Friday, April 11, 2025
Google search engine

Homeವಿದೇಶಮೊರಾಕ್ಕೊದಲ್ಲಿ 3.8 ತೀವ್ರತೆಯ ಪ್ರಬಲ ಭೂಕಂಪನ: 632 ಜನರು ಸಾವು

ಮೊರಾಕ್ಕೊದಲ್ಲಿ 3.8 ತೀವ್ರತೆಯ ಪ್ರಬಲ ಭೂಕಂಪನ: 632 ಜನರು ಸಾವು

ರಬತ್ (ಮೊರಾಕ್ಕೊ) : ಮೊರಾಕ್ಕೊನಲ್ಲಿ ಸಂಭವಿಸಿದ ಪ್ರಬಲ ಭೂಕಂಪನದಲ್ಲಿ ಈವರೆಗೆ ಕನಿಷ್ಠ ೬೩೨ ಜನರು ಸಾವನ್ನಪ್ಪಿದ್ದಾರೆ ಎಂದು ದೇಶದ ವಿದೇಶಾಂಗ ಸಚಿವಾಲಯ ತಿಳಿಸಿದೆ. ಬೃಹತ್ ಕಟ್ಟಡಗಳು ಸೇರಿದಂತೆ ಯುನೆಸ್ಕೋ ವಿಶ್ವ ಪರಂಪರೆಯ ತಾಣಕ್ಕೆ ಹಾನಿಯಾಗಿದೆ. ಭೂಕಂಪನದ ವೇಳೆ ಸೆರೆ ಹಿಡಿದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

ಮೊರಾಕ್ಕೊದ ಮರಕೇಶ್‌ನ ನೈಋತ್ಯ ಭಾಗದಲ್ಲಿ ತಡರಾತ್ರಿ ೬.೮ ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದೆ ಎಂದು ಯುಎಸ್ ಜಿಯೋಲಾಜಿಕಲ್ ಸರ್ವೆ ತಿಳಿಸಿದೆ. ಮರಕೇಶ್‌ನ ನೈಋತ್ಯಕ್ಕೆ ೪೪ ಮೈಲಿ (೭೧ ಕಿಲೋಮೀಟರ್) ದೂರದಲ್ಲಿ ರಾತ್ರಿ ೧೧:೧೧ ಕ್ಕೆ ೧೮.೫ ಕಿಲೋಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ಭೂಮಿ ಕಂಪಿಸಿದ ಹಿನ್ನೆಲೆ ಭಯಭೀತರಾದ ಜನರು ಬೀದಿಗಳಲ್ಲಿ ಬಂದು ನಿಂತಿದ್ದಾರೆ. ಐತಿಹಾಸಿಕ ನಗರವಾದ ಮರ್ಕೆಚ್‌ನಿಂದ ಅಟ್ಲಾಸ್ ಪರ್ವತಗಳ ಹಳ್ಳಿಗಳವರೆಗಿನ ಕಟ್ಟಡಗಳು ಹಾನಿಗೊಳಗಾಗಿವೆ. ೩೨೯ಕ್ಕೂ ಹೆಚ್ಚು ಮಂದಿ ಗಾಯಾಳುಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಗರಗಳು ಮತ್ತು ಪಟ್ಟಣದ ಹೊರಗೆ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

RELATED ARTICLES
- Advertisment -
Google search engine

Most Popular