Thursday, April 17, 2025
Google search engine

Homeರಾಜ್ಯಸುದ್ದಿಜಾಲಯುವ ಜನತೆ ಸ್ವಾತಂತ್ರ್ಯ ಚಳುವಳಿಯ ಅರಿವು ಮೂಡಿಸಿಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ....

ಯುವ ಜನತೆ ಸ್ವಾತಂತ್ರ್ಯ ಚಳುವಳಿಯ ಅರಿವು ಮೂಡಿಸಿಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಿ: ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ. ಚಂದು

ಮದ್ದೂರು: ಭಾರತ ಸ್ವಾತಂತ್ರ್ಯ ಚಳುವಳಿಯಲ್ಲಿ ಕ್ವೀಟ್ ಇಂಡಿಯಾ ಚಳುವಳಿ ಒಂದು ಉಜ್ವಲವಾದ ಅಧ್ಯಾಯವಾಗಿದ್ದು ಇಂದಿನ ಯುವ ಜನತೆ ಸ್ವಾತಂತ್ರ್ಯ ಚಳುವಳಿಯ ಬಗ್ಗೆ ಅರಿವು ಮೂಡಿಸಿಕೊಂಡು ದೇಶಾಭಿಮಾನ ಬೆಳೆಸಿಕೊಳ್ಳಬೇಕೆಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ. ಚಂದು ಹೇಳಿದರು.
ಕ್ವೀಟ್ ಇಂಡಿಯಾ ಚಳುವಳಿಯ ಆಚರಣೆಯ ದಿನದಂದು ತಾಲ್ಲೂಕು ಆಡಳಿತ ವತಿಯಿಂದ ಅವರ ಸ್ವಗೃಹದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿ ಸ್ವಾತಂತ್ರ್ಯ ಚಳುವಳಿಯಲ್ಲಿ ದೇಶದ ಮಹಾತ್ಮ ಗಾಂಧೀಜಿಯವರ ನೇತೃತ್ವದಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಿದರ ಫಲವಾಗಿ ನಾವು ಸ್ವಾತಂತ್ರ್ಯಗೊಂಡೆವು ಎಂದು ಅವರು ಸ್ಮರಿಸಿದರು.
ಸ್ವಾತಂತ್ರ್ಯ ಪಡೆದು ಎಂಟು ದಶಕಗಳೆ ಸಮೀಪಿಸುತ್ತಿದ್ದರು ಇಂದು ಭಾರತವು ಅಪರಾದ, ಭ್ರಷ್ಟಚಾರ, ಹಿಂಸೆ, ಬಡತನ, ಅನಕ್ಷರತೆ, ನಿರುದ್ಯೋಗ, ಮೂಢನಂಬಿಕೆಯಂತಹ ಸಮಸ್ಯೆಗಳೊಂದಿಗೆ ಹೋರಾಡುತ್ತಿರುವುದು ವಿಪರ್ಯಸವಾಗಿದೆ ಎಂದ ಅವರು ಯುವಜನತೆ ಒಗ್ಗಟ್ಟಿನಿಂದ ಹೋರಾಡುವುದರ ಮೂಲಕ ಈ ಸಮಸ್ಯೆಗಳನ್ನು ಕೊನೆಗೊಳಿಸಿ ಭಾರತವನ್ನು ಉತ್ತಮ ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದು ಕಿವಿ ಮಾತು ಹೇಳಿದರು.
ತಾಲ್ಲೂಕು ಆಡಳಿತ ವತಿಯಿಂದ ಸನ್ಮಾನಿಸಿದ ಗ್ರೇಡ್-2 ತಹಶೀಲ್ದಾರು ಜಿ.ಎಂ.ಸೋಮಶೇಖರ್ ಮಾತನಾಡಿ ದೇಶವನ್ನ ಬ್ರಿಟೀಷರಿಂದ ಮುಕ್ತಗೊಳಿಸಲು ತಮ್ಮ ಪ್ರಾಣವನ್ನ ಪಣಕ್ಕಿಟ್ಟು ಹೋರಾಟ ಮಾಡಿದ ಮಹನೀಯರು ಹಾಗೂ ಮಹಿಳೆಯರನ್ನು ಸ್ಮರಿಸುತ್ತಾ ಗೌರವಿಸುವುದು ಪ್ರತಿಯೊಬ್ಬ ಭಾರತೀಯನ ಕೆಲಸವಾಗಿದೆ ಎಂದು ಹೇಳಿದರು.
ಕ್ವೀಟ್ ಇಂಡಿಯಾ ಚಳುವಳಿಯಲ್ಲಿ ಅಬಾಲ ವೃದ್ದರಿಂದಾಗಿ ಮಹಿಳೆಯರು ರಾಷ್ಟ್ರ,ರಾಜ್ಯ ಹಾಗೂ ಹಳ್ಳಿಗಳಲ್ಲಿ ಭಾಗವಹಿಸುವುದರ ಮೂಲಕ ಬ್ರಿಟೀಷರಿಗೆ ಮರೆಯಲಾಗದ ಪಾಠವನ್ನು ಕಲಿಸಿದ್ದು ಇಂದಿನ ಯುವಜನತೆ ಮಹನೀಯರುಗಳ ಬಗ್ಗೆ ಅಧ್ಯಾಯನ ಮಾಡುವ ಮೂಲಕ ಸಂಮೃದ್ಧ ಹಾಗೂ ಶಾಂತಿಯುತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕೆಂದರು.
ಈ ವೇಳೆ ಶ್ರೀಮತಿ ಶಾಂತ ಚಂದು, ಸಿ.ಅಪೂರ್ವಚಂದ್ರ, ಕಂದಾಯ ಇಲಾಖೆ ಅಧಿಕಾರಿಗಳಾದ ರವಿಶಂಕರ್, ನವೀನ್, ವೆಂಕಟೇಶ್, ಮಂಜುನಾಥ್, ಚಂದ್ರಶೇಖರ್, ಮಹೇಂದ್ರ ಸೇರಿದಂತೆ ಇತರರು ಹಾಜರಿದ್ದರು.

RELATED ARTICLES
- Advertisment -
Google search engine

Most Popular