ಮುಂಬಯಿ: ಚುನಾವಣೆ ಹೊಸ್ತಿಲಿನಲ್ಲಿರುವ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷವು 48 ಅಭ್ಯರ್ಥಿಗಳ ತನ್ನ ಮೊದಲ ಪಟ್ಟಿಯನ್ನು ಗುರುವಾರ ರಾತ್ರಿ ಬಿಡುಗಡೆಗೊಳಿಸಿದೆ. ಈ ಪೈಕಿ ಕಾಂಗ್ರೆಸ್‌ನ ರಾಜ್ಯ ಘಟಕದ ಮುಖ್ಯಸ್ಥ ನಾನಾ ಪಟೋಲೆ ಅವರಿಗೆ ಸಕೋಲಿ ಕ್ಷೇತ್ರದಿಂದ ಹಾಗೂ ಮಾಜಿ ಸಿಎಂ ಪೃಥ್ವಿರಾಜ್ ಚೌಹಾಣ್‌ಗೆ ದಕ್ಷಿಣ ಕರಾಡ್‌ನಲ್ಲಿ ಟಿಕೆಟ್ ನೀಡಲಾಗಿದೆ.
ವಿಪಕ್ಷ ನಾಯಕ ವಿಜಯ್ ವಡೆತ್ತಿವಾರ್, ವಿಜಯ್ ಬಾಳಾ ಸಾಹೇಬ್ ಥೋರಾಟ್, ಅಮಿತ್ ದೇಶ್‌ಮುಖ್ ಸೇರಿದಂತೆ ಪ್ರಮುಖ ನಾಯಕರನ್ನು ಕಾಂಗ್ರೆಸ್ ಕಣಕ್ಕಿಳಿಸಿದೆ. ರಾಜ್ಯದ ಒಟ್ಟು 255 ಕ್ಷೇತ್ರಗಳ ಪೈಕಿ ಮಹಾ ವಿಕಾಸ ಅಘಾಡಿಯ ಮೂರು ಪಕ್ಷಗಳಾದ ಕಾಂಗ್ರೆಸ್, ಶರದ್ ಎನ್‌ಸಿಪಿ, ಉದ್ಧವ್ ಶಿವಸೇನೆ ಪಕ್ಷಗಳು ತಲಾ 85 ಕ್ಷೇತ್ರಗಳನ್ನು ಹಂಚಿಕೊಂಡಿವೆ.