ಹತ್ತಿಸಿದ್ದಾರೆ ಎಂದು ತಿಳಿಸಿದ್ದಾರೆ. ಬಗ್ರಿ ಮತ್ತು ಇತರ ಪೊಲೀಸರು ಟ್ರ್ಯಾಕ್ಟರ್ ನಿಲ್ಲಿಸಲು ಚಾಲಕನಿಗೆ ಸಿಗ್ನಲ್ ನೀಡಿದರು, ಆದರೆ ಅವರು ನಿಲ್ಲಿಸಲಿಲ್ಲ, ಮತ್ತು ವಾಹನವು ಎಎಸ್‌ಐ ಮೇಲೆ ಹರಿದುಹೋಯಿತು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಘಟನೆ ಬಳಿಕ ಚಾಲಕ ಟ್ರ್ಯಾಕ್ಟರ್‌ನಿಂದ ಹಾರಿ ಓಡಿ ಹೋಗಿದ್ದಾನೆ. ವೇಗವಾಗಿ ಬಂದ ವಾಹನ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಚಾಲಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಾಹನದ ಮಾಲೀಕ ಮೂರನೇ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆತನ ಹೆಸರಿಗೆ ೩೦,೦೦೦ ರೂಪಾಯಿ ಬಹುಮಾನ ಘೋಷಿಸಿದ್ದೇವೆ. ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ನಾವು ಪ್ರಯತ್ನಿಸುತ್ತೇವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.