Sunday, April 20, 2025
Google search engine

Homeಸ್ಥಳೀಯಎಲ್ಲರಿಗೂ ಜೀವರಕ್ಷಣೆ ಅರಿವು ಮೂಡಿಸಿ

ಎಲ್ಲರಿಗೂ ಜೀವರಕ್ಷಣೆ ಅರಿವು ಮೂಡಿಸಿ


ಮೈಸೂರು: ಪ್ರತಿಯೊಬ್ಬ ನಾಗರಿಕರಿಗೂ ತುರ್ತುಪರಿಸ್ಥಿತಿಯಲ್ಲಿ ಜೀವರಕ್ಷಣೆ ಮಾಡುವ ತರಬೇತಿಯ ಅಗತ್ಯವಿದ್ದು, ಶಾಲಾ ಮಕ್ಕಳಲ್ಲಿಯೂ ಅರಿವನ್ನು ಮೂಡಿಸುವ ವಿಜ್ಞಾನ ಪಠ್ಯದಲ್ಲಿ ಸೇರಿಸಲು ಸರ್ಕಾರದ ಗಮನಕ್ಕೆ ತರುವುದಾಗಿ ರಾಜ್ಯಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಪ್ರೊ.ಎಲ್.ಶ್ರೀನಿವಾಸ್ ತಿಳಿಸಿದರು.
ನಗರದ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್‌ನ ಜೀವರಕ್ಷಕ ಟ್ರಸ್ಟ್, ರೋಟರಿ ವತಿಯಿಂದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಆಶ್ರಯ ಶಾಲೆಗಳಲ್ಲಿನ ಮುಖ್ಯಶಿಕ್ಷಕರು, ಶಿಕ್ಷರು, ನಿಲಯಪಾಲಕರು ಹಾಗೂ ಅಧಿಕಾರಿಗಳಿಗೆ ಜೀವ ಸುರಕ್ಷತೆಗೆ ಅಗತ್ಯ ಮೂಲಭೂತ ಜ್ಞಾನ ಕುರಿತು ನಡೆದ ೩ ದಿನಗಳ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಆದಿವಾಸಿಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ. ನಾವು ಯಾವುದೇ ಕಾರ್ಯಕ್ರಮ ಮಾಡಿದರು ಬುಡಕಟ್ಟು ಜನರಿಗೆ ತಲುಪಬೇಕು. ಆ ನಿಟ್ಟಿನಲ್ಲಿ ನಮ್ಮ ನಡೆ-ಹಾಡಿಯ ಕಡೆ ಇದ್ದೇ ಇದೆ. ಕಾಡಂಚಿನಲ್ಲಿರುವ ಆದಿವಾಸಿಗಳಿಗೆ ಅರಣ್ಯಹಕ್ಕು ಕಾಯ್ದೆ ಬಗ್ಗೆ ಶಿಕ್ಷಕರು ಅರಿವು ಮೂಡಿಸಬೇಕು. ಶಿಕ್ಷಕರು ಸರ್ಕಾರದ ಮೇಲೆ ಒತ್ತಡ ಹಾಕಿದರೆ ನಿಮ್ಮ ಬೇಡಿಕೆಯು ಈಡೇರುತ್ತದೆ. ಇದೇ ತಿಂಗಳು ೨೬ನೇ ತಾರೀಖಿನಿಂದ ಆಶ್ರಮ ಶಾಲೆಗಳ ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.
ನೀವು ಕಲಿತದ್ದನ್ನು ನಿಮ್ಮ ನಿಮ್ಮ ಶಾಲೆಗಳಲ್ಲಿ ಹಾಡಿಗಳಲ್ಲಿನ ಜನರಿಗೆ ತಿಳಿಸಿ ಅರಿವು ಮೂಡಿಸಿರಿ ನೀವೆಲ್ಲರು ಸಹಕಾರ ನೀಡಿದರೆ ಇನ್ನು ಹೆಚ್ಚಿನ ಕಾರ್ಯಕ್ರಮಗಳನ್ನು ಹಾಡಿ ಜನರಿಗೆ ಮಾಡೋಣ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ಉಪನಿರ್ದೇಶಕಿ ಬಿ.ಎಸ್.ಪ್ರಭಾ ಅರಸ್, ಡಾ.ರೇಖಾ, ಡಾ.ಸುಮಂತ್, ಡಾ.ದಾಕ್ಷಾಯಿಣಿ, ಡಾ.ರಮೇಶ್ ಬಿ.ಗಣಿ, ತಾಲೂಕು ಕಲ್ಯಾಣಾಧಿಕಾರಿ ಎಚ್.ಸಿ.ಬಸವರಾಜು, ಎಂ.ನಾರಾಯಣಸ್ವಾಮಿ, ಮಹ್ಮದ್ ಶಫೀರ್, ಸತ್ಯರಾಜ್, ದಿವ್ಯಾ, ವಿದ್ಯಾಶ್ರೀ, ನಂದಿನಿ, ಪ್ರತೀಕ್ಷಾ, ಅನಿಲ್‌ಕುಮಾರ್, ಕೃಷ್ಣ, ದೇವರಾಜ್ ಇದ್ದರು.

RELATED ARTICLES
- Advertisment -
Google search engine

Most Popular