Friday, May 23, 2025
Google search engine

Homeರಾಜ್ಯಸುದ್ದಿಜಾಲಅಭಿನಂದನಾ ಸಮಾರಂಭದಲ್ಲಿ ಮಹಾಮಂಡಳದ ಅಧ್ಯಕ್ಷ ಎ.ರಮೇಶ್ ಅವರು ಹೊಸ ಯೋಜನೆ ಘೋಷಣೆ

ಅಭಿನಂದನಾ ಸಮಾರಂಭದಲ್ಲಿ ಮಹಾಮಂಡಳದ ಅಧ್ಯಕ್ಷ ಎ.ರಮೇಶ್ ಅವರು ಹೊಸ ಯೋಜನೆ ಘೋಷಣೆ

ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ:ಕರ್ನಾಟಕ ಸಹಕಾರಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಲದ ವತಿಯಿಂದರಾಜ್ಯ ಸರ್ಕಾರದ ಸಹಕಾರದಿಂದ ಕುರಿಗಾಹಿಗಳಿಗೆ ಹತ್ತು ಹಲವು ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡಿದ್ದುಅರ್ಹ ಫಲಾನುಭವಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಮಂಡಲದ ಅಧ್ಯಕ್ಷಎA.ರಮೇಶ್ ಹೇಳಿದರು.

ಕೆ.ಆರ್.ನಗರತಾಲೂಕಿನಕೆಸ್ತೂರುಕೊಪ್ಪಲುಗ್ರಾಮದತಮ್ಮ ನಿವಾಸದಲ್ಲಿ ಹಿತೈಷಿಗಳು ಮತ್ತು ಅಭಿಮಾನಿಗಳು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದಅವರುಅನುಗ್ರಹಕುರಿಗಾಹಿ ಯೋಜನೆಯಡಿ ಕುರಿಗಳನ್ನು ಕಾಯುವ ವ್ಯಕ್ತಿ ಸಾವನ್ನಪ್ಪಿದರೆಆತನಿಗೆ ೫ ಲಕ್ಷ ಪರಿಹಾರ ನೀಡಲಾಗುತ್ತದೆಎಂದರು. ಪ್ರಾಕೃತಿಕ ವಿಕೋಪ, ಅಪಘಾತ, ಕಾಡು ಪ್ರಾಣಿಗಳ ದಾಳಿಯಿಂದ ವಯಸ್ಕ ಕುರಿಗಳು ಸತ್ತರೆ ೭.೫ ಸಾವಿರ ಮತ್ತು ಮರಿಗಳು ಸತ್ತರೆ ೫ ಸಾವಿರ ಪರಿಹಾರ ನೀಡಲಿದ್ದುಇದನ್ನು ಪಡೆಯಬೇಕಾದರೆರೈತರು ಸತ್ತ ಕುರಿಗಳನ್ನು ಮಣ್ಣು ಮಾಡದೆ ಪಶುಸಂಗೋಪನಾ ಇಲಾಖೆಯಿಂದ ಮರಣೋತ್ತರ ಪರೀಕ್ಷೆ ಮಾಡಿಧೃಢೀಕರಣ ಪತ್ರ ನೀಡಿದರೆತ್ವರಿತವಾಗಿ ಹಣಕೊಡಲಾಗುತ್ತದೆಎಂದು ಮಾಹಿತಿ ನೀಡಿದರು.


ಇತ್ತೀಚಿನ ದಿನಗಳಲ್ಲಿ ಹೊರರಾಜ್ಯ ಮತ್ತುಇತರೆ ಜಿಲ್ಲೆಗಳಿಂದ ಒಂದುಕಡೆಯಿAದ ಮತ್ತೊಂದುಕಡೆಗೆ ಹೋಗುವ ಕುರಿಗಾಹಿಗಳ ಮೇಲೆ ಹಲ್ಲೆ, ಸುಲಿಗೆ ಸೇರಿದಂತೆಇತರೆ ಕೃತ್ಯಗಳ ಮೂಲಕ ಕುರಿಗಳನ್ನು ಕಳ್ಳತನ ಮಾಡುವ ಪ್ರಕರಣ ಹೆಚ್ಚುತ್ತಿದ್ದುಇದನ್ನುತಡೆಗಟ್ಟು ಸಲುವಾಗಿ ಸಂಚಾರಿ ಕುರಿಗಾಹಿಗಳ ಹಿತರಕ್ಷಣಾಕಾಯ್ದೆಜಾರಿ ಮಾಡುವ ಮೂಲಕ ಕುರಿಗಾಹಿಗಳಿಗೆ ಪ್ರತ್ಯೇಕ ಕಾನೂನು ಜಾರಿಗೊಳಿಸಲು ತೀರ್ಮಾನ ಮಾಡಲಾಗಿದೆಎಂದು ನುಡಿದರು.
ಕಳೆದ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ೨೦೧೬-೧೭ರಲ್ಲಿ ಕರ್ನಾಟಕ ಸಹಕಾರಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಲ ಆರಂಭಿಸುವ ಮೂಲಕ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿ ಕುರಿಗಾಹಿಗಳಿಗೆ ಅನುಕೂಲ ಮಾಡಿಕೊಡಲಾಗಿದ್ದುಇದರಿಂದ ಇAದುಅದುದೊಡ್ಡಉದ್ಯಮವಾಗಿ ಬೆಳೆದಿದೆ ಎಂದು ಸಂತಸ ವ್ಯಕ್ತಪಡಿಸಿದ ಅಧ್ಯಕ್ಷರು ಮುಂದಿನ ದಿನಗಳಲ್ಲಿ ಕುರಿಗಾಹಿಗಳ ಆತ್ಮರಕ್ಷಣೆಗಾಗಿ ಬಂದೂಕುತರಬೇತಿ ನೀಡಲಾಗುತ್ತದೆಎಂದುತಿಳಿಸಿದರು.

ರಾಜ್ಯದ ವಿವಿಧ ಭಾಗಗಳಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳ ಸಹಯೋಗದೊಂದಿಗೆ ನಮ್ಮ ಮಹಾ ಮಂಡಲವು ನ್ಯಾಯಯುತವಾಗಿ ಕುರಿಗಳನ್ನು ಖರೀದಿ ಮಾಡಿರೈತರಿಗೆ ವೈಜ್ಞಾನಿಕ ಬೆಲೆ ನೀಡುವ ಸಲುವಾಗಿ ೫೨ ಮಾರುಕಟ್ಟೆಗಳನ್ನು ತೆರೆಯುವುದರಜತೆಗೆ ೬೦೦ ಸಹಕಾರ ಸಂಘಗಳನ್ನು ತೆರೆದಿದೆಎಂದು ಹೇಳಿದರು.
ಕೆಎಂಎಫ್ ಮಾದರಿಯಲ್ಲಿ ಮಹಾ ಮಂಡಲವನ್ನು ವಿಸ್ತರಿಸಲು ಬೃಹತ್ಯೋಜನೆರೂಪಿಸಲಾಗಿದ್ದು ಆ ಮೂಲಕ ಕುರಿ, ಕುರಿ ಮಾಂಸ, ಕುರಿಗೊಬ್ಬರ, ಚÀರ್ಮ ಸೇರಿದಂತೆಇತರ ಉತ್ಪನ್ನಗಳ ಸಂಗ್ರಹ ಮತ್ತು ಮಾರಾಟಕ್ಕೆರಾಜ್ಯಾದ್ಯಂತ ಸೂಕ್ತ ಮಾರುಕಟ್ಟೆತೆರೆದು ಕುರಿಗಾಹಿಗಳಿಗೆ ಭದ್ರತೆಕಲ್ಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದ್ದುಇದರೊಂದಿಗೆ ಮುಖ್ಯಮಂತ್ರಿಗಳು ಮತ್ತು ಸಂಬAಧಿತ ಸಚಿವರನ್ನು ಭೇಟಿ ಮಾಡಿಕೋರಿಕೆ ಪತ್ರ ನೀಡಲಾಗಿದೆಎಂದರು.

ಕರ್ನಾಟಕ ಸಹಕಾರಕುರಿ ಮತ್ತು ಮೇಕೆ ಸಾಕಾಣಿಕೆದಾರರ ಸಂಘಗಳ ಮಹಾ ಮಂಡಲದಅಧ್ಯಕ್ಷನಾಗಿ ನಾನು ಆಯ್ಕೆಯಾಗಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಪಶುಸಂಗೋಪನಾ ಸಚಿವಕೆ.ವೆಂಕಟೇಶ್, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರಸಿದ್ದರಾಮಯ್ಯ, ಕೆ.ಆರ್.ನಗರ ಶಾಸಕ ಡಿ.ರವಿಶಂಕರ್ ಸಹಕಾರ ನೀಡಿದ್ದುಅವರಆಶಯದಂತೆ ಕೆಲಸ ನಿರ್ವಹಿಸುವ ಭರವಸೆ ವ್ಯಕ್ತಪಡಿಸಿದರು.

ಸಮಾರಂಭಕ್ಕೆ ಬನ್ನಿ: ಮೇ,೨೩ರಂದುಕೆ.ಆರ್.ನಗರ ಪಟ್ಟಣದಲ್ಲಿಕ್ಷೇತ್ರದ ವ್ಯಾಪ್ತಿಯಲ್ಲಿ ೫೧೪ ಕೋಟಿರೂ ವೆಚ್ಚದಲ್ಲಿ ವಿವಿಧಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆಇತರ ಇಲಾಖಾ ಸಚಿವರುಗಳು ಆಗಮಿಸುತ್ತಿದ್ದು ಶಾಸಕ ಡಿ.ರವಿಶಂಕರ್ಅಧ್ಯಕ್ಷತೆಯಲ್ಲಿ ನಡೆಯುವಕಾರ್ಯಕ್ರಮಕ್ಕೆ ಸರ್ವರೂ ಆಗಮಿಸಬೇಕು ಎಂದುಅಧ್ಯಕ್ಷಎA.ರಮೇಶ್ಕೋರಿದರು.

ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷಜಯರಾಮೇಗೌಡ, ಮಾಜಿ ಸದಸ್ಯ ಲೋಕೇಶ್, ಕೆಸ್ತೂರುಗ್ರಾಮ ಪಂಚಾಯಿತಿ ಮಾಜಿಅಧ್ಯಕ್ಷ ಮಹದೇವ್, ಜಿಲ್ಲಾಕಾಂಗ್ರೆಸ್ ಮುಖಂಡರಾದ ಸಿ.ಟಿ.ಶಿವರಾಜು, ಚಿಕ್ಕೇಗೌಡ ಮತ್ತಿತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular