ಬೆಂಗಳೂರು: ಅಧಿಕಾರಿಗಳ ಜೊತೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಸಭೆ ನಡೆಸಿದ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಏನೇ ಸೂಚನೆ ಇದ್ದರೂ ಕಾಂಗ್ರೆಸ್ ಕಚೇರಿ ಒಳಗೆ ಇರಲಿ. ಸರ್ಕಾರಿ ಅಧಿಕಾರಿಗಳ ಜೊತೆ ಕೂತು ಸೂಚನೆ ನೀಡೋದು ಸರಿಯಲ್ಲ. ಹಾಗಾದ್ರೆ ಸುರ್ಜೇವಾಲರನ್ನ ಸಿಎಂ ಮಾಡಿಕೊಳ್ಳಿ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೆವಾಲಾ ಅವರಿಗೂ ರಾಜ್ಯದ ಜನತೆಗೂ ಸಂಬಂಧ ಇಲ್ಲ.ಸರ್ಕಾರದ ಅಧಿಕಾರಿಗಳ ಜೊತೆ ಸಭೆ ಮಾಡುವ ಯಾವುದೇ ಅಧಿಕಾರ ಇಲ್ಲ. ನಿನ್ನೆ ಅವರು ಸಭೆ ನಡೆಸುವ ಪೋಟೊ ಹೊರಬಂದಿದೆ. ಅವರ ಮಂತ್ರಿಗಳೇ ಅದನ್ನ ಹೊರಗೆ ಬಿಟ್ಟಿದ್ದಾರೆ. ಡಿಸಿಎಂ ಎಷ್ಟು ಸುಳ್ಳು ಹೇಳ್ತಾರೆ ಅನ್ನೊದಕ್ಕೆ ಇದೇ ಸಾಕ್ಷಿ ಎಂದು ಹೆಚ್.ಡಿಕೆ ಹರಿಹಾಯ್ದರು.