ಹುಣಸೂರು: ಪ್ರಾರಂಭದಲ್ಲಿ ಯಾರೂ ಮದ್ಯಪಾನಕ್ಕೆ ದಾಸರಾಗಿರುವುದಿಲ್ಲ. ದುಷ್ಟರ ಸಹವಾಸದಿಂದ ಕಾಲಕ್ರಮೇಣ ತಮ್ಮತನ ಮರೆತು ಮದ್ಯವ್ಯಸನಿಯಾಗುತ್ತಾರೆ ಎಂದು ಧರ್ಮಸ್ಥಳದ ಜಿಲ್ಲಾ ಸಮಿತಿ ನಿರ್ದೇಶಕ ಮುರುಳಿಧರ್ ತಿಳಿಸಿದರು.
ತಾಲೂಕಿನ ಬಿಳಿಕೆರೆಯ ನಂಜುಂಡೇಶ್ವರ ಕಲ್ಯಾಣ ಮಂಟಪದಲ್ಲಿ ಒಂದು ವಾರಗಳ ಕಾಲ ಹಮ್ಮಿಕೊಂಡಿರುವ ಮದ್ಯವರ್ಜನಾ ಶಿಬಿರದಲ್ಲಿ ಶ್ರೀ ಧರ್ಮಸ್ಥಳ ಯೋಜನಾ ಸಂಸ್ಥೆ ಹಾಗೂ ಹಲವು ಸಂಸ್ಥಗಳ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮದ್ಯಪಾನಕ್ಕೆ ಒಮ್ಮೆ ನಾವು ದಾಸರಾದರೆ, ನಾವೇ ಬಿಡಬೇಕು ಎಂದರು ಬಿಡಲು ಸಾಧ್ಯವಿಲ್ಲ. ಆದ್ದರಿಂದ ಅರಿವು ಪಡೆಯುವ ಅಗತ್ಯವಿದೆ ಎಂದರು.
ಶ್ರೀ ಕ್ಷೇತ್ರದ ಧರ್ಮ ಗುರು ವೀರೇಂದ್ರ ಹೆಗ್ಗಡೆ ಯವರು ಹಲವಾರು ವರ್ಷಗಳ ಹಿಂದೆ ಮದ್ಯಪಾನ ಪರಿವರ್ತನೆಗೆ ಪಣ ತೊಟ್ಟಿದ ಕಾರಣ ಅಂದು ಎಷ್ಟೋ ಕುಟುಂಬಗಳು ಬೀದಿಗೆ ಬಂದದ್ದನ್ನು ಮನಗೊಂಡು ಇಲ್ಲಿಯವರೆಗೆ ನಾಡಿನಾದ್ಯಂತ 1878 ಉಚಿತ ಶಿಬಿರಗಳನ್ನು ನಡೆಸಿ ಸುಮಾರು ಎರಡು ಲಕ್ಷ ಕುಟುಂಬಗಳ ಕಣ್ಣು ವರೆಸುವ ಪಣ್ಯದ ಕೆಲಸಮಾಡಿದ್ದಾರೆ ಎಂದರು.
ಮದ್ಯಾಪಾನ ವ್ಯಸನ ಅಮಿತಿ ಅಧ್ಯಕ್ಷ ಬಿಳಿಕೆರೆ ಪ್ರಸನ್ನ ಮಾತನಾಡಿ, ಕುಡಿಯುವುದೇ ಜೀವನವಾಗಬಾರದು. ನಿಮ್ಮನ್ನ ನಂಬಿ ನಿಮ್ಮ ತಂದೆ, ತಾಯಿ, ಹೆಂಡಿತಿ, ಮಕ್ಕಳು ಇರುತ್ತಾರೆ. ಕುಡಿತ ಚಟಕ್ಕೆ ನೀವು ಬಲಿಯಾಗಿ, ಕುಟುಂಬನ್ನು ಬೀದಿಗೆ ನೂಕದೇ ಇಂತಹ ಶಿಬಿರಗಳನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಮನವಿ ಮಾಡಿದರು.
ಜಿಲ್ಲಾ ಸಮಿತಿ ನಿರ್ದೇಶಕ ಮಾದವ ಮಾತನಾಡಿ, ಕುಡಿತದ ಒಂದೇ ಕಾರಣಕ್ಕೆ ನೀವು ಸಮಾದ ದೃಷ್ಠಿಯಲ್ಲಿ, ಕೆಟ್ಟವರಾಗಿದ್ದೀರಿ. ಅದನ್ನೇ ಹಾಸುಹೊಕ್ಕಾಗಿ ಸ್ವೀಕರಿಸಿ ಮನೆಮಂದಿಯಲ್ಲರನ್ನು ಗೌರವಿಸದೆ ಹೆಂಡತಿ, ಮಕ್ಕಳನ್ನು ಹಿಂಸೆಸುವುದರಿಂದ. ನಿಮ್ಮ ಕುಟುಂಬದ ನೆಮ್ಮದಿಯನ್ನು ನೀವೇ ಕಿತ್ತುಕೊಂಡಿದ್ದರೀ ಇದರಿಂದ ಹೊರಬನ್ನಿ ಎಂದರು.
ಕಾರ್ಯಕ್ರಮದಲ್ಲಿ ಡಾ.ಉಮೇಶ್, ಶ್ರೀ ಧರ್ಮಸ್ಥಳ ತಾಲೂಕು ಯೋಜನಾಧಿಕಾರಿ ಧನಂಜಯ್, ಜಿಲ್ಲಾ ಸಮಿತಿ ನಿರ್ದೇಶಕ ಹಂದನಹಳ್ಳಿ ಸೋಮಶೇಖರ್, ಗದ್ದಿಗೆ ದೇವರಾಜ್, ತಾಲೂಕು ಸಮಿತಿಯ ಬನ್ನಿ ಕುಪ್ಪೆ ಉಮೇಶ್, ಕಿರಣ್ ಕುಮಾರ್, ಸಮಿತಿಯ ಕೃಷ್ಣೇಗೌಡ, ಗ್ರಾಪಂ ಅಧ್ಯಕ್ಷೆ ಶೃತಿ, ಉಪಾಧ್ಯಕ್ಷೆ ಶೈಲಜಾ, ಹಾಗೂ ವೀಣಾ, ಕಿರಣ್ ಇದ್ದರು.