ಮೈಸೂರು: ಪ್ರಸ್ತುತ ಸಮಾಜದಲ್ಲಿ ಬಹಳಷ್ಟು ಗಂಭೀರ ಸಮಸ್ಯೆಗಳು ಎದುರಾಗುತ್ತಿವೆ. ಇದಕ್ಕೆ ಬಲಿಯಾಗುತ್ತಿರುವವರಲ್ಲಿ ವಿದ್ಯಾರ್ಥಿಗಳ ಸಂಖ್ಯೆಅತಿ ಹೆಚ್ಚು ಎಂದು ಸಿಸಿಬಿಯ ಸಹಾಯಕ ಪೊಲೀಸ್ ಆಯುಕ್ತಎಸ್.ಎನ್. ಸಂದೇಶ್‌ಕುಮಾರ್ ತಿಳಿಸಿದರು.
ಎಸ್‌ಬಿಆರ್‌ಆರ್ ಮಹಾಜನ ಪ್ರಥಮದರ್ಜೆಕಾಲೇಜಿನ ೨೦೨೩-೨೪ನೇ ಸಾಲಿನ ಪೋಷಕರ ಸಮಾವೇಶದಲ್ಲಿ ಉದ್ಘಾಟಿಸಿ ಮಾತನಾಡಿದಅವರು, ಇದಕ್ಕೆಕಾರಣಏನೆಂದು ಹುಡುಕಿದಾಗ ಪೋಷಕರಅತಿಯಾದ ಕಾಳಜಿ ಮತ್ತು ನಿರ್ಲಕ್ಷ್ಯವೇಕಾರಣ. ಪ್ರತಿಯೊಬ್ಬ ತಂದೆ ತಾಯಿಗೂತಮ್ಮ ಮಕ್ಕಳು ತಮ್ಮ ಹಾಗೇ ಜೀವನದಲ್ಲಿ ಕಷ್ಟ ಪಡದೇ ಸುಖವಾಗಿರಬೇಕು ಎಂಬ ಆಶಯವಿರುತ್ತದೆ. ಆದರೆ ವಿದ್ಯಾರ್ಥಿಜೀವನವೇಒಂದು ತಪ್ಪಸಿನಂತೆ, ಕಷ್ಟಪಟ್ಟುಓದಿದಾಗ ಮಾತ್ರಜೀವನದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯಶಸ್ಸನ್ನು ಗಳಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಯ ಬೆಳವಣಿಗೆಯೊಟ್ಟಿಗೆ ಕಾಲೇಜು, ಆಡಳಿತ ಮಂಡಳಿ, ಅಧ್ಯಾಪಕರು ಮತ್ತು ಪೋಷಕರಾದ ನಾವು ಸದಾಜೊತೆಗಿರುವ ಕೆಲಸ ಮಾಡಬೇಕಾಗುತ್ತದೆ. ಮಕ್ಕಳನ್ನು ಮುದ್ದಾಗಿ ಸಾಕುವುದಷ್ಟೇಅಲ್ಲದೆತಪ್ಪು ಮಾಡಿದಾಗ ದಂಡಿಸಿ ಸರಿದಾರಿಗೆತರುವಜವಾಬ್ದಾರಿ ನಮ್ಮದಾಗಿರುತ್ತದೆಎಂದರು.
ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳನ್ನು ಉತ್ತಮ ಅಂಕಗಳಿಸಲು ಸಜ್ಜುಗೊಳಿಸುವುದರೊಂದಿಗೆ ಅವರಲ್ಲಿ ನಮ್ಮ ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಕೆಲಸವನ್ನು ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಮಹಾಜನಕಾಲೇಜು ವಿದ್ಯಾರ್ಥಿಗಳನ್ನು ಕಲೆ, ಸಾಹಿತ್ಯ, ಕ್ರೀಡೆ ಮತ್ತುಇನ್ನಿತರ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸುವುದರೊಂದಿಗೆ ವಿದ್ಯಾರ್ಥಿಗಳನ್ನು ಸಂಸ್ಕೃತಿ ಸಂಪನ್ನರನ್ನಾಗಿರೂಪಿಸುತ್ತಿರುವುದು ನಿಜಕ್ಕೂ ಶ್ಲಾಘನೀಯಎಂದು ನುಡಿದರು.
ಮಹಾಜನ ವಿದ್ಯಾಸಂಸ್ಥೆಯಗೌರವ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮಿ ಮುರಳೀಧರ್ ಮಾತನಾಡಿ, ನಮ್ಮ ಸಂಸ್ಥೆ ಸ್ವಾಯತ್ತತೆ ಪಡೆದು ನ್ಯಾಕ್‌ನಿಂದ ಎ ಮಾನ್ಯತೆ ಪಡೆದಿದೆ. ಕಾಲೇಜು ಶಿಕ್ಷಣದ ಪಾವಿತ್ರ್ಯತೆ ಉಳಿಸಿಕೊಂಡು ಮೌಲ್ಯಾಧಾರಿತ ಹಾಗೂ ಕೌಶಲ್ಯಾಧಾರಿತ ಶಿಕ್ಷಣಕ್ಕೆ ಆದ್ಯತೆಕೊಡುತ್ತಿದೆ. ಪೋಷಕರು ಮಕ್ಕಳ ಮನಸ್ಸನ್ನುಅರಿತು ಸ್ನೇಹಿತರಂತೆ ವರ್ತಿಸಿ, ಮಕ್ಕಳು ಕ್ರೀಯಾಶೀಲರಾಗುವತ್ತ ಪ್ರೋತ್ಸಾಹ ನೀಡಬೇಕೆಂದು ಪೋಷಕರು ಹಾಗೂ ಮಕ್ಕಳಿಗೆ ಶುಭಕೋರಿದರು.
ಪೋಷಕರ ಸಂಘದಅಧ್ಯಕ್ಷೆ ಸುಮಲತಾ.ಪಿ ಮಾತನಾಡಿ, ಕಳೆದ ಒಂದು ವರ್ಷದಿಂದ ಮಹಾಜನಕಾಲೇಜಿನಎಲ್ಲಾಕಾರ್ಯ ಚಟುವಟಿಕೆಗಳನ್ನು ನಾನು ಗಮನಿಸಿದ್ದೇನೆ. ನನ್ನ ಮಗಳನ್ನು ಉತ್ತಮಕಾಲೇಜಿಗೆ ಸೇರಿಸಿದ್ದೇನೆ ಎಂಬ ಹೆಮ್ಮೆ ನನಗಿದೆ. ಸ್ವತಃ ಶಿಲ್ಪಿಯಾದ ನಾನು ಕಲೆಯನ್ನು ಸೃಷ್ಟಿಸಲು ಉತ್ತಮ ಕಲ್ಲುಗಳನ್ನು ಆಯ್ಕೆ ಮಾಡಿಕೊಳ್ಳುತ್ತೇನೆ. ಆದರೆಇಲ್ಲಿರುವಅಧ್ಯಾಪಕ ಶಿಲ್ಪಿಗಳು ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನೂ ಸಹ ಉತ್ತಮ ಪ್ರಜೆಗಳನ್ನಾಗಿ ರೂಪಿಸುತ್ತಿದ್ದಾರೆ. ಕಳೆದ ವರ್ಷಕಾಲೇಜಿನಲ್ಲಿ ನಡೆದಉದ್ಯೋಗ ಮೇಳದಲ್ಲಿ ಸುಮಾರು ೧೮೦ ವಿದ್ಯಾರ್ಥಿಗಳು ಪ್ರತಿಷ್ಠಿತ ಕಂಪನಿಗಳಲ್ಲಿ ಕೆಲಸವನ್ನು ಪಡೆದುಕೊಂಡಿದ್ದಾರೆ, ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡುತ್ತಿದೆಎಂದು ಹೇಳಿದರು.
ಇದೇ ವೇಳೆ ಪೋಷಕರಕಾರ್ಯಕಾರಿ ಮಂಡಳಿಯ ೨೦೨೩-೨೪ನೇ ಸಾಲಿಗೆ ಅಧ್ಯಕ್ಷರಾಗಿರಂಗರಾಮು, ಕಾರ್ಯದರ್ಶಿಯಾಗಿ ಸತ್ಯಪ್ರಕಾಶ್ ಹಾಗೂ ಸದಸ್ಯರುಗಳಾಗಿ ನವ್ಯಶ್ರೀ, ಸವಿತಾ, ಭಾರತಿ, ರುದ್ರೇಗೌಡ, ಕರಿಬಸಪ್ಪಆಯ್ಕೆಗೊಂಡರು.
ಕಾರ್ಯಕ್ರಮದಲ್ಲಿ ಪೋಷಕರ ಸಂಘದ ಕಾರ್ಯದರ್ಶಿ ವಿನುತಾ, ರೂಪಶ್ರೀ, ಮಹಾಜನ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯರುಗಳು ಮತ್ತುಅಧ್ಯಾಪಕರು, ಅಧ್ಯಾಪಕೇತರರು, ಪೋಷಕರು ಮತ್ತು ಸ್ವಯಂ ಸೇವಕರು, ವಿದ್ಯಾರ್ಥಿಗಳು ಹಾಜರಿದ್ದರು.