Friday, May 30, 2025
Google search engine

Homeರಾಜ್ಯಸುದ್ದಿಜಾಲಮಡಿಕೇರಿ : ನೈರ್ಮಲ್ಯ ನಿರ್ವಹಣೆ ದಿನಾಚರಣೆ

ಮಡಿಕೇರಿ : ನೈರ್ಮಲ್ಯ ನಿರ್ವಹಣೆ ದಿನಾಚರಣೆ

ಮಡಿಕೇರಿ : ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಹಿಳಾ ಸಬಲೀಕರಣ ಘಟಕ ಹಾಗೂ ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆ, ಸ್ನೇಹ ಕ್ಲೀನಿಕ್ ಇವರ ಸಂಯುಕ್ತ ಆಶ್ರಯದಲ್ಲಿ ಮಡಿಕೇರಿ ತಾಲ್ಲೂಕಿನ ಶಿಶು ಕಲ್ಯಾಣ ಸಂಸ್ಥೆಯಲ್ಲಿ ಇಂದು “ಋತು ಸ್ರಾವ ನೈರ್ಮಲ್ಯ ನಿರ್ವಹಣೆ ದಿನ” ಆಚರಿಸಲಾಯಿತು.

ಸಂಪನ್ಮೂಲ ವ್ಯಕ್ತಿಯಾದ ಸ್ನೇಹ ಕ್ಲಿನಿಕ್‍ನ ಆಪ್ತ ಸಮಲೋಚಕರಾದ ಪ್ರಮೀಳ ಅವರು ಮಕ್ಕಳಿಗೆ ಋತು ನೈರ್ಮಲ್ಯದ ಕುರಿತು ಮಾಹಿತಿ ನೀಡಿದರು.

ಋತು ಸ್ರಾವದ ಸಮಯದಲ್ಲಿ ಮಕ್ಕಳ ದೇಹದಲ್ಲಿ ಬದಲಾವಣೆಗಳು ಉಂಟಾಗುತ್ತವೆ. ಪ್ರತಿ ಹೆಣ್ಣು ಮಗುವು ಹುಟ್ಟುವಾಗಲೇ ಅಂಡಾಶಯದಲ್ಲಿ ನಿರ್ದಿಷ್ಟ ಸಂಖ್ಯೆಯ ಮೂಲ ಜೀವ ಕೋಶಗಳನ್ನು ಹೊಂದಿರುತ್ತದೆ. ಸಾಮಾನ್ಯವಾಗಿ ಮೊದಲ ಋತುಕಾಲವು ಹನ್ನೆರಡು ಮತ್ತು ಹದಿನೈದು ವಯಸ್ಸಿನ ನಡುವೆ ಆರಂಭವಾಗುತ್ತದೆ ಎಂದರು.

ನರವ್ಯೂಹದ ಮತ್ತು ಭಾವನಾತ್ಮಕ ಬದಲಾವಣೆಗಳು, ಹೃದಯ ಸಂಬಂಧಿ ಬದಲಾವಣೆಗಳು, ಮಕ್ಕಳು ಈ ಸಮಯದಲ್ಲಿ ಸ್ವಚ್ಚತೆಯಿಂದ ಇರಬೇಕು. ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಋತು ಸ್ರಾವದ ಸಮಯದಲ್ಲಿ ಸಮಸ್ಯೆಗಳಿದ್ದಲ್ಲಿ ಗೊಂದಲಗಳಿದ್ದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಸ್ನೇಹ ಕ್ಲಿನಿಕ್ ಇದ್ದು ಸೂಕ್ತ ವೈದ್ಯಾಧಿಕಾರಿಗಳು, ಆಪ್ತ ಸಮಾಲೋಚಕರನ್ನು ಸಂಪರ್ಕಿಸಬಹುದು. ನಂತರ ಮಕ್ಕಳಿಗೆ ಸಾನಿಟರಿ ಪ್ಯಾಡನ್ನು ವಿತರಿಸಲಾಯಿತು. ಮಹಿಳಾ ಸಬಲೀಕರಣ ಘಟಕದ ಸಿಬ್ಬಂದಿಗಳು ಮತ್ತು ಸಖಿ ಒನ್ ಸ್ಟಾಪ್ ಸೆಂಟರ್‍ನ ಆಡಳಿತದಿಕಾರಿ, ಪೆÇೀಷಣ್ ಅಭಿಯಾನದ ಸಂಯೋಜಕರು, ಬಾಲಭವನದ ಸಿಬ್ಬಂದಿಗಳು ಹಾಜರಿದ್ದರು.

RELATED ARTICLES
- Advertisment -
Google search engine

Most Popular