ವರದಿ: ವಿನಯ್ ದೊಡ್ಡಕೊಪ್ಪಲು
ಕೆ.ಆರ್.ನಗರ : ಪ್ರತಿಯೊಬ್ಬರೂ ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಬೇಕು ಎಂದು ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಎಂ.ಜಯಸ್ವಾಮಿ ಹೇಳಿದರು.
ಸಾಲಿಗ್ರಾಮ ತಾಲೂಕಿನ ಕಾಳಮ್ಮನ ಕೊಪ್ಪಲು ಗ್ರಾಮದಲ್ಲಿ ಆಯೋಜಿಸಿದ್ದ ವಿವಿಧ ಸಾಧಕರುಗಳಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿರುವ ಮಕ್ಕಳು ಪ್ರಸ್ತುತ ದಿನಗಳಲ್ಲಿ ನಗರ ಪ್ರದೇಶದಲ್ಲಿ ವ್ಯಾಸಂಗ ಮಾಡುವ ಮಕ್ಕಳಿಗೆ ತೀವ್ರ ಪೈಪೋಟಿ ನೀಡುವ ಮೂಲಕ ಉತ್ತಮ ವ್ಯಾಸಂಗ ಮಾಡುತ್ತಿದ್ದಾರೆ.
ಗ್ರಾಮದಲ್ಲಿ ಪ್ರತಿ ವರ್ಷವೂ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ಸೇವೆಯನ್ನು ಸಲ್ಲಿಸುತ್ತಿರುವವರನ್ನು ಸನ್ಮಾನಿಸುವ ಮೂಲಕ ಅವರಿಗೆ ಮತ್ತಷ್ಟು ಉತ್ತೇಜನ ನೀಡಬೇಕು ಎಂದರು.
ವಿದ್ಯಾರ್ಥಿಗಳು ತಮ್ಮ ಕಲಿಕಾ ಅವಧಿಯಲ್ಲಿ ಶ್ರದ್ಧೆಯಿಂದ ಓದುವ ಮೂಲಕ ಉನ್ನತ ಸ್ಥಾನಮಾನಗಳನ್ನು ಅಲಂಕರಿಸುವುದರೊಂದಿಗೆ ತಮಗೆ ಕಲಿಸಿದ ಗುರುಗಳು, ಹೆತ್ತವರು, ಕಲಿತ ಶಾಲೆ ಹಾಗೂ ಹುಟ್ಟಿದ ಊರಿಗೆ ಕೀರ್ತಿಯನ್ನು ತರಬೇಕು ಎಂದರು.
ಗ್ರಾಮಗಳಲ್ಲಿ ಎಲ್ಲರೂ ಒಟ್ಟಾಗಿ ಸೇರಿ ಗ್ರಾಮ ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು, ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ದಾಸರಾಗದೆ ಉತ್ತಮ ಆರೋಗ್ಯವನ್ನು ಹೊಂದುವ ಮೂಲಕ ಸಮಾಜದಲ್ಲಿ ಒಳ್ಳೆಯ ನಾಗರಿಕರಾಗಿ ಬದುಕನ್ನು ನಡೆಸಬೇಕು ಎಂದರು.
ಗ್ರಾಮದಲ್ಲಿನ ಶಕ್ತಿ ದೇವತೆ ಶ್ರೀ ಕಾಳಮ್ಮ ತಾಯಿ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ನಮ್ಮ ಕುಟುಂಬದಿಂದ 50,000 ರೂ ನೆರವು ನೀಡಲಾಗುವುದು ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಂ.ಜಯಸ್ವಾಮಿ, ಮುರಳಿಧರ, ಪತ್ರಕರ್ತ ಕೆ.ಟಿ.ಮೋಹನ್ ಕುಮಾರ್, ಕೆ ಎಸ್ ಆರ್ ಟಿ ಸಿ ಇನ್ಸ್ಪೆಕ್ಟರ್ ಎಂ.ಸುರೇಶ್, ಪ್ರತಿಭಾವಂತ ವಿದ್ಯಾರ್ಥಿಗಳಾದ ಪಾರ್ತೆಶ್, ಸಹನಾ, ಪ್ರಜ್ವಲ್, ಶಾಲಿನಿ, ಪ್ರಿಯಾಂಕ, ಸ್ಪೂರ್ತಿ, ಪ್ರೀತಮ್ ಹಾಗೂ ಉತ್ತಮ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು.
ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯ ಡಿ.ಕೃಷ್ಣ, ಮಾಜಿ ಉಪಾಧ್ಯಕ್ಷ ಕೋಮಲಾಚಾರಿ, ಮಾಜಿ ಸದಸ್ಯರಾದ ಬಲರಾಮ್, ಮರಿಗೌಡ, ವಿ ಎಸ್ ಎಸ್ ಬಿ ಎನ್ ನಿರ್ದೇಶಕ ಲೋಕೇಶನಾಯಕ, ಮಾಜಿ ನಿರ್ದೇಶಕ ಕರೀಗೌಡ, ಶಿಕ್ಷಕ ಕೆ.ಸಿ.ಕೃಷ್ಣೆಗೌಡ, ಮುಖಂಡರುಗಳಾದ ಜ.ರಂಗೇಗೌಡ, ಯು.ಮಲ್ಲೇಶ್, ಕೆ.ಮಹದೇವ, ರಂಗೇಗೌಡ, ಬಿಳಿಯಪ್ಪ, ಕೆ.ಶಿವಣ್ಣ, ಕೆ.ಸಿ.ಸುಬ್ಬೆಗೌಡ, ನಾಗರಾಜು, ಸಿ.ಸ್ವಾಮಿ, ಕೆ.ಕೆ.ರಾಜನಾಯಕ, ಕೆ.ಟಿ.ಕುಮಾರ, ಕೆ.ರಂಗೇಗೌಡ, ಜವರೇಗೌಡ, ಜವರಪ್ಪ, ಲೊಕೇಶಚಾರಿ, ಕುಮಾರ್, ಚಂದ್ರಚಾರಿ, ಹೋಟೆಲ್ ಮಂಜುನಾಥ್, ಟೈಲರ್ ನಾಗರಾಜ, ಮಹೇಂದ್ರ, ಹರೀಶ್, ಮುರಳಿ, ಸ್ವಾಮಿಗೌಡ, ಚಿಕ್ಕನಾಯಕ ಸೇರಿದಂತೆ ಹಲವರು ಇದ್ದರು.