ಚಾಮರಾಜನಗರ: ಶಿವಾಜಿಯವರ ನಾಯಕತ್ವ, ಆಡಳಿತ, ಧೈರ್ಯ, ಸೈನಿಕ ವ್ಯವಸ್ಥೆ ,ಕಂದಾಯ ನೀತಿ, ಸ್ತ್ರೀ ನೀತಿ, ರಾಜ್ಯ ನೀತಿ ,ತೀರ್ಮಾನ, ಯುದ್ಧ ತಂತ್ರ, ಯೋಚನೆ ಯೋಜನೆ ,ಸಾಧನೆ ವಿಶ್ವದ ಆಡಳಿತಗಾರರೆಲ್ಲರಿಗೂ ಮಾದರಿ. ಶಿವಾಜಿ ಮಹಾರಾಜ್ ಭಾರತದ ಉಳಿವಿಗಾಗಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿದ ವೀರ ಪುರುಷ. ಭಾರತದ ಸನಾತನ ಧರ್ಮವನ್ನು ಉಳಿಸಿ ಸಂರಕ್ಷಿಸಿದ ಮಹಾ ಶೌರ್ಯವಂತರು ಶಿವಾಜಿ ಮಹಾರಾಜರು. ಇವರ ಇತಿಹಾಸದ ಅಧ್ಯಯನವು ವಿಶ್ವದ ನಾಯಕರೆಲ್ಲರಿಗೂ ಮಾದರಿ ಎಂದು ಜೈ ಹಿಂದ್ ಪ್ರತಿಷ್ಠಾನದ ಅಧ್ಯಕ್ಷರು, ಜಿಲ್ಲಾ ಗಮಕ ಕಲಾ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ತಿಳಿಸಿದರು.
ಅವರು ಜೈ ಹಿಂದ್ ಪ್ರತಿಷ್ಠಾನ ನಗರದ ಋಗ್ವೇದಿ ಕುಟೀರದ ಜೈ ಹಿಂದ್ ಕಟ್ಟೆಯಲ್ಲಿ ಹಮ್ಮಿಕೊಂಡಿದ್ದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ಶಿವಾಜಿ ಮಹಾರಾಜರ ಆಡಳಿತ ಸೈನ್ಯದ ವ್ಯವಸ್ಥೆ, ರಾಷ್ಟ್ರನಿರ್ಮಾಣಕ್ಕಾಗಿ ಅರ್ಪಣೆ, ರಾಜನೀತಿ, ಸರ್ವ ಧರ್ಮದ ಸಂರಕ್ಷಣೆ ,ಪ್ರಜೆಗಳ ಕಲ್ಯಾಣ ,ಪ್ರೀತಿ, ನೀತಿಗಳು, ಧೈರ್ಯ, ಸಾಹಸ ಗುಣಗಳು ನಮಗೆಲ್ಲರಿಗೂ ಸದಾ ಸ್ಪೂರ್ತಿಯನ್ನು ತುಂಬುತ್ತದೆ. ಮಾವಳಿ ಜನರನ್ನು ಸಂಘಟಿಸಿ ಸುಸಜ್ಜಿತವಾದ ಸೈನ್ಯವನ್ನು ನಿರ್ಮಿಸಿ ಅಂದಿನ ಮೊಘಲರ ಮತ್ತು ಬಿಜಾಪುರ ಸುಲ್ತಾನರ ವಿರುದ್ಧ ಹಲವಾರು ಕದನಗಳನ್ನು ಎದುರಿಸಿ ಮರಾಠ ಸಾಮ್ರಾಜ್ಯವನ್ನು ಸ್ಥಾಪಿಸಿ ಭಾರತದ ಸನಾತನ ಧರ್ಮವನ್ನು ಕಟ್ಟಿದ ಮಹಾನ್ ವ್ಯಕ್ತಿ. ಶಿವಾಜಿ ಮಹಾರಾಜರ ಮಾತೃಭಕ್ತಿ ,ಗುರುಭಕ್ತಿ, ದೇಶಭಕ್ತಿ ಯುವಕರಿಗೆ ವಿದ್ಯಾರ್ಥಿಗಳಿಗೆ ಆದರ್ಶವಾಗಬೇಕು. ಕುಟುಂಬ, ಪ್ರಾಂತ್ಯ, ದೇಶವನ್ನು ಸಂರಕ್ಷಿಸಲು ಉತ್ತಮ ಮಾರ್ಗದ ಮೂಲಕ ಗುರುಗಳ ಮಾರ್ಗದರ್ಶನದ ಮೂಲಕ ವ್ಯಕ್ತಿತ್ವ ನಿರ್ಮಾಣ ಸಾಧ್ಯವೆಂದು ಜಗತ್ತಿಗೆ ತೋರಿಸಿದವರು ಶಿವಾಜಿ.
ದೈವ ಭಕ್ತಿ, ಮಾತೃಭಕ್ತಿಯ ವಿಶೇಷ ಅನುಗ್ರಹದಿಂದ ಜಗತ್ತನ್ನು ನೂತನವಾಗಿಯೇ ನಿರ್ಮಿಸಬಹುದು, ಯಾವುದನ್ನಾದರೂ ಸಾಧಿಸಬಹುದು ಎಂಬುದನ್ನು ಇಂದಿಗೂ ಇತಿಹಾಸ ಶಿವಾಜಿಯ ಮೂಲಕ ನಮಗೆ ಅರಿವು ಮಾಡಿಕೊಡುತ್ತದೆ. ಕರ್ನಾಟಕ ಸರ್ಕಾರವು ಶಿವಾಜಿ ಜಯಂತಿಯನ್ನು ವಿಜೃಂಭಣೆಯಿಂದ ನಾಡಿನ ಎಲ್ಲೆಡೆ ಆಚರಿಸುವ ಮೂಲಕ ಸೌಹಾರ್ದ ವಾತಾವರಣವನ್ನು ನಾಡು ನುಡಿಗಳ ಕಟ್ಟುಪಾಡುಗಳನ್ನು ಬಿಟ್ಟು ಸಹೋದರತೆಯ ಭಾವನೆಯನ್ನು ಬೆಳೆಸುತ್ತಿರುವುದು ಹೆಮ್ಮೆಯ ವಿಷಯವೆಂದು, ಸರ್ಕಾರಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.
ಋಗ್ವೇದಿ ಯೂಥ್ ಕ್ಲಬ್ ನಿರ್ದೇಶಕರಾದ ಸಾನಿಕ ಮಾತನಾಡಿ ಶಿವಾಜಿ ಹೆಸರೇ ರೋಮಾಂಚನ. ಶಿವಾಜಿಯ ಹೆಸರನ್ನು ಹೇಳಿದಾಗಲೇ ನಮಗೆ ಸಾಹಸದ ಕಥೆಗಳು ನೆನಪಾಗುತ್ತವೆ . ಬಾಲ್ಯದಲ್ಲಿಯೇ ಹೋರಾಟದ ಮೂಲಕ ಕೋಟೆ ನಿರ್ಮಾಣ ಮಾಡಿ ಸಾಮ್ರಾಜ್ಯ ಸ್ಥಾಪನೆ ಮಾಡುವ ಶಿವಾಜಿಯ ಹೋರಾಟ ಗೆರಿಲ್ಲಾ ತಂತ್ರಗಳು ಮಕ್ಕಳಿಗೆ ವಿಶೇಷವಾಗಿ ಗೌರವ ಮೂಡುತ್ತದೆ ಎಂದರು.
ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪವನ್ನು ಅರ್ಪಿಸಿ ಚಿತ್ರಕಲಾವಿದ ಅರ್ ರವಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಕುಸುಮ, ಮುರುಗೇಶ್, ಬಾಲು, ಸಂತು, ಶ್ರಾವ್ಯ ಋಗ್ವೇದಿ , ಮನು ಮುಂತಾದವರು ಉಪಸ್ಥಿತರಿದ್ದರು