ಚಾಮರಾಜನಗರ: ಅಖಿಲ ಕರ್ನಾಟಕ ಕನ್ನಡ ಮಹಾಸಭಾ ಹಾಗೂ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ ಸಭಾಂಗಣದಲ್ಲಿ 50 ದಿನಗಳ ಸರಣಿ ಕನ್ನಡ ರಾಜ್ಯೋತ್ಸವ ಸಮಾರಂಭದ ನಾಲ್ಕನೇಯ ದಿನ ಮಹಾಜನ ವರದಿ ಬಗ್ಗೆ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಂ ರಾಮಚಂದ್ರ ರವರು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿದರು.
ಮಹಾಜನ ವರದಿ ಜಾರಿಯಾಗಬೇಕು. ಸಮಗ್ರ ಕನ್ನಡದ ರಕ್ಷಣೆ ,ಅಭಿವೃದ್ಧಿ ಆಗಲೇಬೇಕು .ಕನ್ನಡಿಗರಿಗೆ ಉದ್ಯೋಗದ ಸೃಷ್ಟಿ ಜೊತೆಗೆ ಕನ್ನಡದ ನೆಲ ,ಜಲ ,ಭಾಷೆಯ ಬಗ್ಗೆ ವಿಶೇಷ ಅಭಿಮಾನದ ಮೂಲಕ ದೃಢವಾದ ಕಾನೂನುಗಳನ್ನು ಜಾರಿಗೆ ತರಬೇಕು. ಕನ್ನಡ ರಾಜ್ಯೋತ್ಸವ ಹಾಗೂ ಸುವರ್ಣ ಕರ್ನಾಟಕ ಸಂಭ್ರಮದ ಅಂಗವಾಗಿ ನಿರಂತರ 50 ದಿನಗಳ ಕನ್ನಡ ರಾಜ್ಯೋತ್ಸವ ಹಮ್ಮಿಕೊಂಡಿರುವ ಸಂಘಟನೆಯ ಮುಖಂಡರಿಗೆ ಅಭಿನಂದಿಸಿದರು.
ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ಅಧ್ಯಕ್ಷರಾದ ಶ್ರೀನಿವಾಸ್ ಗೌಡ ಮಾತನಾಡಿ ನಿವೃತ್ತ ನ್ಯಾಯಮೂರ್ತಿಗಳಾದ ಮಹಾಜನ್ ರವರ ನೇತೃತ್ವದಲ್ಲಿ ರಚನೆಯಾದ ಮಹಾಜನ ವರದಿ ಜಾರಿಯಾಗಬೇಕು. ಕನ್ನಡ ಪ್ರದೇಶಗಳ ಅಭಿವೃದ್ಧಿ ಆಗಬೇಕು ಎಂದರು
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್ ಋಗ್ವೇದಿ ,ತಮಿಳು ಸಂಘದ ಅಧ್ಯಕ್ಷ ಜಗದೀಶ್, ಕನ್ನಡದ ಹಿರಿಯ ಹೋರಾಟಗಾರ ಶಾ ಮುರಳಿ, ಚಾ ಎಂ ರಾಜಗೋಪಾಲ್, ಪನ್ಯದಹುಂಡಿ ರಾಜು, ಗೋವಿಂದರಾಜು, ವೇಣುಗೋಪಾಲ್, ಮೂರ್ತಿ, ಬಿಕೆ ಆರಾಧ್ಯ ,ನಂಜುಂಡಸ್ವಾಮಿ, ತಾಂಡವಮೂರ್ತಿ,ಆಟೋ ಲಿಂಗರಾಜು, ಲಕ್ಷ್ಮಿ ನರಸಿಂಹ ಪಟೇಲ್, ಮಹೇಶ್ ಗೌಡ ,ದ್ವಾರಕಿ ಉಪಸ್ಥಿತರಿದ್ದರು.