Friday, April 11, 2025
Google search engine

HomeUncategorizedರಾಷ್ಟ್ರೀಯಅಕ್ರಮವಾಗಿ ಮರ ಕಡಿಯುವವರ ವಿರುದ್ಧ ಕ್ರಮಕ್ಕೆ ಮುಂದಾದ ಮಹಾರಾಷ್ಟ್ರ ಸರ್ಕಾರ

ಅಕ್ರಮವಾಗಿ ಮರ ಕಡಿಯುವವರ ವಿರುದ್ಧ ಕ್ರಮಕ್ಕೆ ಮುಂದಾದ ಮಹಾರಾಷ್ಟ್ರ ಸರ್ಕಾರ

ಮಹಾರಾಷ್ಟ್ರ: ಇನ್ಮುಂದೆ ಅಕ್ರಮವಾಗಿ ಮರ ಕಡಿದು, ಮಾರಾಟ ಮಾಡಿದರೆ 50 ಸಾವಿರ ರೂ. ದಂಡ ತೆರಬೇಕಾಗುತ್ತದೆ. ರಾಜ್ಯದಲ್ಲಿ ಸದಾ ಹಸಿರು ನೆಲೆಸಿರುವಂತೆ ಮಾಡಲು ಅಕ್ರಮವಾಗಿ ಮರ ಕಡಿಯುವವರ ವಿರುದ್ಧದ ಕ್ರಮಕ್ಕೆ ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ.

ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅಕ್ರಮವಾಗಿ ಮರಗಳನ್ನು ಕಡಿಯುವವರಿಗೆ ವಿಧಿಸುವ ದಂಡವನ್ನು 1000 ರೂ.ಗಳಿಂದ 50,000 ರೂ.ಗಳಿಗೆ ಹೆಚ್ಚಿಸುವ ಪ್ರಸ್ತಾವನೆಯನ್ನು ಕೃಷಿ ಇಲಾಖೆ ಮಂಡಿಸಿತು.

ಇದನ್ನು ರಾಜ್ಯದಲ್ಲಿ ಜಾರಿಗೆ ತರಲು ಕೃಷಿ ಇಲಾಖೆ ಸರ್ಕಾರದ ನಿರ್ಣಯವನ್ನು ಹೊರಡಿಸುತ್ತದೆ. ಅಸ್ತಿತ್ವದಲ್ಲಿರುವ ಮಹಾರಾಷ್ಟ್ರ ಮರ ಕಡಿಯುವ ಕಾಯಿದೆ 1964 ಅನ್ನು ಸೆಕ್ಷನ್ 4 ರಲ್ಲಿ ತಿದ್ದುಪಡಿ ಮಾಡಲಾಗುವುದು, ಇದರಿಂದಾಗಿ ಮರ ಕಡಿಯುವವರು, ಅಕ್ರಮವಾಗಿ ಕತ್ತರಿಸಿದ ಮರವನ್ನು ಸಾಗಿಸುವ ವಾಹನಗಳನ್ನು ವಶಪಡಿಸಿಕೊಳ್ಳುವುದು ಮುಂತಾದ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ಹೇಳಲಾಗಿದೆ.

RELATED ARTICLES
- Advertisment -
Google search engine

Most Popular