Sunday, April 20, 2025
Google search engine

Homeರಾಜ್ಯಮಳವಳ್ಳಿ ರೈಲ್ವೆ ಮಾರ್ಗ ಶೀಘ್ರದಲ್ಲೇ ಪ್ರಾರಂಭ: ಮಾಜಿ ಶಾಸಕ ಡಾ.ಕೆ.ಅನ್ನದಾನಿ

ಮಳವಳ್ಳಿ ರೈಲ್ವೆ ಮಾರ್ಗ ಶೀಘ್ರದಲ್ಲೇ ಪ್ರಾರಂಭ: ಮಾಜಿ ಶಾಸಕ ಡಾ.ಕೆ.ಅನ್ನದಾನಿ

ಮಳವಳ್ಳಿ:  ಮಳವಳ್ಳಿ ರೈಲ್ವೆ ಮಾರ್ಗಕ್ಕೆ ಹೆಚ್ ಡಿ ಕುಮಾರಸ್ವಾಮಿ ಅವರಿಂದ ಕಾಯಕಲ್ಪ ದೊರೆತಿದ್ದು, ಮಳವಳ್ಳಿ ರೈಲ್ವೆ ಮಾರ್ಗ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ತಿಳಿಸಿದರು.

ಮಂಡ್ಯದಲ್ಲಿ ಮಾಜಿ ಶಾಸಕ ಡಾ.ಕೆ.ಅನ್ನದಾನಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, 1996-97ನೇ ಸಾಲಿನ ಬೆಂಗಳೂರು-ಸತ್ಯಮಂಗಲ ರೈಲ್ವೆ ಮಾರ್ಗ ಮಂಜೂರು ಮಾಡಲಾಗಿತ್ತು. ಯಾರೋಬ್ಬರು ಯಾವುದೇ ಪ್ರೋಗ್ರೇಸ್ ಮಾಡದೆ 30 ವರ್ಷ ಕಳೆದಿದೆ. ರೈಲ್ವೆ ಮಾರ್ಗ ಮಂಜೂರಾತಿ ಮಾಡಿದ್ದು ಹೆಚ್ ಡಿ ಕುಮಾರಸ್ವಾಮಿ. ಇದುವರೆಗೂ ಯಾವ ಸರ್ಕಾರ, ಸಂಸದರು ಕೂಡ ಇದರ ಬಗ್ಗೆ ಗಮನ ಹರಿಸಿಲ್ಲ. ಕುಮಾರಸ್ವಾಮಿ ಸಂಸದರಾದ ಮೇಲೆ ಮತ್ತೆ ಪ್ರಗತಿಗೆ ತಂದಿದ್ದಾರೆ ಎಂದರು.

ಕೆಂಗೇರಿ, ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಯಳಂದೂರು, ಚಾಮರಾಜನಗರ, ಸತ್ಯಮಂಗಲ ಮಾರ್ಗ. ಕುಮಾರಸ್ವಾಮಿ ಕೇಂದ್ರ ಸಚಿವರರಾದ ಬೆನ್ನಲ್ಲೆ ಮುನ್ನೆಲ್ಲೆಗೆ ತಂದಿದ್ದಾರೆ. ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಅವರ ಜೊತೆ ಚರ್ಚಿಸಿ ಕುಮಾರಸ್ವಾಮಿ ಪತ್ರ ಬರೆದಿದ್ದಾರೆ. ಮುಂದಿನ ಬಜೆಟ್ ನಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳುವ ಭರವಸೆ ಸಿಕ್ಕಿದೆ ಎಂದು ಹೇಳಿದರು.

ಸಂಸತ್ ಸದಸ್ಯರಾದ ಬಳಿಕ ರೈಲ್ವೆ ಕಾರ್ಯ ಪ್ರೋಗ್ರೇಸ್’ನಲ್ಲಿದೆ. ಕುಮಾರಸ್ವಾಮಿ ಅವರ ಮೇಲೆ ಹೆಚ್ಚು ನೀರಿಕ್ಷೆ ಇಟ್ಟು ಗೆಲ್ಲಿಸಿದ್ದಾರೆ. ಈ ಯೋಜನೆಯನ್ನ ಕುಮಾರಸ್ವಾಮಿ ಕಾಯಕಲ್ಪ ಮಾಡ್ತಾರೆ. ಕುಮಾರಸ್ವಾಮಿ ಅವರಿಗೆ ನಾನು ಪತ್ರ ಬರೆದಿದ್ದೇನೆ. ಈ ಕಾರ್ಯ ಯಶಸ್ವಿಯಾಗುತ್ತದೆ. ಮಳವಳ್ಳಿ ರೈಲ್ವೆ ಮಾರ್ಗ ತತ್‍ಕ್ಷಣ ಮಾಡಿಸಿ ಎಂದು ಕೇಂದ್ರ ಸಚಿವ  ಕುಮಾರಸ್ವಾಮಿ ಗೆ ಮಾಜಿ ಶಾಸಕ ಅನ್ನದಾನಿ ಮನವಿ ಮಾಡಿದರು.

ಕರ್ನಾಟಕ ಸರ್ಕಾರದಿಂದ 1732 ಎಕರೆ ಅಕ್ವೆರ್ ಅವಶ್ಯಕತೆ ಇದೆ. 1382 ಕೋಟಿ ಪ್ರಪೊಸಲ್ ಇದೆ. ಸತ್ಯಮಂಗಲ ಅರಣ್ಯ ಪ್ರದೇಶ ಹಿನ್ನಲೆ ತಡೆಯಾಜ್ಞೆ ಇತ್ತು. DPR ಮಾಡಲು ನಿರ್ದೇಶನ ಕೊಟ್ಟಿದ್ದಾರೆ. ಡಿ ಕೆ ಶಿವಕುಮಾರ್ ಅವರ ಕ್ಷೇತ್ರ ಕೂಡ ಇದೆ ಉಪಮುಖ್ಯಮಂತ್ರಿಗಳು ಸಹಕರಿಸಬೇಕು. ಲ್ಯಾಂಡ್ ಅಕ್ವೆಷನ್ ರಾಜ್ಯ ಸರ್ಕಾರ ಮಾಡಬೇಕು. ಮೈಸೂರು ಜಿಲ್ಲೆಯವರಾದ ಸಿದ್ದರಾಮಯ್ಯ ಅವರು ಕೂಡ ಸಹಕರಿಸಿ ಎಂದು ಕೋರಿದರು.

RELATED ARTICLES
- Advertisment -
Google search engine

Most Popular