
ಎಚ್.ಡಿ.ಕೋಟೆ : ಭಕ್ತರ ಭಕ್ತ ಮಹಾನ್ ಭಕ್ತ ಹನುಮಾನ್ ರಾಮಭಕ್ತರಾಗಿದ್ದು ಅವರ ಭಕ್ತಿಯ ಪರಕಷ್ಟೇ ಮತ್ತೆ ಯಾವುದೇ ಭಕ್ತರನ್ನು ಮೀರಿಸುವಂತಿದೆ ಎಂದು ಪಡವಲು ವಿರಕ್ತ ಮಠದ ಮಹದೇವ ಸ್ವಾಮೀಜಿ ತಿಳಿಸಿದರು. ಪಟ್ಟಣದ ಬಣ್ಣಾರಿ ಅಮ್ಮ ದೇವಸ್ಥಾನದ ಮುಂಭಾಗದಲ್ಲಿ ಹನುಮಾನ್ ಬೆಳ್ಳಿರಥಕ್ಕೆ ಬಿಡಗಲು ಶನಿವಾರ ಪುಷ್ಪಾರ್ಚನೆ ಮಾಡುವ ಮೂಲಕ ಶೋಭಾ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದರು.ಹನುಮ ಜಯಂತಿಯನ್ನು ಭಾರತದಾದ್ಯಂತ ವ್ಯಾಪಕವಾಗಿ ಆಚರಿಸಲಾಗುತ್ತದೆ. ಚೈತ್ರ ಮಾಸದಲ್ಲಿ ಆಚರಿಸಲಾಗುತ್ತದೆ. ರಾಮನ ದೃಢ ಭಕ್ತನಾಗಿದ್ದ ಹನುಮಂತನನ್ನು ದೇವರ ಪ್ರತಿ ರೂಪವೆಂದು ಪೂಜಿಸಲಾಗುತ್ತದೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ ಹನುಮ ಹೇಗೆ ರಾಮ ಭಕ್ತನೋ ಹಾಗೆ ನಾವೆಲ್ಲರೂ ಹನುಮ ಭಕ್ತರಾಗಿ ಅವನ ಸೇವೆಯನ್ನ ಮಾಡುತ್ತಿದ್ದೇವೆ ಎಂದರು. ತಾಲ್ಲೂಕು ಹನುಮಸೇವಾ ಸಮಿತಿ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು, ತಾಲ್ಲೂಕಿನ ಜನರಿಗೆ ಹನುಮನ ಶಕ್ತಿ ವರವಾಗಲಿ, ತಾಲ್ಲೂಕು ಮತ್ತಷ್ಟು ಅಭಿವೃದ್ಧಿಯಾಗಲಿ, ಪ್ರತಿ ವರ್ಷವೂ ಹನುಮ ಜಯಂತಿಯನ್ನು ಹೀಗೆ ಆಚರಿಸಿ ಸಂಭ್ರಮಿಸೋಣ, ಜಾತಿ ಧರ್ಮ ಭೇದವಿಲ್ಲದೆ ಅನುಮಾನ ಪೂಜೆ ಮಾಡೋಣ ಎಂದರು. ಪಟ್ಟಣದ ಬಾಪೂಜಿ ವೃತ್ತದಲ್ಲಿ ಮುಸ್ಲಿಂ ಮುಖಂಡರು ಹನುಮ ಜಯಂತಿಯ ಅಂಗವಾಗಿ ಸಾರ್ವಜನಿಕರಿಗೆ ಕುಡಿಯಲು ನೀರು, ಮಜ್ಜಿಗೆ ಮತ್ತು ಪಾನೀಯಗಳನ್ನು ವಿತರಿಸಿದರು. ಶೋಭಾಯಾತ್ರೆಯ ಮೆರವಣಿಗೆಯಲ್ಲಿ ಮುಸಲ್ಮಾನ ಬಾಂಧವರು ಭಾಗವಹಿಸಿದ್ದು ವಿಶೇಷವಾಗಿತ್ತು ಮಂಗಳವಾದ್ಯ, ನಂದಿ ಕಂಬ, ವೀರಗಾಸೆ, ಚಂಡೆ, ಕಂಸಾಳೆ ಸೇರಿದಂತೆ ಹಲವು ಜಾನಪದ ಕಲಾತಂಡದೊಂದಿಗೆ ಮೆರವಣಿಗೆ ಪ್ರಮುಖ ಬೀದಿಗಳಲ್ಲಿ ಸಾಗಿ ಪಟ್ಟಣದಲ್ಲಿರುವ ವರದರಾಜ ಸ್ವಾಮಿ ದೇವಾಲಯದ ಬಳಿ ಸಮಾವೇಶಗೊಂಡಿತು. ಶ್ರೀಕಾಂತ್, ಜಯಂತ್, ಮುತ್ತುರಾಜ್, ಚಂದ್ರಮೋಳಿ, ನಂದೀಶ್, ಶಿವರಾಜು, ಸುಧಾಕರ್, ಸಂತೋಷ್, ಜಿ ಎಚ್.ಕೆ.ಸುರೇಶ್, ಪ್ರಶಾಂತ್, ಸರ್ಕಲ್ ಇನ್ಸ್ಪೆಕ್ಟರ್ ಶಬೀರ್ ಹುಸೇನ್ ಸಬ್ ಇನ್ಸ್ಪೆಕ್ಟರ್ ಸುರೇಶ್ ಪೊಲೀಸ್ ಸಿಬ್ಬಂದಿಗಳಾದ ಮಾದೇವಸ್ವಾಮಿ ಯೋಗೇಶ್ ಮಹೇಶ್ ಕಿರಣ್ ಮಂಜು ಸುಭಾನ್ ನಂಜನಾಯಕನಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯ ಗುರುಸ್ವಾಮಿ ಮಹೇಶ್ ಪೂರ್ಣಚಂದ್ರ ಶಿವರಾಜ್ ಗೌತಮ್, ಆನಂದ್, ಪಪ್ಪು, ಸೇಟು ರಾಜೇಶ್ ಸೇಟು ನಾರಾಯಣ ಸೇಠ್ ದೀಪು, ಮಣಿ, ಪ್ರಸಾದ್, ರೇವಣ್ಣ, ಜೆಡಿಎಸ್ ಮುಖಂಡ ಜಯಪ್ರಕಾಶ್ ಚಿಕ್ಕಣ್ಣ, ಸಿದ್ದರಾಮೇಗೌಡ, ದಿನೇಶ್, ವಿ ಎಚ್ ಪಿ ಮಹದೇವಪ್ಪ, ನಾಗಣ್ಣ, ದೊಡ್ಡನಾಯ್ಕ, ಬ್ಯಾಂಕ್ ವೀರಪ್ಪ, ಅಂಗಡಿ ಸತೀಶ್ ಸಿದ್ದೇಶ್,ವರುಣ್, ಪಳನಿಸ್ವಾಮಿ, ಮೋಹನ್ ಸೇರಿದಂತೆ ಸಾವಿರಾರು ಮಂದಿ ಇದ್ದರು. ಎಚ್ ಡಿ ಕೋಟೆ ತಾಲೂಕಿನಲ್ಲಿರುವ ಮಧ್ಯದ ಅಂಗಡಿಗಳು ಸಂಪೂರ್ಣ ಬಂದಾಗಿದವು ಮುಂಜಾಗ್ರತ ಕ್ರಮವಾಗಿ ಬಿಗಿ ಪೊಲೀಸ್ ಬಂಧುಬಸ್ತನ್ನು ಸರ್ಕಲ್ ಇನ್ಸ್ಪೆಕ್ಟರ್ ಶಬ್ಬೀರ್ ಹುಸೇನ್ ರವರು ನಿಯೋಜಿಸಿದರು,
