ಇಂದೋರ್: ಮಧ್ಯಪ್ರದೇಶ ಸರಕಾರ ಇಲಾಖಾ ಪರೀಕ್ಷೆಗಳ ಪ್ರವೇಶಕ್ಕೆ ಸಂಬಂಧಿಸಿದ ಪ್ರಶ್ನೆಪತ್ರಿಕೆ ಸೋರಿಕೆ ಯಾಗಿದೆ ಎಂದು ಹೇಳಿ, ನಕಲಿ ಪ್ರಶ್ನೆಪತ್ರಿಕೆ ಯನ್ನು ಆನ್‌ಲೈನ್‌ನಲ್ಲಿ ಮಾರಾಟಕ್ಕೆ ಯತ್ನಿಸಿದವನನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯ ಪ್ರದೇಶ ಲೋಕಸೇವಾ ಆಯೋಗದ ಅಧಿಕಾರಿಯೊ ಬ್ಬರು ನೀಡಿದ ದೂರಿನನ್ವಯ ಪ್ರಕರಣ ದಾಖ ಲಾಗಿದೆ. ಟೆಲಿಗ್ರಾಂ ಜಾಲತಾಣದಲ್ಲಿ ತೆರೆಯಲಾಗಿದ್ದ ಒಂದು ಖಾತೆಯ ಮೂಲಕ ವ್ಯಕ್ತಿ ಎಂಪಿಪಿಎಸ್‌ಸಿ ನಡೆಸುವ ರಾಜ್ಯ ಸೇವಾ ಪರೀಕ್ಷೆಯ ಪ್ರಿಲಿಮ್ಸ್ ಪತ್ರಿಕೆ ಸೋರಿಕೆಯಾಗಿದ್ದು, 2,500 ರೂ.ಗಳಿಗೆ ಲಭ್ಯವಿದೆ ಎಂದು ವಂಚಿಸಿದ್ದಾನೆ ಎಂದು ಅಭ್ಯರ್ಥಿಯೊಬ್ಬರು ದೂರಿದ್ದಾರೆ.