Saturday, April 19, 2025
Google search engine

Homeರಾಜ್ಯಸುದ್ದಿಜಾಲಹೆಚ್‌.ಡಿ.ಕುಮಾರಸ್ವಾಮಿ ಪರ ಸಾ.ರಾ.ಮಹೇಶ್ ಭರ್ಜರಿ ರೋಡ್ ಶೋ

ಹೆಚ್‌.ಡಿ.ಕುಮಾರಸ್ವಾಮಿ ಪರ ಸಾ.ರಾ.ಮಹೇಶ್ ಭರ್ಜರಿ ರೋಡ್ ಶೋ


ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಭತ್ತದನಾಡು ಕೆ.ಆರ್.ನಗರ ಪಟ್ಟಣದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್ ಅಪಾರ ಜನಸ್ತೋಮದೊಂದಿಗೆ ತಮ್ಮ ನೆಚ್ಚಿನ ನಾಯಕ ಮಂಡ್ಯ ಲೋಕಸಭಾ ಕ್ಷೇತ್ರದ ಎನ್‌ಡಿಎ ಮೈತ್ರಿ ಪಕ್ಷದ ಅಭ್ಯರ್ಥಿ ಮಾಜಿ ಮುಖ್ಯಮಂತ್ರಿ ಹೆಚ್‌ಡಿ.ಕುಮಾರಸ್ವಾಮಿ ಪರವಾಗಿ ಭರ್ಜರಿ ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

ಪಟ್ಟಣದ ಕಂಠೇನಹಳ್ಳಿ ಬಡಾವಣೆಯಲ್ಲಿರುವ ಶ್ರೀ ಮಾರಮ್ಮ ದೇವಾಲಯದಲ್ಲಿ ನೆಚ್ಚಿನ ಕುಮಾರಣ್ಣ ಅಧಿಕ ಮತಗಳಿಂದ ಗೆಲುವು ಸಾಧಿಸಲಿ ಎಂದು ವಿಶೇಷವಾಗಿ ಪೂಜೆ ಸಲ್ಲಿಸಿ ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ರೈತ ನಾಯಕ, ತಾಯಿ ಹೃದಯ ಹೊಂದಿರುವ, ಮಣ್ಣಿನ ಮಗ ಕುಮಾರಣ್ಣ ಗೆಲುವು ಶತಸಿದ್ದ ಎಂದು ಅಭಿಮಾನಿಗಳು ಜೈಕಾರ ಘೋಷಣೆ ಕೂಗಿ ತಮ್ಮ ಅಭಿಮಾನ ಮೆರೆದರು.

ಬಳಿಕ ಮಾಜಿ ಸಚಿವ ಸಾ.ರಾ.ಮಹೇಶ್ ರೋಡ್ ಶೂ ಮೂಲಕ ಪಟ್ಟಣದ ೨೩ ವಾಡ್ ಗಳಲ್ಲಿ ಬಿರಿಸಿನ ಪ್ರಚಾರದ ವೇಳೆ ಪಟ್ಟಣಕ್ಕೆ ಮಾಜಿ ಪ್ರಧಾನಮಂತ್ರಿ ದೇವೇಗೌಡರು, ಮಾಜಿ ಸಿ.ಎಂ. ಕುಮಾರಣ್ಣ ವಿಶೇಷವಾಗಿ ಕಾಳಜಿ ವಹಿಸಿ ಅಭಿವೃದ್ಧಿ ಕಾರ್ಯ ಮಾಡಿದ್ದಾರೆ, ರೈಲ್ವೆ ನಿಲ್ದಾಣ, ನೀರಾವರಿ ಯೋಜನೆ ಸೇರಿದಂತೆ ಅನೇಕ ಅಭಿವೃದ್ಧಿ ಕೆಲಸಗಳನ್ನು ಮಾಜಿ ಪ್ರಧಾನಮಂತ್ರಿ ದೇವೇಗೌಡರು ಅಂದೇ ಮಾಡಿದ್ದರು.
ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ವೇಳೆ ಕೋಟ್ಯಾಂತರ ಅನುದಾನ ನೀಡಿದ್ದಾರೆ ರೈತರ ಜೀವನಾಡಿ ಶ್ರೀರಾಮ ಸಕ್ಕರೆ ಕಾರ್ಖಾನೆ ಪುನಾರಂಬಿಸಿದ್ದು ೨೦೦ ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆಗೆ ಅನುದಾನ ನೀಡಿದ್ದಲ್ಲದೆ ಪಟ್ಟಣದಲ್ಲಿ ಉತ್ತಮ ರಸ್ತೆಗಳ ನಿರ್ಮಾಣಕ್ಕೆ ನಗರತ್ಥೋನ ಯೋಜನೆಗೆ ೧೦ ಕೋಟಿ ಅನುದಾನ ನೀಡಿದ್ದರು, ಉತ್ತಮವಾಗಿ ರಸ್ತೆಗಳ ಕಾಮಗಾರಿ ಮುಗಿದಿದೆ ಎಂದು ತಿಳಿಸಿದರು.

ಆಂಜನೇಯ ಬ್ಲಾಕ್, ಬಸವೇಶ್ವರ ಬಡಾವಣೆ, ಮೀನಾಕ್ಷಿ ಬ್ಲಾಕ್, ಶ್ರೀರಾಮ ಬಡಾವಣೆ, ಬನ್ನಿಮಂಟಪ, ವಿಜಯನಗರ, ಮುಸ್ಲಿಂ ಬ್ಲಾಕ್, ವಿನಾಯಕ ಬಡಾವಣೆ, ಮಧುವನಹಳ್ಳಿ, ಬಡಾವಣೆಗಳು ಸೇರಿದಂತೆ ಪಟ್ಟಣದ ೨೩ ವಾರ್ಡ್ ಗಳಲ್ಲಿ ಚುನಾವಣೆ ಪ್ರಚಾರ ಕೈಗೊಂಡರು.
ಈ ಸಂದರ್ಭದಲ್ಲಿ ನವನಗರ ಅರ್ಬನ್ ಬ್ಯಾಂಕ್ ಅಧ್ಯಕ್ಷ ಕೆ.ಎನ್.ಬಸಂತ್, ವಸ್ತುಗಳ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಿರ್ಲೆ ಶ್ರೀನಿವಾಸ್ ಗೌಡ, ತಾಲ್ಲೂಕು ಜಾದಳ ವಕ್ತಾರ ಕೆ.ಎಲ್.ರಮೇಶ್, ಜಿಲ್ಲಾ ಜೆಡಿಎಸ್ ಮಹಿಳಾ ಘಟಕದ ಅಧ್ಯಕ್ಷೆ ದಾಕ್ಷಾಯಿಣಿ, ಪುರಸಭಾ ಸದಸ್ಯರಾದ ಪ್ರಭುಶಂಕರ್, ಉಮೇಶ್, ಸಂತೋಷ್ ಗೌಡ, ತೊಂಟದರ್ಯ, ಜಗದೀಶ್, ಮಂಜುಳ ಚಿಕ್ಕವೀರು, ಮಾಜಿ ಸದಸ್ಯ ಬಾಂಬೆ ರಾಜಣ್ಣ, ಕೆ.ಬಿ.ಸುಬ್ರಮಣ್ಯ, ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್, ತಾ. ಬಿಜೆಪಿ ಮಾಜಿ ಕಾರ್ಯದರ್ಶಿ ಮಾರ್ಕಂಡೇಯ, ಆಶೋಕ್, ಜಾದಳ ಮುಖಂಡರಾದ ವಡ್ಡರವಿ, ಸೂರಿ, ದೀಪಾಹರೀಶ್, ಗೀತಾದೇವ್, ಮೋಹನಕುಮಾರಿ, ರೂಪಸತೀಶ್, ರೀನಾ, ವಿಜಯ್, ಮೊಬೈಲ್ ಸತೀಶ್, ಕೇಬಲ್ ಮಲ್ಲಿ, ಹೆಬ್ಬಾಳು ಶಿವಣ್ಣ ಇನ್ನಿತರರು ಹಾಜರಿದ್ದಾರು.

RELATED ARTICLES
- Advertisment -
Google search engine

Most Popular