ಮೈಸೂರು : ಮಹಿಷ ದಸರಾ ಕಾರ್ಯಕ್ರಮದಲ್ಲಿ ಪ್ರೊಫೆಸರ್ ನಂಜರಾಜ ಅರಸ್ ಅವರು ಇದೀಗ ವಿವಾದಾತ್ಮಕ ಹೇಳಿಕೆ ನೀಡಿದ್ದು, ಚಾಮುಂಡಿ ಕೇವಲ ಕಾಲ್ಪನಿಕ ವ್ಯಕ್ತಿ. ಆದರೆ ಮಹಿಶಾಸುರ ಜೀವಂತ ವ್ಯಕ್ತಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಂದು ಭಾನುವಾರ ಮೈಸೂರಿನ ಮಹಿಷ ದಸರಾದಲ್ಲಿ ಪ್ರೊಫೆಸರ್ ನಂಜರಾಜ್ ಅರಸ್ ಮಾತನಾಡಿ, ಚಾಮುಂಡಿ ಜೀವಂತ ವ್ಯಕ್ತಿ ಅಲ್ಲ. ಕೇವಲ ಕಾಲ್ಪನಿಕ. ಮಹಿಷಾಸುರ ಜೀವಂತ ವ್ಯಕ್ತಿ. ಚಾಮುಂಡಿ ಕೇವಲ ಕಾಲ್ಪನಿಕ ಅಸುರ ಮತ್ತು ರಾಕ್ಷಸ ಅನ್ನೋದು ಸಮುದಾಯಗಳ ಹೆಸರು. ದೇವರ ಪುರಾಣ ಓದಿದರೆ ಸೂಸೈಡ್ ಮಾಡ್ಕೋಬೇಕು. ಇಷ್ಟು ಕೀಳಾದವರು ಎನಿಸುತ್ತದೆ. ಚಾಮುಂಡಿ ಮಹಿಷಾಸುರನನ್ನು ಕೊಂದಿಲ್ಲ. ಚಾಮುಂಡಿ ಜೀವಂತ ವ್ಯಕ್ತಿ ಅಲ್ಲ ಕೇವಲ ಕಾಲ್ಪನಿಕ ಎಂದು ಪ್ರೊಫೆಸರ್ ನಂಜರಾಜೇ ಇದೆ ವೇಳೆ ವಿವಾದಾತ್ಮಕ ಮಾತು ಹೇಳಿದ್ದಾರೆ.