Tuesday, April 22, 2025
Google search engine

Homeರಾಜ್ಯಸುದ್ದಿಜಾಲಮಡಿಕೇರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶ

ಮಡಿಕೇರಿ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶ

ಮಡಿಕೇರಿ : ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಗಡಿ ತಪಾಸಣೆ ಕೇಂದ್ರಗಳಲ್ಲಿ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ವಾಹನ ತಪಾಸಣೆ ವೇಳೆ ದಾಖಲೆಯಿಲ್ಲದ ೯೫,೫೦೦ ಸಾವಿರ ರೂ. ನಗದನ್ನು ಚುನಾವಣೆ ನಿಯೋಜಿತ ಅಧಿಕಾರಿಗಳು ವಶಕ್ಕೆ ಪಡೆದಿರುವ ಘಟನೆ ವಿರಾಜಪೇಟೆಯ ಪೆರುಂಬಾಡಿ ತಪಾಸಣಾ ಕೇಂದ್ರದಲ್ಲಿ ನಡೆದಿದೆ.

ವಿರಾಜಪೇಟೆ ಪೆರುಂಬಾಡಿ ಪೊಲೀಸ್ ತಪಾಸಣೆ ಕೇಂದ್ರಲ್ಲಿ ಚುನಾವಣೆ ಸಂಭಂದಿಸಿದಂತೆ ಕೇರಳ ರಾಜ್ಯದಿಂದ ಗಡಿಯ ಮೂಲಕ ರಾಜ್ಯಕ್ಕೆ ಬರುವ ಎಲ್ಲಾ ರೀತಿಯ ವಾಹನಗಳನ್ನು ತಪಾಸಣೆಗೆ ಒಳಪಡಿಸಲಾಗಿದೆ. ಈ ಸಂದರ್ಭ ಮೈಸೂರಿಗೆ ತೆರಳುತ್ತಿದ್ದ ಕೇರಳದ ಇರಿಟಿ ನಗರದ ರಂಶೀದ್ (೩೫) ಅವರ ಕಾರನ್ನು ತಪಾಸಣೆ ನಡೆಸಿ, ದಾಖಲೆ ಇಲ್ಲದ ೯೫,೫೦೦ ಸಾವಿರ ರೂ. ನಗದನ್ನು ಚುನಾವಣೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದಿರುವ ಹಣವನ್ನು ಚುನಾವಣೆ ಅಧಿಕಾರಿಗಳು ಉಪ ಖಜಾನೆ ಅಧಿಕಾರಿಗಳಿಗೆ ಒಪ್ಪಿಸಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
- Advertisment -
Google search engine

Most Popular