Friday, April 11, 2025
Google search engine

Homeರಾಜ್ಯಸುದ್ದಿಜಾಲಮಡಿವಾಳ ಜಯಂತೋತ್ಸವ ಹಾಗೂ ಸಮುದಾಯ ಭವನ ಗುದ್ದಲಿ ಪೂಜೆ ಕಾರ್ಯಕ್ರಮ

ಮಡಿವಾಳ ಜಯಂತೋತ್ಸವ ಹಾಗೂ ಸಮುದಾಯ ಭವನ ಗುದ್ದಲಿ ಪೂಜೆ ಕಾರ್ಯಕ್ರಮ

ವರದಿ ಎಡತೊರೆ ಮಹೇಶ್

ಎಚ್.ಡಿ. ಕೋಟೆ : ‘ಮಡಿವಾಳ ಸಮುದಾಯಕ್ಕೆ ಸಮುದಾಯ ಭವನ ನಿರ್ಮಾಣಕ್ಕೆ 80 ಲಕ್ಷ ರೂ ಬೆಲೆ ಬಾಳುವ 8 ಕುಂಟೆ ಸ್ಥಳವನ್ನು ನೀಡಲಾಗುತ್ತಿದೆ’ ಎಂದು ಶಾಸಕ ಅನಿಲ್ ಚಿಕ್ಕಮಾದು ತಿಳಿಸಿದರು.

ಪಟ್ಟಣದ ವಿಶ್ವನಾಥಯ್ಯ ಕಾಲೋನಿಯಲ್ಲಿ‌ ನಡೆದ ಮಡಿವಾಳ ಮಾಚೀದೇವ ಜಯಂತೋತ್ಸವ ಮತ್ತು ಭೂಮಿ ಪೂಜೆ ಹಾಗೂ ನಾಮಫಲಕವನ್ನು ಅನಾವರಣಗೊಳಿಸಿ ಮಾತನಾಡಿದರು. ‘ಬೆಲೆ ಬಾಳುವ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ಹಣ ಮಂಜೂರಾಗಿದ್ದು, ಪ್ರಸ್ತುತ 25 ಲಕ್ಷ ರೂ ಹಣವನ್ನು ಬಿಡುಗಡೆ ಮಾಡಲಾಗಿದೆ ಸಮಾಜದ ಬಂಧುಗಳೆಲ್ಲಾ ಒಂದೆಡೆ ಸೇರಿ ಸಂಘಟನೆಯಾಗುವ ಹಿತದೃಷ್ಠಿಯಿಂದ ಜಯಂತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಹಸೀಲ್ದಾರ್ ಶ್ರೀನಿವಾಸ್ ಮಾತನಾಡಿ ’12 ಶತಮಾನದಲ್ಲಿ ಬಸವಣ್ಣನವರ ಅನುಯಾಯಿಗಳಾಗಿ ಮಾಚೀದೇವರು ಹಲವು ವಚನಗಳನ್ನು ರಚಿಸಿದ್ದು, ಅಸಮಾನತೆಯ ವಿರುದ್ಧ ಹೋರಾಡಿದ್ದರು ಶ್ರೀಮಂತ, ಬಡವ, ಬಲ್ಲಿದ ಎಂಬ ಭೇದ-ಭಾವಗಳಿಲ್ಲದ ರೀತಿ ಬಾಳಿದವರು ವಚನಕಾರರು, ಅವರ ಶ್ರಮವನ್ನು ನಾವು ಇಂದು ವ್ಯರ್ಥವಾಗದ ರೀತಿ ಭೇದ ಭಾವವಿಲ್ಲದ ರೀತಿ ಸಂವಿಧಾನವನ್ನು ರಚನೆ ಮಾಡಲಾಗಿದ್ದು, ನಾವೆಲ್ಲರೂ ಸಹ ಆ ಸಂವಿಧಾನದ ದಾರಿಯಲ್ಲಿ‌ನಡೆದುಕೊಂಡು ಹೋಗುತ್ತಿದ್ದೇವೆ’ ಎಂದು ತಿಳಿಸಿದರು.

ಮಡಿವಾಳ ಮಾಚೀದೇವರ ಕುರಿತು ಶಿಕ್ಷಕ ಡಾ. ಕಿರಣ್ ಸಿಡ್ಲೇಹಳ್ಳಿ ಮಾತನಾಡಿ ಎಲ್ಲಾ ಶರಣರಿಗೂ ಮಾಚಿದೇವರಿಗೂ ಒಂದು ವ್ಯತ್ಯಾಸ ಇದೆ ಮಾಚಿದೇವರು ನೇರ ನಡೆಯುಳ್ಳ ಶರಣರು ದೇವರನ್ನು ಕೂಡ ಖಂಡಿಸುತ್ತಿದ್ದ ಶ್ರೀ ವೀರ ಮಡಿವಾಳ ಮಾಚಿದೇವರು ಎಂದು ತಿಳಿಸಿದರು,

ಎರಡು ವರ್ಷದಲ್ಲಿ ಮಡಿವಾಳ ಮಾಚಿದೇವ ಸಮುದಾಯ ಭವನವನ್ನು ಪೂರ್ಣಗೊಳಿಸುತ್ತೇನೆ ನಮ್ಮ ತಂದೆ ಸಣ್ಣ ಸಮುದಾಯಗಳ ಮೇಲೆ ವಿಶೇಷ ಕಾಳಜಿ ಇಟ್ಟಿದ್ದರು ನಾನು ಸಹ ಅದನ್ನೇ ಮುಂದುವರಿಸುತ್ತೇನೆ ಮಡಿವಾಳ ಸಮುದಾಯ ಭವನಕ್ಕೆ ವಿಶೇಷ ಅನುದಾನ ನೀಡಿ ಈ ಸಮುದಾಯವನ್ನು ರಾಜಕೀಯವಾಗಿ ಸಹ ಮುಂದೆ ತರುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ.
-ಶಾಸಕ ಅನಿಲ್ ಚಿಕ್ಕಮಾದು

ಕಾರ್ಯಕ್ರಮದಲ್ಲಿ ತಹಸಿಲ್ದಾರ್ ಶ್ರೀನಿವಾಸ್, ಪುರಸಭಾ ಮುಖ್ಯಾಧಿಕಾರಿ ಸುರೇಶ್, ಸದಸ್ಯರಾದ ರಾಜು ವಿಶ್ವಕರ್ಮ, ಮಧು, ಶಾಂತಮ್ಮ ಗೋವಿಂದರಾಜು, ಸುಹಾಸಿನಿ ದಿನೇಶ್, ಮುಖಂಡರಾದ ಈರೇಗೌಡ, ಎಚ್, ಸಿ, ಮಂಜುನಾಥ್, ಮಡಿವಾಳರ ಸಂಘದ ಮಹೇಶ್, ಧರಣೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶಶಿಕಲಾ, ಬಿ.ಇ.ಓ ಕಾಂತರಾಜು, ಶಿವಪ್ಪ ಶೆಟ್ಟಿ, ಕೆಂಪು ಶೆಟ್ಟಿ, ರಮೇಶ್ ಕೋಟೆ, ನಾಗರಾಜು, ಕಾಳಶೆಟ್ಟಿ, ರಂಗಸ್ವಾಮಿ, ಸೌಮ್ಯ, B ಮಹೇಶ್ ಎಡತೊರೆ, ತಿಮ್ಮಶೆಟ್ಟಿ, ಮಲ್ಲೇಶ್, ಜವರಯ್ಯ, ಫಯಾಜ್ ಪಾಷ, ಬೀರೇಶ್, ಚಂದ್ರಶೆಟ್ಟಿ, ಬಸವರಾಜ್, ಆನಂದ್, ಬಸವರಾಜ ಕೋಟೆ, ಹೇಮಂತ್, ರಾಮಶೆಟ್ಟಿ, ಕಾಳಶೆಟ್ಟಿ, ರಾಜಣ್ಣ, ಬಟ್ಟೆ ಮಹದೇವ್, ಶಿವಣ್ಣ, ಹೊನ್ನಶೆಟ್ಟಿ, ಶಿವರಾಜು, ಸಿದ್ದಶೆಟ್ಟಿ, ಸುರೇಶ್, ವೆಂಕಟೇಶ್, ಶಿವಣ್ಣ, ಮಧು, ಮಣಿ, ಸಂತೋಷ್, ಅರುಣ್, ಮರಿಲಿಂಗಶೆಟ್ಟಿ ಎರಡು ತಾಲೂಕಿನ ಪದಾಧಿಕಾರಿಗಳು ಸಮಾಜದ ಮುಖಂಡರು ಮಹಿಳೆಯರು ಯುವಕರು ಇದ್ದರು.

RELATED ARTICLES
- Advertisment -
Google search engine

Most Popular