ಕೊಡಗು: ಮಡಿಕೇರಿಯ ರಾಜಾಸೀಟ್ ಗೇಟ್ ಮುಂದೆ ರಾತ್ರಿ ಕಾವಲುಗಾರನ ಮೇಲೆ ವ್ಯಾಪಾರಿಯೋರ್ವ ಹಲ್ಲೆನಡೆಸಿರುವ ಘಟನೆ ನಡೆದಿದೆ.
ರಾಜಾಸೀಟ್ ಹೊರಗಡೆ ವ್ಯಾಪಾರ ಮಾಡುತ್ತಿದ್ದ ಜಮ್ ಶೇದ್ ಎಂಬ ವ್ಯಕ್ತಿ ತೋಟಗಾರಿಕೆ ಇಲಾಖೆ ರಾತ್ರಿ ಪಾಳಿಯ ಕಾವಲುಗಾರ ಜಯಣ್ಣ ಮೇಲೆ ಕೋಲಿನಿಂದ ಹಲ್ಲೆ ಮಾಡಿದ್ದಾನೆ.
ಹಲ್ಲೆ ತಡೆಯಲು ಬಂದ ಜಯಣ್ಣನ ಪತ್ನಿಯ ಮೇಲೂ ಜಮ್ ಶೇದ್ ಬೆಂಬಲಿಗರಿಂದ ಹಲ್ಲೆ ಮಾಡಲಾಗಿದೆ. ಜಯಣ್ಣ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ವ್ಯಾಪಾರ ಸ್ಥಗಿತ ಮಾಡಿ ಎಂದು ಹೇಳಿದಕ್ಕೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ವ್ಯಾಪಾರಿಯ ಮೇಲೆ ಸೂಕ್ತ ಕ್ರಮಕ್ಕೆ ಮುಂದಾದ ತೋಟಗಾರಿಕಾ ಇಲಾಖೆ ಮುಂದಾಗಿದ್ದು, ಆರೋಪಿಯನ್ನು ಮಡಿಕೇರಿ ಪೊಲೀಸರು ಬಂಧಿಸಿದ್ದಾರೆ.
ನಗರಸಭೆ ಸಹಕಾರದೊಂದಿಗೆ ರಾಜಾಸೀಟ್ ಮುಂಬದಿ ಅಂಗಡಿ ಬಂದ್ ಮಾಡಿಸಿ, ಎಲ್ಲಾ ಅಂಗಡಿಗಳನ್ನು ತೆರವು ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತೋಟಗಾರಿಖೆ ಇಲಾಖೆ ಸಹಾಯಕ ನಿರ್ದೇಶಕ ಪ್ರಮೋದ್ ತಿಳಿಸಿದ್ದಾರೆ.