Friday, April 11, 2025
Google search engine

Homeರಾಜ್ಯಮಹಾ ಕುಂಭಮೇಳ-2025: ಚಾಯ್ ಪಾಯಿಂಟ್‌ ನೊಂದಿಗೆ ಕರ್ನಾಟಕ ಹಾಲು ಒಕ್ಕೂಟ ಪಾಲುದಾರಿಕೆ

ಮಹಾ ಕುಂಭಮೇಳ-2025: ಚಾಯ್ ಪಾಯಿಂಟ್‌ ನೊಂದಿಗೆ ಕರ್ನಾಟಕ ಹಾಲು ಒಕ್ಕೂಟ ಪಾಲುದಾರಿಕೆ

ಬೆಂಗಳೂರು: ಪ್ರಯಾಗರಾಜ್‌ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳಕ್ಕಾಗಿ ನಂದಿನಿ ಬ್ರಾಂಡ್‌ ಗೆ ಹೆಸರುವಾಸಿಯಾಗಿರುವ ಕರ್ನಾಟಕ ಹಾಲು ಒಕ್ಕೂಟ (KMF)ವು ಚಹಾ ಕೆಫೆ ಸರಣಿ ಚಾಯ್ ಪಾಯಿಂಟ್‌ ನೊಂದಿಗೆ ಪಾಲುದಾರಿಕೆ ಹೊಂದಿರುವುದಾಗಿ ಘೋಷಣೆ ಮಾಡಿದೆ.

ಮಹಾ ಕುಂಭಮೇಳವು ಇಂದಿನಿಂದ ಫೆಬ್ರವರಿ 26ರವರೆಗೆ ನಡೆಯುತ್ತಿದ್ದು , ಇದಕ್ಕಾಗಿ ಕರ್ನಾಟಕ ಹಾಲು ಮಹಾಮಂಡಳಿ (ನಂದಿನಿ)ಯು “ನಂದಿನಿ” ಯುಹೆಚ್‌ಟಿ ಗುಡ್‌ಲೈಫ್ ಹಾಲು ಹಾಗೂ ಇತರೆ ಉತ್ಪನ್ನಗಳ ಮಾರಾಟ ಮಾಡುವ ಸಂಬಂಧ ಚಾಯ್ ಪಾಯಿಂಟ್ ರವರೊಂದಿಗೆ ಪಾಲುದಾರಿಕೆಯನ್ನು ಹೊಂದಿರುವುದಾಗಿ ಘೋಷಣೆ ಮಾಡಿದೆ.

ಚಾಯ್ ಪಾಯಿಂಟ್ ಭಾರತ ದೇಶದ ಅತಿದೊಡ್ಡ ಟೀ ಕೆಫೆ ಸಂಸ್ಥೆಯಾಗಿರುವುದಲ್ಲದೇ, ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳ 2025 ರಲ್ಲಿ ಪಾನೀಯ ಮಾರಾಟ ವ್ಯವಹಾರದಲ್ಲಿ ಮುಂಚೂಣಿಯಲ್ಲಿದೆ.

ಚಾಯ್ ಪಾಯಿಂಟ್ ಅವರು ಮಹಾ ಕುಂಭ ಮೇಳವನ್ನು ಆಯೋಜಿಸಲಾಗಿರುವ ಸಂಕೀರ್ಣದಲ್ಲಿ 10 ಸಂಖ್ಯೆ ಮಳಿಗೆಗಳನ್ನು ತೆರೆದಿದ್ದು, ಸದರಿ ಮಳಿಗೆಗಳ ಮೂಲಕ ಮಹಾ ಕುಂಭಮೇಳದಲ್ಲಿ ಪಾಲ್ಗೊಳ್ಳುವ ಪ್ರವಾಸಿಗರಿಗೆ ಒಂದು ಕೋಟಿ ಕಪ್‌ ಗಳಿಗಿಂತಲೂ ಹೆಚ್ಚು ಚಹಾವನ್ನು ತಯಾರಿಸಿ, ಒದಗಿಸಲು ಸಿದ್ಧತೆಯನ್ನು ಮಾಡಿಕೊಂಡಿದೆ. ಒಂದೇ ಸಮಾರಂಭದಲ್ಲಿ ಅತೀ ಹೆಚ್ಚು ಕಪ್ ಚಹಾವನ್ನು ಮಾರಾಟ ಮಾಡಿ ಗಿನ್ನೀಸ್ ವಿಶ್ವ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಸಹ ಹೊಂದಿದೆ. ಮಹಾ ಕುಂಭ ಮೇಳದಲ್ಲಿ ಸಿದ್ಧಪಡಿಸಲಾಗುವ ಪ್ರತಿಯೊಂದು ಕಪ್ ಚಹಾವು ನಂದಿನಿಯ ಪರಿಶುದ್ಧ ಹಾಗೂ ಉತ್ಕೃಷ್ಟ ಗುಣಮಟ್ಟದ ಹಾಲನ್ನು ಬಳಸಿ ತಯಾರಿಸಲಾಗುತ್ತದೆ. ಚಹಾದ ಜೊತೆಗೆ ಮೆಚಾಯ್ ಪಾಯಿಂಟ್ ಮಳಿಗೆಗಳು ಸಿಹಿ ಉತ್ಪನ್ನ ಮತ್ತು ಮಿಲ್ಕ್ ಶೇಕ್‌ ಗಳು ಸೇರಿದಂತೆ ನಂದಿನಿ ಉತ್ಪನ್ನಗಳನ್ನು ಸಹ ಮಾರಾಟ ಮಾಡಲಾಗುತ್ತಿದೆ.

ಕಹಾಮ ಮತ್ತು ಚಾಯ್ ಪಾಯಿಂಟ್ ಪಾಲುದಾರಿಕೆಯು ರಾಷ್ಟ್ರದ ಉತ್ತರ ಭಾಗದ ರಾಜ್ಯ ಮಾರುಕಟ್ಟೆಗಳಲ್ಲಿ ತನ್ನ ಹೆಜ್ಜೆ ಗುರುತನ್ನು ವಿಸ್ತರಿಸಲು ಹಾಗೂ ರಾಷ್ಟ್ರವ್ಯಾಪ್ತಿ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪನ್ನಗಳನ್ನು ತಲುಪಿಸುವ ಉದ್ಧೇಶ ಹೊಂದಿದೆ.

ಮೆಚಾಯ್ ಪಾಯಿಂಟ್ ರವರು ಕಹಾಮದ “ನಂದಿನಿ”ಯ ದೀರ್ಘಾವಧಿಯ ಗ್ರಾಹಕರಾಗಿರುವುದಲ್ಲದೇ, ಭಾರತದಲ್ಲಿಯೇ ಅತಿದೊಡ್ಡ ನಂದಿನಿ ಯುಹೆಚ್‌ ಗುಡ್‌ ಲೈಫ್ ಹಾಲು, ಬೆಣ್ಣೆ, ತುಪ್ಪ ಹಾಗೂ ಪನ್ನೀರ್ ಇತ್ಯಾದಿ ಉತ್ಪನ್ನಗಳ ಬಳಕೆದಾರರಲ್ಲಿ ಒಬ್ಬರಾಗಿದ್ದಾರೆ.

ಈ ಸಹಯೋಗದ ಕುರಿತು ಕೆ.ಎಂ.ಎಫ್ ವ್ಯವಸ್ಥಾಪಕ ನಿರ್ದೇಶಕ ಬಿ. ಶಿವಸ್ವಾಮಿ ಮಾತನಾಡಿದ್ದು, ಕಹಾಮವು ಮಹಾ ಕುಂಭಮೇಳ 2025 ಕ್ಕೆ ಮೆಚಾಯ್ ಪಾಯಿಂಟ್ ರವರೊಂದಿಗೆ ಪಾಲುದಾರರಾಗಲು ಅತ್ಯಂತ ಉತ್ಸುಕರಾಗಿದ್ದು, ಸದರಿ ಕುಂಭ ಮೇಳದಲ್ಲಿ ನಂದಿನಿ ಉತ್ಪನ್ನಗಳನ್ನು ಪ್ರದರ್ಶಿಸಿ, ವೈವಿಧ್ಯಮಯ ಗ್ರಾಹಕರಿಗೆ ಒದಗಿಸುವ ಮತ್ತು ಉತ್ತರ ಭಾರತದಲ್ಲಿ ನಂದಿನಿ ಉತ್ಪನ್ನಗಳ ಲಭ್ಯತೆಯನ್ನು ಬಲಪಡಿಸಲು ಒಂದು ಸುವರ್ಣ ಅವಕಾಶವಾಗಿದೆ. ಈ ಐತಿಹಾಸಿಕ ಮೇಳದಲ್ಲಿ ನಂದಿನಿಯ ಉತ್ಪನ್ನಗಳ ಲಭ್ಯತೆಯೊಂದಿಗೆ ಮಹಾಕುಂಭ ಮೇಳದ ಯಶಸ್ಸನ್ನು ನಿರೀಕ್ಷಿಸುತ್ತಿದ್ದೇವೆ ಎಂದು ತಿಳಿಸಿದರು.

RELATED ARTICLES
- Advertisment -
Google search engine

Most Popular