Friday, April 4, 2025
Google search engine

Homeಬ್ರೇಕಿಂಗ್ ನ್ಯೂಸ್ಮೈತ್ರಿ ಪಾಲಾದ ಮಂಡ್ಯ ನಗರಸಭೆ: ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್, ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆ

ಮೈತ್ರಿ ಪಾಲಾದ ಮಂಡ್ಯ ನಗರಸಭೆ: ಅಧ್ಯಕ್ಷರಾಗಿ ಜೆಡಿಎಸ್‌ನ ನಾಗೇಶ್, ಉಪಾಧ್ಯಕ್ಷರಾಗಿ ಬಿಜೆಪಿಯ ಅರುಣ್ ಕುಮಾರ್ ಆಯ್ಕೆ

ಮಂಡ್ಯ: ತೀವ್ರ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಮಂಡ್ಯ ನಗರಸಭಾ ಚುನಾವಣೆಯಲ್ಲಿ ಅಧಿಕಾರವನ್ನು ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿತ್ತು.

ಇಷ್ಟೆಲ್ಲ ಪ್ರಹಸನಗಳ ನಡುವೆ ಮಂಡ್ಯ ನಗರಸಭಾ ಚುನಾವಣೆಯಲ್ಲಿ ಗೆಲುವು ಮೈತ್ರಿ ಪಾಲಾಗಿದ್ದು ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮಂಡ್ಯ ನಗರ ಸಭೆಯ ಗದ್ದುಗೆ ಹಿಡಿದಿವೆ. ಜೆಡಿಎಸ್ ನ ಬೆಂಬಲಿತ ಅಭ್ಯರ್ಥಿಗಳಾದ ನಾಗೇಶ್ ಅಧ್ಯಕ್ಷರಾಗಿ, ಅರುಣ್ ಕುಮಾರ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಇದರಿಂದಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಂಭ್ರಮಿಸಿ ಕುಮಾರಸ್ವಾಮಿಗೆ ಜೈಕಾರ ಕೂಗಿ ಹರ್ಷ ವ್ಯಕ್ತಪಡಿಸಿದರು.

ನಗರಸಭೆಯಲ್ಲಿ ಪ್ರಸ್ತುತ ಜೆಡಿಎಸ್ 18, ಕಾಂಗ್ರೆಸ್ 10, ಪಕ್ಷೇತರರು- 5, ಬಿಜೆಪಿಯ 2 ಸದಸ್ಯರು ಸೇರಿದಂತೆ ಒಟ್ಟು 35 ಸದಸ್ಯರು ಇದ್ದರು. ಎಂಪಿ 1, ಶಾಸಕ 1 ಸೇರಿ 37 ಜನರಿಗೆ ಮತದಾನದ ಹಕ್ಕು. ಒಟ್ಟು ಜೆಡಿಎಸ್‌ 18 ಸದಸ್ಯರು. ಒಟ್ಟು ಬಿಜೆಪಿಯ 2 ಸದಸ್ಯರು. ಒಟ್ಟು ಕಾಂಗ್ರೆಸ್‌ನ 10 ಸದಸ್ಯರು. ಒಟ್ಟು ಪಕ್ಷೇತರ 5 ಸದಸ್ಯರು.

ಜೆಡಿಎಸ್‌ 15+, ಬಿಜೆಪಿ 2+, ಕಾಂಗ್ರೆಸ್‌ನಿಂದ ಅಪರೇಷನ್ 1+, ಸಂಸದ 1 = ಜೆಡಿಎಸ್‌ 19.

ಕಾಂಗ್ರೆಸ್ 9+, ಪಕ್ಷೇತರ 5+, ಜೆಡಿಎಸ್‌ನಿಂದ ಅಪರೇಷನ್ 3+, ಶಾಸಕ 1 = 18

ಒಂದು ಮತಗಳ ಅಂತರದಿಂದ ಕಾಂಗ್ರೆಸ್ ವಿರುದ್ಧ ಜೆಡಿಎಸ್ ಭರ್ಜರಿ ಗೆಲುವು ಸಾಧಿಸಿದೆ .ಇದರಿಂದಾಗಿ ಮಂಡ್ಯ ಉಸ್ತುವಾರಿ ಸಚಿವ ಚೆಲುವರಾಯಸ್ವಾಮಿಗೆ ಭಾರಿ ಮುಖ ಮುಖಭಂಗ ಉಂಟಾಗಿದೆ.

RELATED ARTICLES
- Advertisment -
Google search engine

Most Popular