ಮೈಸೂರು: ಮಹರ್ಷಿ ವಾಲ್ಮೀಕಿರವರ ಜಯಂತಿಯ ಹಿನ್ನೆಲೆಯಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಎಂ.ಕೆ ಸೋಮಶೇಖರ್ ರವರು ಮುಖಂಡರು,ಕಾರ್ಯಕರ್ತರೊಡಗೂಡಿ ತಮ್ಮ ಗೃಹ ಕಚೇರಿ “ಜನನಿ”ಯಲ್ಲಿ ಮಹರ್ಷಿ ವಾಲ್ಮೀಕಿ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದರು.
ನಂತರ ಮಾತನಾಡಿದ ಅವರು ಶ್ರೀ ಮಹರ್ಷಿ ವಾಲ್ಮೀಕಿರವರು ಭಾರತ ಕಂಡಂತಹ ಒಬ್ಬ ಮಹಾನ್ ಸಂಸ್ಕೃತ ಕವಿ.ಮೊದಲ ಕಾವ್ಯ ರಚಿಸಿದ ಆದಿ ಕವಿ.ರಾಮಾಯಣದ ಮೂಲಕ ಸಾಮಾಜಿಕ ಕ್ರಾಂತಿಯನ್ನು ಪ್ರಾರಂಭಿಸಿ ಯಾವುದೇ ಪ್ರಚಾರವಿಲ್ಲದೇ ಸಾಮಾಜಿಕ ಸಾಮರಸ್ಯ ಮತ್ತು ದಲಿತರ ಉನ್ನತಿಗಾಗಿ ಶ್ರಮಿಸಿದ್ದಂತಹ ಮೇರು ವ್ಯಕ್ತಿತ್ವ.ಪ್ರತಿಯೊಬ್ಬರಲ್ಲೂ ಅಗಾಧವಾದ ಜ್ಞಾನ,ಶಕ್ತಿ ಇರುತ್ತದೆ ಅದೇ ರೀತಿ ವಾಲ್ಮಿಕಿ ಮಹರ್ಷಿಗಳಲ್ಲೂ ಸಹ ಉದಾತ್ತ ಚಿಂತನೆಗಳು,ಸಾಮಾಜಿಕ ಅರಿವು, ವೈಜ್ಞಾನಿಕ ಮನೋಭಾವ ಇದ್ದುದ್ದರಿಂದಲೇ ಜಗದೆತ್ತರಕ್ಕೆ ವಿಸ್ತಾರಗೊಂಡಿದ್ದಾರೆ.
ರಾಮಾಯಣದೊಳಗಿನ ಸದ್ಗುಣಗಳು ಮತ್ತು ಜ್ಞಾನವನ್ನು ಪ್ರಶಂಶಿಸುತ್ತಾರೆ. ಸೌಹಾರ್ಧತೆ ಎಂಬುದು ಭಾರತೀಯರ ಸಂಸ್ಕೃತಿ ಅದು ಭಾರತೀಯರ ಹೃದಯದಲ್ಲಿ ಯಾವಾಗಲೂ ಅಂತರ್ಗತವಾಗಿರುತ್ತದೆ ಎಂಬುದನ್ನು ರಾಮಾಯಣದ ಮೂಲಕ ವಾಲ್ಮೀಕಿ ಮಹರ್ಷಿ ಸಮಾಜಕ್ಕೆ ತಿಳಿಸಿದ್ದಾರೆ.ಮಹರ್ಷಿ ವಾಲ್ಮೀಕಿ ರಚಿಸಿದ ರಾಮಾಯಣ ಮಹಾಕಾವ್ಯವೂ ನಮಗೆ ಯಾವಾಗಲೂ ಸ್ಫೂರ್ತಿಯ ಮೂಲವಾಗಿ ಉಳಿಯುತ್ತದೆ.
ಅದರ ಆಧಾರದ ಮೇಲೆ ನಾವು ಶ್ರೇಷ್ಠ ಮತ್ತು ವೈಭವಯುತ ಸಮಾಜವನ್ನು ರಚಿಸಬಹುದು.ಮಹರ್ಷಿ ವಾಲ್ಮೀಕಿ ರವರು ತಮ್ಮ ಜೀವನದ ಮೂಲಕ ಪ್ರತಿಪಾದಿಸಿದಂತಹ ಮೌಲ್ಯಗಳನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕು.ಆ ಮೂಲಕ ಸಾಮಾಜಿಕ ಕ್ರಾಂತಿ,ಸಾಮರಸ್ಯದ ಸಂದೇಶಗಳನ್ನು ಸಮಾಜಕ್ಕೆ ನೀಡಬಹುದು ಎಂದು ತಿಳಿಸಿದರು.
ರಾಮಾಯಣ ಮಹಾಕಾವ್ಯ ಕೇವಲ ರಾಮನ ಸ್ತುತಿಯನ್ನು ಮಾತ್ರ ತಿಳಿಸುವುದಿಲ್ಲ.ಅದು ವಿಶ್ವಕ್ಕೆ ಭಾರತೀಯ ಸಂಸ್ಕೃತಿಯ ಹಿರಿಮೆಯ ಮೊದಲ ಸಂದೇಶವಾಗಿದೆ.ರಾಮಾಯಣ ಮಹಾಕಾವ್ಯದ ಮೂಲಕ ಮಹರ್ಷಿ ವಾಲ್ಮೀಕಿ ರವರು ಭಾರತೀಯರ ಪ್ರತೀ ಮನೆ ಮನಗಳಲ್ಲಿ ಪರಿಚಿತರಾಗಿದ್ದಾರೆ.ಆದರ್ಶ ಜೀವನ ಹೇಗಿರಬೇಕು,ಆದರ್ಶ ಭಕ್ತಿ ಹೇಗಿರಬೇಕು,ಆದರ್ಶ ತಂದೆ ಹೇಗಿರಬೇಕು,ಸಹೋದರ ಹೇಗಿರಬೇಕು ,ಪತಿ ಹೇಗಿರಬೇಕು,ರಾಜ ಹೇಗಿಬೇಕು, ತಾಯಿ,ಪತ್ನಿ ಹೇಗಿರಬೇಕು ಈ ಎಲ್ಲ ಅಂಶಗಳನ್ನು ಮಹಾಕಾವ್ಯದ ಮೂಲಕ ಪಾತ್ರಗಳ ಮುಖಾಂತರ ರೂಪಿಸಿದ್ದಾರೆ.ಗುರಿ ಪ್ರಾಮಾಣಿಕವಾಗಿದ್ದರೆ ಕಷ್ಟಪಟ್ಟು ದುಡಿಯುವ ಇಚ್ಛೆ ಇರುತ್ತದೆ , ಜ್ಞಾನವನ್ನು ಪಡೆಯಲು ಬಯಸುತ್ತದೆ.ನಿರ್ಧಾರವನ್ನು ತಲುಪುವ ಸಾಮರ್ಥ್ಯವನ್ನು ವೃದ್ಧಿಸುತ್ತದೆ.ಆಗ ಯಾವುದೇ ವ್ಯಕ್ತಿ ಎತ್ತರಕ್ಕೆ ಬೆಳೆಯಲು ಸಾಧ್ಯವಾಗುತ್ತದೆ ಎಂಬುದನ್ನು ವಾಲ್ಮೀಕಿ ರವರು ಉದಾಹರಿಸಿದ್ದಾರೆ.
ಒಬ್ಬ ಮಹಾನ್ ಚೇತನರ ಜೀವನದ ಒಂದು ಕ್ಷಣದ ಘಟನೆಯಿಂದ ಅವರ ಜೀವನ ಮತ್ತು ಆಲೋಚನೆಗಳಲ್ಲಿ ಇಂತಹ ಆಳವಾದ ಬದಲಾವಣೆಯು ಯುವಕರಿಗೆ ಸ್ಫೂರ್ತಿಯಾಗಿದೆ. ಒಂದು ವಾಕ್ಯ ಒಂದು ಘಟನೆ ಅವರನ್ನು ಮಹಾನ್ ಋಷಿಯನ್ನಾಗಿ ಪರಿವರ್ತಿಸಿತು.ಆಗಾಗೀ ಮಹರ್ಷಿ ವಾಲ್ಮೀಕಿಯವರಲ್ಲಿದ್ದ ಸಂವೇದನಾ ಶೀಲತೆ ಮತ್ತು ಬುದ್ಧಿವಂತಿಕೆಯನ್ನು ಅರಿಯಬೇಕಿದೆ.ವಾಲ್ಮೀಕಿಯವರು ಜಗತ್ತಿಗೆ ನೀಡಿದ ಮಹಾನ್ ಸಂದೇಶವೇನೆಂದರೆ ಸುಳ್ಳು ಸತ್ಯಕ್ಕಿಂತ ಎಷ್ಟೇ ಪ್ರಬಲ ಮತ್ತು ಶಕ್ತಿಯುತ, ಬುದ್ಧಿವಂತಿಕೆಯಿಂದ ಇದ್ದರು ಅಂತಿಮವಾಗಿ ಸತ್ಯವೇ ಗೆಲ್ಲುತ್ತದೆ ಎಂದು ತಿಳಿಸಿದ್ದಾರೆ ಅವರ ಆದರ್ಶ ಮತ್ತು ಅವರು ತಿಳಿಸಿರುವ ಸಾಮಾಜಿಕ ಸಂದೇಶ , ಸಾಮರಸ್ಯದ ಅಂಶಗಳು ನಾವೆಲ್ಲರೂ ಪಾಲಿಸುವ ಅಳವಡಿಸಿಕೊಳ್ಳುವ ಮೂಲಕ ಸತ್ವಯುತ ಸಮಾಜವನ್ನು ಕಟ್ಟಬಹುದು ಎಂದು ತಿಳಿಸಿದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾ ಜಿ.ಸೋಮಶೇಖರ್, ಶ್ರೀಧರ್,ಮುಖಂಡರಾದ ವಿಜಯ್ ಕುಮಾರ್,ಕೃಷ್ಣ,ರವಿಶಂಕರ್,ಜೋಗಿ ಮಹೇಶ್,ಅಶೋಕ ಪುರಂ ಮಂಜುನಾಥ್, ಶಂಕರ್ ಬಾಸ್,ವೀಣಾ,ಆಶ್ರಯ ಸಮಿತಿ ಸದಸ್ಯೆ ಲೀಲಾ ಪಂಪಾಪತಿ, ಮಹ್ಮದ್ ಫಾರೂಕ್,ರವಿಶಂಕರ್, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷರಾದ ವಿನಯ್ ಕುಮಾರ್.ಜೆ,ಬಿ.ಎಸ್.ಎನ್.ಎಲ್ ಮಹದೇವೇಗೌಡ,ಡೈರಿ ವೆಂಕಟೇಶ್,ಮಾಜಿ ಆಶ್ರಯ ಸಮಿತಿ ಸದಸ್ಯ ನಾಸೀರ್,ಮೈನಾರಿಟಿ ಅಧ್ಯಕ್ಷರಾದ ಕಲೀಂ ಷರೀಫ್,ಶಾದಿಖ್ ಉಲ್ಲಾ ರೆಹಮಾನ್,ಮಾಜಿ ಪಾಲಿಕೆ ಸದಸ್ಯರಾದ ಆರ್.ಹೆಚ್.ಕುಮಾರ್,ಹರೀಶ್ ಗಂಧನಹಳ್ಳಿ, ಮಧುರಾಜ್,ಭಾಗ್ಯ ಚಂದ್ರಶೇಖರ್ , ರಾಘವೇಂದ್ರ (ಮೊಟ್ಟೆ), ಸಂತೋಷ್ (ಸಂತು), ಅರುಣ್ ಗಂಗಾಧರ್, ಪುಟ್ಟಸ್ವಾಮಿ,ಚಿಕ್ಕಲಿಂಗು,ಮೀನು ಮಹೇಶ್ ,ಸಹಾಯಕ ಇಂಜಿನಿಯರ್ ಧನಂಜಯ, ರಾಕೇಶ್ , ರವೀಶ್ ಮತ್ತಿತರರು ಉಪಸ್ಥಿತರಿದ್ದರು.