ವರದಿ: ಎಡತೊರೆ ಮಹೇಶ್
ಎಚ್ ಡಿ ಕೋಟೆ: ವಿಶೇಷ ಚೇತನರಲ್ಲಿ ನ್ಯೂನ್ಯತೆಯನ್ನು ಗುರುತಿಸದೆ ಸಾಮರ್ಥ್ಯವನ್ನು ಗುರುತಿಸುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರವಂತೆ ಬಿಡಗಲು ಪಡುವಲ ಶ್ರೀ ಶ್ರೀ ವಿರಕ್ತ ಮಠದ ಶ್ರೀ ಶ್ರೀ ಮಹದೇವಸ್ವಾಮಿಗಳು ಆಶೀರ್ವಚನ ನೀಡಿದರು.
ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸರಗೂರು, ಜೀವನ್ ಜ್ಯೋತಿ ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಒಕ್ಕೂಟ ಹೆಚ್ ಡಿ ಕೋಟೆ, ಶ್ರೀ ಚಿಕ್ಕದೇವಮ್ಮ ವಿಶೇಷ ಚೇತನರ ಕ್ಷೇಮಾಭಿವೃದ್ಧಿ ಒಕ್ಕೂಟ ಸರಗೂರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಮೈಸೂರು, ಸಮುದಾಯದ ಸ್ಥಳೀಯ ಸಂಘ ಸಂಸ್ಥೆಗಳ ಸಹಭಾಗಿತ್ವದೊಂದಿಗೆ ಅಂತರಾಷ್ಟ್ರೀಯ ವಿಶೇಷ ಚೇತನರ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸಿ ಮಾತನಾಡಿದ ಶ್ರೀ ಶ್ರೀ ಮಹದೇವಸ್ವಾಮಿಗಳು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ ಸಂಸ್ಥೆಯು ಸಾಮಾಜಿಕ ಕಳಕಳಿಯಿಂದ ವಿಶೇಷ ಚೇತನರ ಕೆಲಸವನ್ನು ಮಾಡುತ್ತಿದ್ದು, ವಿಕಲ ಚೇತನರು ಖಿನ್ನತೆ ಭಾವನೆಯನ್ನು ದೂರ ಮಾಡಿ ಸಮಾಜದಲ್ಲಿ ಎಲ್ಲರು ಒಂದೇ ಎನ್ನುವ ಮನೋಭಾವನೆಯಿಂದ ಬದುಕು ನಡೆಸಬೇಕು.
ಇಲಾಖೆಯಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು, ವಿಶೇಷ ಚೇತನರಲ್ಲಿ ವಿಶೇಷವಾದ ಸಾಮರ್ಥ್ಯವಿದ್ದು ಅದನ್ನು ಹೊರಗೆ ತೆಗೆಯಬೇಕು ಅದರ ಮೂಲಕ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಪ್ರೆರೇಪಿಸಬೇಕು ಎಂದು ಹೇಳಿದರು.
ನಂತರ ಮಾತನಾಡಿದ ಶಂಕರಗೌಡ ಪಾಟೀಲ ವೈವಿಧ್ಯತೆಯಿಂದ ಕೂಡಿದ ದೇಶದಲ್ಲಿ ವಿಕಲ ಚೇತನರು ಮತ್ತು ಸಾಮಾನ್ಯ ಜನರು ಬದುಕುತಿದ್ದು ವಿಕಲ ಚೇತನರು ತಮ್ಮ ಪ್ರತಿಭೆಳನ್ನು ಹೊರ ತಂದು ಸಮಾಜದ ಮುಖ್ಯವಾಹಿನಿಗೆ ಬರಬೇಕು ಇಲಾಖೆಯಲ್ಲಿ ತುಂಬಾ ಸೌಲಭ್ಯಗಳಿದ್ದು ಅವುಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಮೈಸೂರು ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗರಾಜ್ ವಿಕಲ ಚೇತನರಿಗೆ ಸಮುದಾಯದಲ್ಲಿ ಅನುಕಂಪ ಕಿಂತ ಅವಕಾಶ ನೀಡಬೇಕು, ಕರ್ನಾಟಕ ಸರ್ಕಾರ ಶೇ 5 ಮೀಸಲಾತಿ ನೀಡಿದ್ದು ಇದನ್ನು ಬಳಸಿಕೊಂಡು ನೌಕರಿಯನ್ನು ಹೊಂದಬೇಕು ನಾವು ಸರ್ಕಾರಕ್ಕೆ ಟ್ಯಾಕ್ಸ್. ಕಟ್ಟಬೇಕು ಇತರರಂತೆ ಸರಿ ಸಮಾನವಾಗಿ ಬದುಕಬೇಕು, ಶಿಕ್ಷಣದ ಮಹತ್ವವನ್ನು ಅರಿತು ಶಿಕ್ಷಣ ಪಡೆದು ಉನ್ನತ ಸ್ಥಾನವನ್ನು ಅಲಂಕರಿಸಬೇಕು ಆಗ ವಿಶೇಷ ಚೇತನರ ಬದುಕು ಸುಧಾರಿಸುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸರಗೂರು ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ರಾಧಿಕಾ ಎಸ್ ಶ್ರೀನಾಥ್, ಹೆಚ್.ಡಿ. ಕೋಟೆ ಲಯನ್ಸ್ ಕ್ಲಬ್ ಅಧ್ಯಕ್ಷರಾದ ಭಾಸ್ಕರ್, ಸರಗೂರು ವರ್ತಕರ ಮಂಡಳಿ ಅಧ್ಯಕ್ಷ ಶ್ರೀನಿವಾಸ್, ಹೆಚ್. ಡಿ ಕೋಟೆ ಮತ್ತು ಸರಗೂರು ತಾಲೂಕಿನ ಒಕ್ಕೂಟದ ಅಧ್ಯಕ್ಷರಾದ ನಾಗರಾಜು, ವೃಷಬೆಂದ್ರ, ಸ್ವಾಮಿ ವಿವೇಕಾನಂದ ಯೂತ್ ಮುಮೆಂಟ್ ನ ಮಾನವ ಸಂಪನ್ಮೂಲ ವಿಭಾಗದ ಹಿರಿಯ ವ್ಯವಸ್ಥಾಪಕರಾದ ಬೀನಾ ಸಿ.ಜೆ., ಕಾರ್ಯಕ್ರಮ ವ್ಯವಸ್ಥಾಪಕರಾದ ರಮೇಶ್ ಎಂ.ಪಿ, ಎಂ. ಆರ್. ಡಬ್ಯು ಮಹದೇವಯ್ಯ, ದೇವರಾಜು, ಸಂಸ್ಥೆಯ ಸಿಬ್ಬಂದಿವರ್ಗದವರಾದ ಸದಾಶಿವ, ಶ್ರೀಧರ್, ಪೂರ್ಣಿಮಾ, ನೀಲಾವತಿ, ಸಂಜನಾ, ಮಮತಾ, ಶಿವಲಿಂಗ ಹ್ಯಾಂಡಪೋಸ್ಟ್, ಭಾಗ್ಯಮ್ಮ, ಮಹದೇವ ನಾಯಕ ತಾಲೂಕಿನ ವಿಶೇಷ ಚೇತನ ಪುನರ್ವಸತಿ ಕಾರ್ಯಕರ್ತರು, ವಿಶೇಷ ಚೇತನ ಬಂಧುಗಳು ಪೋಷಕರು ಇದ್ದರು.