ವರದಿ: ಬೆಕ್ಕರೆ ಸತೀಶ್ ಆರಾಧ್ಯ
ಪಿರಿಯಾಪಟ್ಟಣ: ಸಮಾಜ ಸೇವೆ ರೋಟರಿಯ ಮುಖ್ಯ ಉದ್ದೇಶವಾಗಿದೆ ಎಂದು ರೋಟರಿ ಅಧ್ಯಕ್ಷ ಎಂ.ಎಂ ರಾಜೇಗೌಡ ತಿಳಿಸಿದರು.
ಪಟ್ಟಣದ ರೋಟರಿ ಮಿಡ್ ಟೌನ್ ಕಚೇರಿಯಲ್ಲಿ ಜಿಲ್ಲಾ ಕಾರ್ಯಕ್ರಮವಾದ ಸಂಧ್ಯಾ ಸುರಕ್ಷಾ ಕಾರ್ಯಕ್ರಮ ಅಂಗವಾಗಿ ಪಟ್ಟಣದಲ್ಲಿ ಕಳೆದ 50 ವರ್ಷಗಳಿಂದ ಸೊಪ್ಪಿನ ವ್ಯಾಪಾರ ಮಾಡಿಕೊಂಡು ಸ್ವಾವಲಂಬಿ ಜೀವನ ನಡೆಸುತ್ತಿರುವ ಹಿರಿಯ ಮಹಿಳೆ ಸಣ್ಣೀರಮ್ಮ ಅವರನ್ನು ಸನ್ಮಾನಿಸಿ ಮಾತನಾಡಿದರು.

ರೋಟರಿ ಮಿಡ್ ಟೌನ್ ಪಿರಿಯಾಪಟ್ಟಣ ವತಿಯಿಂದ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಸನ್ಮಾನಿಸಲಾಗುತ್ತಿದೆ ಅಂತೆಯೆ ರೋಟರಿಯ ಮುಖ್ಯ ಕಾರ್ಯಕ್ರಮಗಳನ್ನು ಕಡ್ಡಾಯ ಅನುಸರಿಸಿ ಕಾರ್ಯಗತಗೊಳಿಸಲಾಗುತ್ತಿದೆ, ರೋಟರಿ ಸಂಸ್ಥೆಗೆ ಹಲವು ಇತಿಹಾಸವಿದ್ದು ಪೋಲಿಯೋ ನಿರ್ಮೂಲನೆ ಮಾಡುವಲ್ಲಿ ಸರ್ಕಾರದ ಜೊತೆ ಪ್ರಮುಖ ಪಾತ್ರ ವಹಿಸಿ ಕರ್ತವ್ಯ ನಿರ್ವಹಿಸಿದೆ, ಶಿಕ್ಷಣವನ್ನು ಪ್ರೋತ್ಸಾಹಿಸಲು ಮೂಲಭೂತ ಸೌಕರ್ಯ ವಂಚಿತ ಸರ್ಕಾರಿ ಶಾಲೆ ಹಾಗೂ ಅಂಗನವಾಡಿಗಳನ್ನು ಗುರುತಿಸಿ ಸದಸ್ಯರ ಸಹಕಾರದೊಂದಿಗೆ ಕೈಲಾದ ಸಹಾಯ ಮಾಡಲಾಗುತ್ತಿದೆ, ಮುಂಬರುವ ದಿನಗಳಲ್ಲಿಯೂ ಈ ಕಾರ್ಯ ಮತ್ತಷ್ಟು ಹೆಚ್ಚಿಸಿ ಸಮಾಜದ ಅಭಿವೃದ್ಧಿಗೆ ಸಹಕರಿಸಲಾಗುವುದು ಎಂದರು.
ಜೋನಲ್ ಲೆಫ್ಟಿನೆಂಟ್ ತಿರುಮಲಾಪುರ ರಾಜೇಗೌಡ ಮಾತನಾಡಿ ರೋಟರಿ ಎಂದರೆ ಕೇವಲ ಒಂದು ಸಂಸ್ಥೆಯಾಗದೆ ಸಮಾಜದ ಏಳಿಗೆಗಾಗಿ ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಯಾಗಿ ಸಾಮಾಜಿಕ ಕೆಲಸಗಳನ್ನು ನಿರ್ವಹಿಸುವ ಮೂಲಕ ಇತರ ಸಂಘ ಸಂಸ್ಥೆಗಳಿಗೆ ಮಾದರಿಯಾಗಿದೆ ಎಂದರು.
ಈ ಸಂದರ್ಭ ಕಾರ್ಯದರ್ಶಿ ಎಂ.ಪಿ ರಾಜು, ಹೆಗಡೆ, ಹಿರಿಯ ಸದಸ್ಯರಾದ ಸತ್ಯನಾರಾಯಣ್, ವಿನಯ್ ಶೇಖರ್, ಬಸವೇಗೌಡ, ನಾಗರಾಜು, ಬಿ.ಎಸ್ ಹರೀಶ್, ಡಾ.ಸುಬ್ರಮಣ್ಯ, ಡಾ.ಸುನಿಲ್, ಡಾ.ವಿರುಪಾಕ್ಷ, ಚಂದ್ರು, ಸುನಿಲ್, ನಟರಾಜ್, ವಾಸುಕಿ, ದೇವರಾಜ್, ಹೇಮೇಶ್, ಸುರೇಶ್ ಹಾಗೂ ಸನ್ಮಾನಿತ ಮಹಿಳೆ ಸಣ್ಣೀರಮ್ಮ ಕುಟುಂಬದವರು ಇದ್ದರು.