Saturday, April 12, 2025
Google search engine

Homeರಾಜ್ಯಸುದ್ದಿಜಾಲಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ

ಚಾಮರಾಜನಗರ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಭಾಂಗಣದಲ್ಲಿ ಆಚರಿಸಲಾಯಿತು. ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿ ಉದ್ಘಾಟಿಸಿ ಮಾತನಾಡಿದ

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು ಹಾಗೂ ಶ್ರೀ ರಾಮಶೇಷ ಪಾಠಶಾಲೆಯ ಪ್ರಾಚಾರ್ಯರಾದ ಪ್ರದೀಪ್ ಕುಮಾರ್ ದೀಕ್ಷಿತ್ ಉದ್ಘಾಟನೆ ನೆರವೇರಿಸಿ ಮಹರ್ಷಿ ವಾಲ್ಮೀಕಿ ಅವರ ಜನ್ಮ ರಹಸ್ಯ, ವೃತ್ತಾಂತಗಳು ಹಾಗೂ ರಾಮಾಯಣದ ರಚನೆ ಬಗ್ಗೆ ಸಮಗ್ರವಾಗಿ ವಿವರಿಸಿ ವಾಲ್ಮೀಕಿ ಅವರು ಭಾರತೀಯ ಚಿಂತನೆಯ ಮಹಾನ್ ವ್ಯಕ್ತಿ. ರಾಮಾಯಣದ ಮೂಲಕ ಸತ್ಯ ,ನಿಷ್ಠೆ ,ಪ್ರಾಮಾಣಿಕತೆ, ಗೌರವ, ಪ್ರೀತಿ, ವಿಶ್ವಾಸ ಹಾಗೂ ಜೀವನ ಮೌಲ್ಯಗಳನ್ನು ವ್ಯಕ್ತಪಡಿಸಿ ಸಮಗ್ರವಾದ ಮಾನವನ ವಿಕಾಸಕ್ಕೆ ಅರ್ಥಪೂರ್ಣವಾಗಿ ವಿವರಿಸಿದ್ದಾರೆ. ವಾಲ್ಮೀಕಿ ರಾಮಾಯಣವನ್ನೂ ಸಂಶೋಧಿಸಿ ಯುವಕರಿಗೆ ಮತ್ತು ಮಕ್ಕಳಿಗೆ ಪಠ್ಯದಲ್ಲಿ ಅಳವಡಿಸಿ ಬಾಲ್ಯದಿಂದಲೂ ಸಮಗ್ರತೆಯ ಭಾರತೀಯ ಚಿಂತನೆಗಳನ್ನು ತಿಳಿಸುವ ಕಾರ್ಯವನ್ನು ಮಾಡಬೇಕಿದೆ. ರಾಮಾಯಣ ಮಹಾಕಾವ್ಯವನ್ನು ಅರಿತು ಆ ಎಲ್ಲಾ ಆದರ್ಶಗಳನ್ನು ಪಾಲಿಸುವ ದಿಕ್ಕಿನಲ್ಲಿ ಪ್ರತಿಯೊಬ್ಬರು ಅರಿತಾಗ ರಾಮ ರಾಜ್ಯದ ಕನಸು ನನಸಾಗುತ್ತದೆ .ರಾಮ ರಾಜ್ಯವು ಪ್ರತಿಯೊಬ್ಬರು ಸಂತೋಷ ,ನೆಮ್ಮದಿ, ಪ್ರೀತಿಯ, ಗೌರವದಿಂದ ಸಹಬಾಳ್ವೆಯ ಜೀವನವನ್ನು ಉನ್ನತಗೊಳಿಸಿಕೊಂಡು ಬದುಕುವುದೇ ಆಗಿದೆ . ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಹಾಕವಿ ವಾಲ್ಮೀಕಿ ಅವರ ಜನ್ಮದಿನವನ್ನು ಆಚರಿಸಿ ಚಿಂತಿಸಿ ಅರಿಯುವ ಕಾರ್ಯಕ್ರಮ ಉನ್ನತವಾದದ್ದು ಎಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರಾದ ವೀರಶೆಟ್ಟಿಯವರು ರಾಮಾಯಣದ ಕೆಲವು ಶ್ಲೋಕಗಳನ್ನು ಗಮಕದ ಮೂಲಕ ವಾಚಿಸಿದರು. ಅಖಿಲ ಕರ್ನಾಟಕ ಕನ್ನಡ ಮಹಾಸಭಾದ ರಾಜ್ಯ ಅಧ್ಯಕ್ಷರಾದ ಶ್ರೀನಿವಾಸ ಗೌಡ ಮಾತನಾಡಿ ಮಹರ್ಷಿ ವಾಲ್ಮೀಕಿ ಅವರು ಅಮೂಲ್ಯವಾದ ಸಾಹಿತ್ಯವನ್ನು ರಚಿಸಿದ್ದಾರೆ. ರಾಮ ರಾಜ್ಯದ ಪರಿಕಲ್ಪನೆ ಮಹೋನ್ನತವಾದದ್ದು. ಭಾರತವಲ್ಲದೆ ವಿಶ್ವದ ಅನೇಕ ದೇಶಗಳಲ್ಲಿ ರಾಮಾಯಣದ ಬಗ್ಗೆ ಚಿಂತನ ಮಂಥನ ನಡೆಸಿ ಪಠ್ಯದಲ್ಲಿ ಅಳವಡಿಸಿಕೊಂಡು ಸನ್ಮಾರ್ಗದಲ್ಲಿ ಹೋಗಲು ದಾರಿದೀಪವಾಗಿದೆ ಎಂದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಸುರೇಶ್ ಎನ್ ಋಗ್ವೇದಿ ಅಧ್ಯಕ್ಷತೆ ವಹಿಸಿ ಮಾತನಾಡಿ 24,000 ಶ್ಲೋಕಗಳ ಬೃಹತ್ ಮಹಾ ಕಾವ್ಯವನ್ನು ರಚಿಸಿದ ಮಹರ್ಷಿ ವಾಲ್ಮೀಕಿ ಅವರು ಇಡೀ ವಿಶ್ವಕ್ಕೆ ಆದರ್ಶ ಪ್ರಾಯರು. ಮಾನವ ಕಲ್ಯಾಣದ ಸಮಗ್ರ ಚಿಂತನೆ ಸಾರ ಹಾಗೂ ದಿವ್ಯ ದೃಷ್ಟಿಕೋನಗಳ ಮಾಹಿತಿ ಇರುವ ರಾಮಾಯಣ ಗ್ರಂಥ ಪ್ರತಿಯೊಬ್ಬರ ಮನೆಯಲ್ಲಿಯೂ ಅಧ್ಯಯನವಾಗಬೇಕು. ಪ್ರತಿ ಮನಸ್ಸುಗಳು ಇದರಿಂದ ಸಂತೋಷ, ಸ್ಪೂರ್ತಿ, ನೆಮ್ಮದಿ ಹಾಗೂ ಸಹಕಾರ ಅಹಂಕಾರ ರಹಿತ ಜೀವನವನ್ನು ನಡೆಸಲು ಸಾಧ್ಯವೆಂದು ತಿಳಿಸಿದರು. ಭಾರತೀಯ ಸಾಹಿತ್ಯವೇ ರಾಮಾಯಣ ಮತ್ತು ಮಹಾಭಾರತವಾಗಿದೆ ಎಂದು ಬಣ್ಣಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ನಿರ್ದೇಶಕರಾದ ಬಿಕೆ ಆರಾಧ್ಯ, ಶಿವಲಿಂಗ ಮೂರ್ತಿ, ಸರಸ್ವತಿ , ಪರಮೇಶ್ವರಪ್ಪ,ಕನ್ನಡ ಹೋರಾಟಗಾರರಾದ ನಂಜುಂಡಸ್ವಾಮಿ . ಲೋಕೇಶ್ ಇದ್ದರು.

RELATED ARTICLES
- Advertisment -
Google search engine

Most Popular