ಮಡಿಕೇರಿ: ಗ್ರಾಮೀಣ ಬ್ಯಾಂಕಿನಲ್ಲಿ ಇರುವಂತಹ ವಿಮೆ ಸೌಲಭ್ಯಗಳನ್ನು ಪ್ರತಿಯೊಬ್ಬರು ಸದುಪಯೋಗ ಮಾಡಿಕೊಳ್ಳಿ ಎಂದು ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮಡಿಕೇರಿ ಪ್ರಾದೇಶಿಕ ವಲಯ ವ್ಯವಸ್ಥಾಪಕ ಚಿಕ್ಕರಂಗಯ್ಯ ಅವರು ಸಲಹೆ ನೀಡಿದರು.
ಮಡಿಕೇರಿ ಜಿಲ್ಲೆಯ ಕರ್ಮಾಡು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನಲ್ಲಿ ಎಸ್.ಬಿ.ಐ ಜನರಲ್ ವಿಮೆವತಿಯಿಂದ ನಡೆದ ವಿಮೆ ಚೆಕ್ ವಿತರಣೆ ಕಾರ್ಯಕ್ರಮದಲ್ಲಿ ಶಾಖೆಯ ಗ್ರಾಹಕ ಮುತ್ತಾ ಎಂಬುವರು ಅಪಘಾತದಿಂದ ಮೃತಪಟ್ಟ ಹಿನ್ನಲೆ ಅವರ ನಾಮಿನಿ ಮುತ್ತಿ ಎಂಬುವರಿಗೆ ಬಂದಂತಹ ಹತ್ತು ಲಕ್ಷ ರೂ. ವಿಮೆ ಹಣದ ಚೆಕ್ ನೀಡಿ ಬಳಿಕ ಮಾತನಾಡಿದರು.
ಕೆಟ್ಟ ಸಮಯ, ಸಂದರ್ಭದಿಂದ ಕುಟುಂಬಕ್ಕೆ ಆಸರೆ ಆದವರನ್ನು ನಾವು ಕಳೆದುಕೊಂಡಾಗ ದಿಕ್ಕು ಇಲ್ಲದಂತೆ ಆಗತ್ತದೆ. ಕಷ್ಟದಲ್ಲಿ ಇರುವಂತ ಕುಟುಂಬಗಳಿಗೆ ಕೊನೆಯಲ್ಲಿ ಆರ್ಥಿಕವಾಗಿ ಸಹಾಯ ಮಾಡುವುದು ವಿಮೆ ಮಾತ್ರ. ಹಾಗಾಗಿ ಪ್ರತಿಯೊಬ್ಬರೂ ವಿಮೆ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.
ಈ ಸಂದರ್ಭದಲ್ಲಿ ಕೆಜಿಬಿ ಪ್ರಾದೇಶಿಕ ಕಚೇರಿಯ ಹಿರಿಯ ವ್ಯವಸ್ಥಾಪಕ ವಿಶ್ವಾಸ್, ಕರ್ಮಾಡು ಶಾಖೆಯ ವ್ಯವಸ್ಥಾಪಕ ಟೋನಿ, ನಗದು ಗುಮಾಸ್ತ ಸವಿತ್, ಸಿಬ್ಬಂದಿ ಲೋಹಿತ್, ಎಸ್.ಬಿ.ಐ ಜನರಲ್ ಇನ್ಶೂರೆನ್ಸ್ ಸಿಬ್ಬಂದಿ ಸಿ.ಕೆ ಶರತ್ ಸೇರಿದಂತೆ ಹಲವರು ಇದ್ದರು.