ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಮಕ್ಕಳಿಗೆ ಪುರಸ್ಕಾರ
ಹುಣಸೂರು: ಸಮಾಜದ ಏಳಿಗೆಯಾಗಬೇಕಾದರೆ ನಿಮ್ಮಂತಹ ವಿದ್ಯಾರ್ಥಿಗಳು ಮನಸ್ಸಿಟ್ಟು ಓದುವ ಪ್ರತಿಭಾವಂತರಾಗಿ ರೂಪಗೊಳ್ಳಬೇಕು ಎಂದು ಶಾಸಕ ಜಿ.ಡಿ. ಹರೀಶ್ ಗೌಡ ಮಕ್ಕಳಿಗೆ ಕಿವಿಮಾತು ಹೇಳಿದರು.
ನಗರದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡರ 515ನೇ ಜಯಂತಿ ಹಾಗೂ ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಣದಲ್ಲಿ ಹೆಚ್.ಎನ್.ಗಿರೀಶ್, ಯುಪಿಎಸ್ಸಿಯಂತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಲೇಖನ್, ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡೆಯಲ್ಲಿ ಪ್ರೇಮ್ ಕುಮಾರ್ ಅವರು ಮೂರು ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಸಮುದಾಯಕ್ಕೆ ಮತ್ತು ತಾಲೂಕಿಗೆ ಕೀರ್ತಿ ತಂದಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.
ನಾಡಪ್ರಭು ಕೆಂಪೇಗೌಡರು ಎಲ್ಲಾ ಸಮುದಾಯದ ಬದುಕಿಗೆ ನೆರವಾಗಲು ಅಂದು ಪೇಟೆಗಳ ನಿರ್ಮಿಸಿ ನಾಲ್ಕು ಶತಮಾನಕಳೆದರೂ ಇಂದಿಗೂ ಮನೆಮಾತಾಗಿದ್ದಾರೆ. ಅದೇ ರೀತಿ ತಾಲೂಕಿನ ಜನತೆ ನನ್ನ ಕೈಹಿಡಿದು ಮುನ್ನೆಡಸಿ ಹರಸಿದ್ದಾರೆ. ಆದ್ದರಿಂದ ನಿಮ್ಮ ಋಣವನ್ನು ಈ ಜನ್ಮದಲ್ಲಿ ತೀರಿಸಲಾರೆ ಎಂದರು.
ಪ್ರಧಾನ ಭಾಷಣಕಾರರಾಗಿ ನಿವೃತ್ತ ಪ್ರಾಂಶುಪಾಲ ಸಿದ್ದರಾಮೇಗೌಡ ಮಾತನಾಡಿ, ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯ ಹರಿಕಾರ. ಅವರ ಆಳ್ವಿಕೆಯಲ್ಲಿ ಸಮಾಜದ ಪ್ರತಿಯೊಬ್ಬ ನಾಗರೀಕರಿಗೆ ಸಮಾನತೆ ನೀಡಿದ ಮಹಾನಾಯಕ ನಾಡಭ್ರಭು ಕೆಂಪೇಗೌಡರು ಎಂದರು.
ಬಾಲ್ಯದಲ್ಲೇ ಉತ್ತಮ ನಾಯಕತ್ವ ಗುಣ ಹೊಂದಿದ್ದ ಅವರು ಬೆಂದಕಾಳೂರಿನ ನಾಲ್ಕು ದಿಕ್ಕುಗಳಿಗೂ ಗೋಪರ ನಿರ್ಮಿಸಿ ಚೌಕಟ್ಟು ಹಾಕಿದ ಬೆಂಗಳೂರು ಇಂದಿಗೂ ವಿಶ್ವ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ ಕೀರ್ತಿ ನಾಡಪ್ರಭು ಕೆಂಪೇಗೌಡರದು ಎಂದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಗಣೇಶ್ ಗೌಡ, 2009ರಿಂದಲೂ ಕೆಂಪೇಗೌಡರ ಜಯಂತಿ ಮತ್ತು ತಾಲೂಕಿನ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಗುತ್ತಿದೆ ಎಂದರು.
ದಿವ್ಯ ಸಾನಿಧ್ಯ ವಹಿಸಿ, ಆರ್ಶೀವಚನ ನೀಡದ ಆದಿಚುಂಚನಗಿರಿ ಮಠದ ಶ್ರೀ ಪುರುಷೋತ್ತಮ ನಂದನಾಥ ಸ್ವಾಮಿ, ನಾಡಿನ ಒಕ್ಕಲಿಗ ಸಮುದಾಯ ದೇಶ ಕಾಯುವ ಸೈನಿಕರಂತೆ ದೇಶಕ್ಕೆ ಅನ್ನ ನೀಡುವ ರೈತರ ಮಕ್ಕಳು ಐಎಎಸ್, ಐಪಿಎಸ್, ಕೆ ಎ ಎಸ್ ನಂತಹ ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಮೂಲಕ ದೇಶದ ಉನ್ನತ ಹದ್ದೆಗಳ ಅಲಂಕರಿಸಬೇಕೆಂದರು.
ಅದರಂತೆ 40 ವರ್ಷಗಳಿಂದಲೂ ಶ್ರೀ ಮಠ ನಮ್ಮ ಸಮುದಾಯ ಮತ್ತು ನಾಡಿನ ಎಲ್ಲಾ ಸಮುದಾಯದ ಹಿತವನ್ನು ಬಯಸಿ, ಶ್ರೀ ಬಾಲಗಂಗಾಧರ ನಾಥ ಸ್ವಾಮಿಗಳ ಆಶೀರ್ವಾದದಿಂದ ಅಕ್ಷರ, ಆರೋಗ್ಯ, ಅನ್ನ ದಾಸೋಹಕ್ಕೆ ಒತ್ತು ನೀಡುವ ಶ್ರೀ ಮಠ ಬಡವರ ಆಶಾಕಿರಣವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಯುಪಿಎಸ್ ಪಾಸಾದ ಲೇಖನ್ ಹಾಗೂ ಅಂತರಾಷ್ಟ್ರೀಯ ಥ್ರೋ ಬಾಲ್ ಕ್ರೀಡೆಗೆ ಆಯ್ಕೆಯಾಗುರುವ ಪ್ರೇಮ್ ಕುಮಾರ್ ಹಾಗೂ 98 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಎಸ್ .ಯೋಗಾನಂದ್ ಕುಮಾರ್, ತಾಲೂಕಿನ ಸೀತಾರಾಮು, ಬಿಳಿಕೆರೆ ಗೌರಿ ಶಂಕರ್, ಒಕ್ಕಲಿಗರ ಸಂಘದ ನಿರ್ದೇಶಕರಾದ ಬಾಲಕೃಷ್ಣ, ಸುರೇಶ್, ಡಾ.ಕೀರ್ತಿ ಕುಮಾರ್, ಚಿಕ್ಕಹುಣಸೂರು ಗೋವಿಂದೇಗೌಡ, ರಾಮಕೃಷ್ಣೇಗೌಡ, ಅಣ್ಣಯ್ಯ, ಉದಯ ರಾಯನಹಳ್ಳಿ, ಸತೀಶ್ ಪಾಪಣ್ಣ, ಬಿಳಿಕೆರೆ ಪ್ರಸನ್ನ, ಸುನಿತಾ ಜಯರಾಮೇಗೌಡ, ರುದ್ರೇಗೌಡ, ಚಂದ್ರೇಗೌಡ ಇನ್ನು ಮುಂತಾದವರು ಇದ್ದರು.